Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವ್ಯವಸಾಯ ಮಾಡಲು ಅನುವು ಮಾಡಿಕೊಡಿ-ಲಕ್ಷ್ಮೀ ಗೌಡ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ಥಳೀಯ ಅಧಿಕಾರಿಗಳು ಉದ್ದೇಶಪೂರಕವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ವಸತಿ ಯೋಜನೆಯನ್ನು ರೂಪಿಸಿದ್ದು ಕೂಡಲೇ ಯೋಜನೆ ರದ್ದುಗೊಳಿಸಿ ಸದರಿ ಜಾಗದಲ್ಲಿ ರೈತರು ವ್ಯವಸಾಯ ಮಾಡಲು ಅನುವು ಮಾಡಿಕೊಡ ಬೇಕೆಂದು ಕೂಗೋನಹಳ್ಳಿ ಗ್ರಾಮದ ರೈತ ಲಕ್ಷ್ಮೀಗೌಡ ಒತ್ತಾಯಿಸಿದರು.


 ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಗೋನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 67ರ ಗೋಮಾಳ ಜಮೀನಿನಲ್ಲಿ ನಾವುಗಳು ಸುಮಾರು 25 ವರ್ಷಗಳಿಂದ ರಾಗಿ, ಜೋಳ, ಅವರೆ, ಇತ್ಯಾದಿ ಬೆಳೆಗಳನ್ನು ಬೆಳೆದುಕೊಂಡು ಬರುತ್ತಿದ್ದು ಫಾರಂ-57ರ ಅಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿಯನ್ನು ಸಹ ಸಲ್ಲಿಸಿರುತ್ತೇವೆ.

ಗ್ರಾಮ ಲೆಕ್ಕಾಧಿಕಾರಿ ಗಳು ರೆವಿನ್ಯೂ ಇನ್ಸ್‌ಪೆಕ್ಟರ್ ರವರು ಜಮೀನು ಸರ್ವೆ ಮಾಡಲು ಅನುಮತಿ ಪತ್ರವನ್ನು ನೀಡಿರುತ್ತಾರೆ.ಆದರೆ ನಮಗೆ ಗೊತ್ತಿಲ್ಲದೆ ನಮ್ಮ ಜಮೀನನ್ನು ರಾಜೀವ್ ಗಾಂಧಿ ವಸತಿ ಯೋಜನೆಗೆ ಪಹಣಿ ಮಾಡಲಾಗಿದೆ, ಆದರೆ ಈ ಜಮೀನಿನಲ್ಲಿ ಬೃಹತ್ ವಿದ್ಯುತ್ ತಂತಿಗಳು ಹಾಗೂ ಕಂಬ ಇರುವ ಕಾರಣ ಸದರಿ ಸ್ಥಳವು ಯಾವುದೇ ವಸತಿ ಯೋಜನೆಗೆ ಸೂಕ್ತವಲ್ಲದ ಜಮೀನು ಅಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ತಿಳಿಸಿದೆ ಎಂದರು.

ವಸತಿ ಯೋಜನೆಗೆ ಸೂಕ್ತವಲ್ಲದ ಜಮೀನಿ ನಲ್ಲಿ ನಾವು ವ್ಯವಸಾಯ ಮಾಡುತ್ತಿದ್ದು ಜಮೀನಿನಲ್ಲಿ ಬೃಹತ್ ವಿದ್ಯುತ್ ಲೈನ್ ಗಳು ಹಾಗೂ ಕಂಬವಿರುವುದರಿಂದ ಸದರಿ ಜಾಗವು ವಸತಿ ಯೋಜನೆಗೆ ಸೂಕ್ತ ವಾಗಿರುವುದಿಲ್ಲ, ವಿದ್ಯುತ್ ನಿಯಮ 2010ರ ಅನುಬಂದದ ಪ್ರಕಾರ ಪ್ರಸ್ತುತ ಓವರ್ ಹೆಡ್ ವಿದ್ಯುತ್ ತಂತಿಗಳ ಕೆಳಗೆ ಯಾವುದೇ ಕಟ್ಟಡ ಲೇಔಟ್,ಶಾಲೆಗಳು ದೇವಸ್ಥಾನಗಳು, ವಾಸಕ್ಕೆ ಸುರಕ್ಷಿತ  ಸ್ಥಳಗಳಾಗಿರುವುದಿಲ್ಲ.

ವ್ಯವಸಾಯವನ್ನು ಬಿಟ್ಟು ಯಾವುದೇ ರೀತಿಯ ಲೇಔಟ್ ವಸತಿ ಯೋಜನೆಗೆ ರೂಪಿಸಿದರೆ ಅದು ಕಾನೂನು ಬಾಹಿರ ವಾಗಿರುತ್ತದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ತಿಳಿಸಿದೆ, ನಾವು ವ್ಯವಸಾಯ ಮಾಡುತ್ತಿರುವ ಜಮೀನಿನಲ್ಲಿ ಯಾವುದೇ ರೀತಿಯ ಕಟ್ಟಡ ಲೇಔಟ್ ಮಾಡಲು ವಿದ್ಯುತ್ ಬೃಹತ್ ಲೈನ್‌ಗಳು ಮತ್ತು ಕಂಬವಿರುವುದರಿಂದ ವಸತಿ ಯೋಜನೆಗೆ ರೂಪಿಸಿರುವ ಯೋಜನೆಯನ್ನು ರದ್ದುಪಡಿಸ ಬೇಕು ಎಂದು ಒತ್ತಾಯಿಸಿದರು.

ನಾವು ಸ್ವಾಧೀನದಲ್ಲಿರುವ ಜಮೀನಿನ ಮೇಲೆ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ ಈ ಪ್ರಕರಣ ಬಾಕಿ ಇದ್ದರೂ ಸಹ ಸಾರ್ವಜನಿಕರಿಗೆ ನಿವೇಶನ ಹಂಚಲು ಸ್ಥಳೀಯ ಅಧಿಕಾರಿಗಳು ಹೊರಟಿದ್ದಾರೆ, ಸದರಿ ಜಮೀನಿನಲ್ಲಿ ನಾವು ವ್ಯವಸಾಯ ಮಾಡುತ್ತಿರುವುದನ್ನು ವಕ್ಕಲೆಬ್ಬಿಸದೆ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಯಾವುದೇ ನಿವೇಶನಗಳ ಹಂಚಿಕೆ ಚಟುವಟಿಕೆ ನಡೆಸದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ