Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಷ್ಟ್ರೀಯ ವಿಪತ್ತು ಎಂದು ಘೋಷಣೆಗೆ ಪ್ರಧಾನ ಮಂತ್ರಿಗೆ ಪತ್ರ- ಡಾ.ಜಿ.ಪರಮೇಶ್ವರ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬರ ಘೋಷಣೆಯ 10 ನಿಯಮಗಳಲ್ಲಿ ಬದಲಾವಣೆ ತರಬೇಕು. ಎಲ್‍ನಿಯೋ ಭೀಕರ ಪರಿಣಾಮ ರಾಜ್ಯದ ಮೇಲೆ ಉಂಟಾಗಿದೆ. ಇದೇ ಪರಿಸ್ಥಿತಿ ದೇಶಾದ್ಯಂತ ಮುಂದುವರೆದಿದ್ದು, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಚಿತ್ರದುರ್ಗ ನಗರದ ಮರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

Advertisement

ರಾಜ್ಯಾದ್ಯಂತ ಮಳೆಯು ಮರೀಚಿಕೆಯಾಗಿದೆ. ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ತೀವ್ರ ತರನಾದ ಚರ್ಚೆಯಾಯಿತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಜೂನ್ ತಿಂಗಳ ಮುಂಗಾರು ಮಳೆ ಕೆಲವೆಡೆ ಮಾತ್ರ ಆಗಿದ್ದು, ಬೇರೆಯಡಿ ಮಳೆಯಾಗಿಲ್ಲ. ಜುಲೈ ತಿಂಗಳ ಅಂತ್ಯದ ವೇಳೆಗೆ ರಾಜ್ಯದಾದ್ಯಂತ ಶೇಕಡಾ 42 ಕ್ಕೂ ಹೆಚ್ಚು ಮಳೆ ಕೊರತೆ ಕಂಡುಬಂದಿದೆ. ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಚಿಕ್ಕಬಳ್ಳಾಪುರದಲ್ಲಿ ಶೇ. 2, ಕೋಲಾರದಲ್ಲಿ ಶೇ. 1.5 ರಿಂದ 2 ಹಾಗೂ ಚಿತ್ರದುರ್ಗದಲ್ಲಿ ಶೇ. 3 ರಿಂದ 12 ರಷ್ಟು ಮಾತ್ರ ಬಿತ್ತನೆಯಾಗಿದೆ. ಇಡೀ ರಾಜ್ಯದ ಸರಾಸರಿ ತೆಗೆದುಕೊಂಡರೆ ಕೇವಲ ಶೇ. 15 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಎಲ್ ನಿನೋ ಈ ಬಾರಿ ಮಳೆ ಕೊರತೆಗೆ 'ಎಲ್ ನಿನೋ' ಪ್ರಭಾವವೇ ಪ್ರಮುಖ ಕಾರಣ. ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ನೀರಿನ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್‍ನಷ್ಟು ಹೆಚ್ಚಾಗಿದೆ. ಇದರಿಂದಾಗಿ ನೈಸರ್ಗಿಕ ಸಾಂದ್ರೀಕರಣ (ಅoಟಿಜeಟಿsಚಿಣioಟಿ) ಪ್ರಕ್ರಿಯೆಗೆ ಅಡಚಣೆಯುಂಟಾಗಿ ಮಳೆ ಮೋಡಗಳು ರೂಪುಗೊಳ್ಳುತ್ತಿಲ್ಲ. ಈ ಬಾರಿಯ ತಾಪಮಾನ ಏರಿಕೆಯನ್ನು 'ಸೂಪರ್ ಎಲ್ ನಿನೋ' ಎಂದು ಕರೆಯಲಾಗಿದ್ದು, ಇದರಿಂದಾಗಿ ಜಾಗತಿಕ ಮಟ್ಟದಲ್ಲೂ ಹವಾಮಾನ ವೈಪರೀತ್ಯ ಉಂಟಾಗಿದೆ ಎಂದು ಅವರು ವಿವರಿಸಿದರು.

ವಿಭಾಗದ 9 ಜಿಲ್ಲೆಗಳಲ್ಲಿ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ 223 ಮಿ.ಮೀ ಗೆ ಬದಲಾಗಿ 141 ಮಿ.ಮೀ ಮಳೆ ಆಗಿದೆ. ಶೇ.37% ಕೊರತೆ ಕಂಡುಬಂದಿದೆ. ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದ್ದು, ಉಳಿದ 7 ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ತುಮಕೂರು ಜಿಲ್ಲೆಯಲ್ಲೂ ಸಹ ತೀವ್ರ ಮಳೆ ಕೊರತೆ ಎದುರಿಸಿದ ತಾಲ್ಲೂಕುಗಳಿವೆ.ವಿಭಾಗ ವ್ಯಾಪ್ತಿಯ 57 ತಾಲ್ಲೂಕುಗಳ ಪೈಕಿ 2 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು, 14 ತಾಲ್ಲೂಕಿನಲ್ಲಿ ವಾಡಿಕೆ, 36 ತಾಲ್ಲೂಕಿನಲ್ಲಿ ಕೊರತೆ ಹಾಗೂ 5 ತಾಲ್ಲೂಕಿನಲ್ಲಿ ತ್ರೀವ ತರನಾದ ಮಳೆ ಕೊರತೆ ಉಂಟಾಗಿದೆ ಎಂದರು.

ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ ಖಾತೆಗೆ ರೂ.54.45 ಕೋಟಿ ಅನುದಾನ ಬಿಡುಗಡೆ:

ಬರದ ವಿಪತ್ತು ನಿರ್ವಹಣೆ ವಿಭಾಗದ 9 ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು ರೂ. 54.45 ಕೋಟಿ ಹಣವಿದೆ. ತುಮಕೂರು ರೂ.11.58 ಕೋಟಿ, ಕೋಲಾರ ರೂ.9.24 ಕೋಟಿ, ಬೆಂಗಳೂರು ದಕ್ಷಿಣ ರೂ. 8.7 ಕೋಟಿ, ಬೆಂಗಳೂರು ಗ್ರಾಮಾಂತರ ರೂ.7.56 ಕೋಟಿ, ಚಿತ್ರದುರ್ಗ ರೂ.4.35 ಕೋಟಿ, ಚಿಕ್ಕಬಳ್ಳಾಪುರ ರೂ.4.26 ಕೋಟಿ, ಶಿವಮೊಗ್ಗ ರೂ.2.41 ಕೋಟಿ, ದಾವಣಗೆರೆ ರೂ.,1.80 ಕೋಟಿ, ಬೆಂಗಳೂರು ನಗರ ರೂ1.1 ಕೋಟಿ ಹಣ ಬಳಕೆಗೆ ಲಭ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಡಿಸೆಂಬರ್ ಅಂತ್ಯಕ್ಕೆ ಇ-ಪೌತಿ ಖಾತೆ ಪೂರ್ಣಗೊಳಿಸಲು ಸೂಚನೆ:
ಇದೇ ವರ್ಷದ ಡಿಸೆಂಬರ್ ತಿಂಗಳ ಒಳಗಾಗಿ ಇ-ಪೌತಿ ಖಾತೆ ಪೂರ್ಣಗೊಳಿಸಲು ಉಮಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಭೆಯಲ್ಲಿ ಸೂಚನೆ ನೀಡಿದರು. ಬೆಂಗಳೂರು ವಿಭಾಗದಲ್ಲಿ ಇ-ಪೌತಿ ಯೋಜನೆಯಡಿ ಒಟ್ಟು 1463968 ಅರ್ಜಿಗಳ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ ಗ್ರಾಮ ಆಡಳಿತ ಅಧಿಕಾರಿಗಳ ಹಂತದಲ್ಲಿ 304889 ಅರ್ಜಿಗಳನ್ನು ಪೂರ್ಣಗೊಳಿಸಲಾಗಿದೆ. 852651 ಅರ್ಜಿಗಳು ವಿಎಒ ಹಂತದಲ್ಲಿ ಪರಿಶೀಲನೆಗೆ ಬಾಕಿ ಇವೆ. ವಿಭಾಗದ ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯು 499545 ಅರ್ಜಿಗಳ ಗುರಿಯನ್ನು ಹೊಂದಿದ್ದು, 92234 ಪೌತಿ ಖಾತೆ ಅರ್ಜಿಗಳನ್ನು ಪೂರ್ಣಗೊಳಿಸಲಾಗಿದೆ. 304602 ಅರ್ಜಿಗಳನ್ನು ಬಾಕಿಯಿವೆ. ವಿಭಾಗದಾದ್ಯಂತ ಇ-ಪೌತಿ ಮೂಲಕ ಪ್ರಕ್ರಿಯೆಗೊಳಿಸಲು ಸೂಕ್ತವಾದ ಒಟ್ಟು ಅರ್ಜಿಗಳ ಸಂಖ್ಯೆ 393774 ಆಗಿದೆ. 458877 ಪ್ರಕ್ರಿಯೆಗೊಳಿಸಲು ಅನರ್ಹವಾಗಿವೆ.

ಭೂಸುರಕ್ಷಾ - ಭೂದಾಖಲೆಗಳ ಡಿಜಿಟಲೀಕರಣ ಪ್ರಗತಿ ವಿವರ:

ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾಮಗಾರಿಯಲ್ಲಿ ವಿಭಾಗದಾದ್ಯಂತ ಒಟ್ಟು 243916048 ಪುಟಗಳನ್ನು ಸ್ಕ್ಯಾನಿಂಗ್‍ಗಾಗಿ ಗುರುತಿಸಲಾಗಿದ್ದು, ಈ ಪೈಕಿ 159044964 ಪುಟಗಳನ್ನು ಯಶಸ್ವಿಯಾಗಿ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಲಾಗಿದೆ. 84871084 ಪುಟಗಳು ಸ್ಕ್ಯಾನ್ ಬಾಕಿ ಇವೆ. ವಿಭಾಗದ ಒಟ್ಟಾರೆ ಶೇಕಡಾವಾರು ಬಾಕಿ ಪ್ರಮಾಣವು ಶೇ. 24.05 ಆಗಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ 1562003 ಡಿಜಿಟಲ್ ದಾಖಲೆಗಳನ್ನು ವಿತರಿಸಲಾಗಿದ್ದು, ಒಟ್ಟು ರೂ. 1.72 ಕೋಟಿ ಆದಾಯ ಸಂಗ್ರಹವಾಗಿದೆ.

ತುಮಕೂರು ಜಿಲ್ಲೆಯ ಜನಪ್ರತಿನಿಧಿ ಮಾಜಿ ಸಚಿವ ವೀರಣ್ಣ ಅವರ ನಿಧನ ಅಂಗವಾಗಿ ಪ್ರಗತಿ ಪರಿಶೀಲನೆ ಸಭೆ ಆರಂಭದಲ್ಲಿ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು. ಮೃತರಿಗೆ ಗೌರವ ಸಲ್ಲಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಭೆಯಿಂದ ನಿರ್ಗಮಿಸಿದರು.

ಕುಂಠಿತಗೊಂಡ ಕೃಷಿ ಬಿತ್ತನೆ:
ಜುಲೈ ಅಂತ್ಯಕ್ಕೆ ಬೆಂಗಳೂರು ವಿಭಾಗದ 9 ಜಿಲ್ಲೆಗಳಲ್ಲಿ ಒಟ್ಟು 13.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 1.74 ಲಕ್ಷ ಹೆಕ್ಟೇರ್  ಅಂದರೆ ಶೇ13 ರಷ್ಟು ಮಾತ್ರ ಬಿತ್ತನೆಯಾಗಿದೆ. 78,540 ಕ್ವಿಂಟಾಲ್ ಬಿತ್ತನೆ ಬೀಜಗಳ ಪೈಕಿ 19,454 ಕ್ವಿಂಟಾಲ್ ವಿತರಣೆಯಾಗಿದ್ದು, 17,088 ಕ್ವಿಂಟಾಲ್ ದಾಸ್ತಾನಿದೆ. 5,13,229 ಮೆ.ಟನ್ ರಸಗೊಬ್ಬರ ದಾಸ್ತಾನಿನ ಪೈಕಿ 2,83,645 ಮೆ.ಟನ್ ಮಾರಾಟವಾಗಿದ್ದು, 2,29,584 ಮೆ.ಟನ್ ಉಳಿಕೆಯಾಗಿದೆ ಎಂದು ಸರ್ಕಾರ ಕೃಷಿ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ರಾಜೇಂದ್ರ ಸಭೆಯಲ್ಲಿ ತಿಳಿಸಿದರು.

ಮೇವಿನ ಲಭ್ಯತೆ: ಬೆಂಗಳೂರು ವಿಭಾಗದಲ್ಲಿ 24 ಲಕ್ಷ ದೊಡ್ಡ ಜಾನುವಾರು ಮತ್ತು 62 ಲಕ್ಷ ಸಣ್ಣ ಜಾನುವಾರುಗಳಿದ್ದು, ಲಭ್ಯವಿರುವ 46 ಲಕ್ಷ ಟನ್ ಮೇವು ಮುಂದಿನ 38 ವಾರಗಳಿಗೆ ಸಾಕಾಗುತ್ತದೆ ಎಂದು ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ವಿನುತ್ ಪ್ರಿಯಾ ಸಭೆಯಲ್ಲಿ ತಿಳಿಸಿದರು

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು