Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸಲಗದ ಮದವನ್ನು ಗೆದ್ದ ನಾಯಕ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದುರ್ಗದ ಹುಲಿ. ಗಂಡುಗಲಿ ಎಂಬ ಬಿರುದಾಂಕಿತ ದೊರೆ ವೀರ ಮದಕರಿನಾಯಕನ  ಪುಣ್ಯತಿಥಿಯ ಈ ದಿನದಂದು ಗೌರವದ ನಮನಗಳನ್ನು ಅರ್ಪಿಸಿ ಅವರ ವಿಚಾರಗಳನ್ನು ನೆನೆಯುತ್ತೇನೆ.

 ಚಿತ್ರದುರ್ಗದ ಸಂಸ್ಥಾನದ ದೊರೆಗಳ ಇತಿಹಾಸ ಕರ್ನಾಟಕದ ಪಾರಂಪರಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಚಿತ್ರದುರ್ಗದ ಪಾಳೆಗಾರ ಆಳ್ವಿಕೆಯ ಕೊನೆಯ ದೊರೆ ರಾಜವೀರ ಮದಕರಿ ನಾಯಕ. ಈತನ ಆಳ್ವಿಕೆಯ ಇತಿಹಾಸದಲ್ಲಿ ಚಿಕ್ಕಮದಕರಿ, ಕೊನೇ ಮದಕರಿ, 5ನೇ ಮದಕರಿ, ವೀರಮದಕರಿ ಎಂದೆಲ್ಲಾ ಕರೆಯಲಾಗಿದೆ.   ಭರಮಪ್ಪ ನಾಯಕನ ಎರಡನೇ ಮಗ ಮದಕರಿ ನಾಯಕ.

1754 ರ ಸಮಯದಲ್ಲಿ ಚಿತ್ರದುರ್ಗ ಪಾಳೆಗಾರ ಆಳ್ವಿಕೆಯಲ್ಲಿದ್ದ ಕಸ್ತೂರಿ ರಂಗಪ್ಪ ನಾಯಕ ಮರಣ ಹೊಂದಿದ ಸಂದರ್ಭದಲ್ಲಿ ಮದಕರಿಯನ್ನು ಜಾನಕಲ್ ಊರಿನಿಂದ ಕರೆತಂದು ದುರ್ಗದಲ್ಲಿ ಪಟ್ಟಕಟ್ಟಿದ್ದಾರೆ ಎಂದು ಇತಿಹಾಸ ತಜ್ಞರ ಉಲ್ಲೇಖವಿದೆ. ಮದಕರಿಗೆ ಪಟ್ಟಾಭಿಷೇಕವಾದಗ ಕೇವಲ 12 ವರ್ಷದ ಬಾಲಕನಾಗಿದ್ದ.

ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಅನೇಕ ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲ ಹರಡಲು ಕಾರಣವಾಗುತ್ತದೆ ಈ ವಿಚಾರದಲ್ಲಿ ಚಿತ್ರದುರ್ಗ ಸಂಸ್ಥಾನದ ಕೀರ್ತಿ ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದೆ. ಪ್ರಮುಖವಾಗಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠ ಪೇಶ್ವೆಗಳೊಡನೆ ಈ ನಾಯಕನು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು

ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ-ಸಾಹಸಗಳನ್ನು ಪ್ರತಿಪಾದಿಸುತ್ತದೆ. ಮದಕರಿನಾಯಕನ ಬಹುಕಾಲ ಯುದ್ದಗಳು ಚಿತ್ರದುರ್ಗ  ಸಂಸ್ಥಾನವನ್ನು ಬಲಪಡಿಸುವಲ್ಲೀ ಯಶಸ್ಸು ಕಂಡಿದ್ದೆ ಚಿತ್ರದುರ್ಗ ಸಂಸ್ಥಾನದ ಆಡಳಿತವನ್ನು  ಸುಭೀಕ್ಷೆಯಿಂದ ಇಟ್ಟುಕೊಳ್ಳಲು ವೀರ ಮದಕರಿಯ ನಾಯಕತ್ವದ ಗುಣಗಳು ಮಹತ್ವದ ಪಾತ್ರವಹಿಸಿದ್ದು ವಿಶೇಷವಾದುದು.

ಮದಕರಿನಾಯಕ  ಸ್ವಾಭಿಮಾನಿಯಾಗಿ ಸಾಹಸಿಯಾಗಿ ಅವರ ನಿರ್ಭೀತಿಯ ನಾಯಕತ್ವದ ನಡೆಗಳು ದುರ್ಗದ ಮಣ್ಣಿಗೆ ಸಾಂಸ್ಕೃತಿಕ ಮಹತ್ವವನ್ನು ತಂದುಕೊಡುವಲ್ಲಿ ಯಶಸ್ವಿನ  ಪಾತ್ರವಹಿಸಿದ್ದವು.  ಕೊನೆಯಲ್ಲಿ ಹೈದರ್ ಹಾಲಿ ಕಣ್ಣು ದುರ್ಗದ ಮೇಲೆ ಬಿದ್ದು ಚಿತ್ರದುರ್ಗದ ಮೇಲೆ ದಂಡಯಾತ್ರೆ ಶುರುವಾಯಿತು.

ನಾಲ್ಕು ಬಾರಿ ದುರ್ಗದ ಮೇಲೆ ಯುದ್ಧ ಮಾಡಿದ. ಕೊನೆಯ ಯುದ್ಧ 1779 ರ ಫೆಬ್ರುವರಿಯಲ್ಲಿ ಪ್ರಾರಂಭವಾಗಿ ನಾಲ್ಕು ತಿಂಗಳುಗಳ ಕಾಲ ನಡೆದ ಯುದ್ದದಲ್ಲಿ ಇದೆ ಮೇ ತಿಂಗಳಲ್ಲಿ ದುರ್ಗದ ಹೋರಾಟ ಅಂತ್ಯವಾಯಿತು.  ಇದೇ ಮೇ15 ರಂದು  ವೀರ ಮದಕರಿ ಸ್ವರ್ಗದಿನರಾದರು ಎಂಬ ವಿಚಾರದಲ್ಲಿ ಇತಿಹಾಸ ಬರಹಗಳ ಉಲ್ಲೇಖವಿದೆ. ಇದು ಚಿತ್ರದುರ್ಗದ ಸಂಸ್ಕೃತಿಯ ಇತಿಹಾಸ ಎಂದು ರಘು ಗೌಡ ತಿಳಿಸಿದ್ದಾರೆ.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು