Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗರ್ಭಿಣಿ ಮಗಳ ಮರ್ಯಾದೆ ಹತ್ಯ ಅತ್ಯಂತ ಖಂಡನೀಯ-ಮಾದಾರಶ್ರೀ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದೆ ಏಳು ತಿಂಗಳ ಗರ್ಭಿಣಿ ಮಗಳನ್ನು ತಂದೆ ಮತ್ತು ಕುಟುಂಬದವರು ಸೇರಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಈ ಘಟನೆ ನಡೆದು ಆರೇಳು ದಿನಗಳಾಗಿವೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.

ನಾನು ತಡವಾಗಿ ಹೇಳಿಕೆ ನೀಡುತ್ತಿದ್ದೇನೆ ಅದಕ್ಕೆ ಕಾರಣವೂ ಇದೆ ಪ್ರಜ್ಞಾವಂತ ಸಮಾಜದವರು ಅಥವಾ ಬಸವಾದಿಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದೇವೆಂದು ಹೇಳುವ ಧಾರ್ಮಿಕ ಚಿಂತಕರು ಕೃತ್ಯ ಖಂಡಿಸುತ್ತಾರೆಂದು ಭಾವಿಸಿದ್ದೆವು. ಇಲ್ಲಿಯವರೆಗೂ ಅದಾಗಲಿಲ್ಲ ನಾನೇ ಈ ಘಟನೆ ಖಂಡಿಸಬೇಕಾಯಿತು. ಏಕೆಂದರೆ ಕೊಲೆಯಾದ ಯುವತಿಯನ್ನು ಮದುವೆಯಾದವನು ಮಾದಿಗರ ಹುಡುಗ.

ಕೆಳ ಜಾತಿಯ ಯುವಕನೋರ್ವ ಮೇಲ್ವರ್ಗದ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕೆ ತನ್ನ ಮಗಳನ್ನೇ ಅದರಲ್ಲೂ ಏಳು ತಿಂಗಳ ಗರ್ಭಿಣಿಯನ್ನು ಮನುಷತ್ವ ಬಿಟ್ಟು ಕ್ರೂರವಾಗಿ ಕೊಂದು ಬಿಟ್ಟರು. ಈ ದೇಶದಲ್ಲಿ ಅಘೋಚಿತ ನಿಯಮವಿದೆ. ದಲಿತರು, ಶೋಷಿತರ ಮೇಲೆ ಮತ್ತು ಅವರಿಗೆ ಸಂಬಂಧಿಸಿದವರ ಮೇಲೆ ದೌರ್ಜನ್ಯಗಳು ನಡೆದರೆ ದಲಿತರೆ ಧ್ವನಿಎತ್ತಬೇಕು. ಮೇಲ್ವರ್ಗದವರು ಮೇಲೆ ಇಂತಹ ಪ್ರಕರಣಗಳು ನಡೆದರೆ ದಲಿತರಾದಿಯಾಗಿ ಎಲ್ಲರೂ ಅವರೊಟ್ಟಿಗೆ ಧ್ವನಿಎತ್ತಬೇಕು.

ಇದೇ ಹುಬ್ಬಳ್ಳಿಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ವರ್ಗದ ಯುವತಿ ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅನ್ಯಧರ್ಮಿಯ ಯುವಕ ಕಾಲೇಜಿನ ಕ್ಯಾಂಪಸ್ನಲ್ಲಿಯೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ. ಮರು ದಿನವೇ ವಿದ್ಯಾರ್ಥಿ ಸಂಘಟನೆಗಳು, ಹೋರಾಟಗಾರರು ಬೀದಿಗಿಳಿದರು ಧಾರ್ಮಿಕ ಪೀಠಾಧಿಪತಿಗಳು ಸಾಲು ಸಾಲಾಗಿ ಯುವತಿಯ ಮನೆಗೆ ಭೇಟಿ ಕೊಟ್ಟರು.

ಅವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿ. ಇವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿಯೇ. ಅಂದು ಬೀದಿಗಿಳಿದು ಖಂಡಿಸಿದರು ಏಕೆಂದರೆ ಅದು ಧರ್ಮದಾರಿತ ಕೊಲೆ. ಇಂದು ಯಾರು ಖಂಡಿಸುತ್ತಿಲ್ಲ ಏಕೆಂದರೆ ಇದು ಜಾತಿ ಆಧಾರಿತ ಕೃತ್ಯ ಎಂದು ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ದಯವೇ ಧರ್ಮದ ಮೂಲ", "ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ" ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ ಎಂದು ಬಸವಮೂರ್ತಿ ಮಾದಾರ ಸ್ವಾಮೀಜಿ ನೋವಿನಿಂದ ನುಡಿದ್ದಾರೆ.

ಜಾತಿಯ ಕಾರಣಕ್ಕೆ ಗರ್ಭಿಣಿ ಮಗಳನ್ನು ಕ್ರೂರವಾಗಿ ಕೊಲ್ಲುವಷ್ಟು ಮಟ್ಟಕ್ಕೆ ಈ ಸಮಾಜ ಇಳಿಯುತ್ತೆ. ಕೃತ್ಯವೆಸಗಿದವರು ಕಾನೂನಿನಿಂದ ತಪ್ಪಿಸಿಕೊಳ್ಳಬಾರದೆಂದು ಬಸವಮೂರ್ತಿ ಮಾದಾರ ಸ್ವಾಮೀಜಿ ಆಗ್ರಹಿಸಿದ್ದಾರೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ