LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ; ಕೊಲೆ ಆರೋಪಿ ಮಧು ಕಾಲಿಗೆ ಬಿದ್ದಿತು ಗುಂಡೇಟು!

Advertisement
Advertisement

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರೌಡಿಶೀಟರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಮಹಜರು ಪ್ರಕ್ರಿಯೆಯ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಶಿವಮೊಗ್ಗದ ಹೊಳೆ ಬೆನವಳ್ಳಿಯ ರಿಂಗ್ ರೋಡ್ ಬಳಿ ನಡೆದಿದೆ. ಮಧು ಗುಂಡೇಟು ತಿಂದ ಕೊಲೆ ಆರೋಪಿ. ಈತ ಜೂನ್ 12 ರಂದು ನಗರದಲ್ಲಿ ನಡೆದಿದ್ದ ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ಘಟನೆಯ ವಿವರ:
ನರಸಿಂಹ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಧುನನ್ನು ಪೊಲೀಸರು ವಶಕ್ಕೆ ಪಡೆದು, ಸ್ಥಳ ಮಹಜರಿಗಾಗಿ  ಹೊಳೆ ಬೆನವಳ್ಳಿ ರಿಂಗ್ ರೋಡ್ ಬಳಿ ಕರೆದೊಯ್ದಿದ್ದರು. ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಓಡಿಹೋಗಲು ಯತ್ನಿಸಿದ ಆರೋಪಿ, ತಡೆಯಲು ಬಂದ ಸಿಬ್ಬಂದಿಯ ಮೇಲೆಯೇ ಏಕಾಏಕಿ ಹಲ್ಲೆ ನಡೆಸಿದ್ದಾನೆ.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸದ್ಯ ಗಾಯಗೊಂಡಿರುವ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂತರು ಮಳೆಯ ನಡುವೆ ಸಂಭ್ರಮದಿಂದ ನಡೆದ ಗಾಳಿಪಟ ಹಬ್ಬಆ.10 ರಂದು ಭಾರತ ಬಿಟ್ಟು ತೊಲಗಿ ಚಳುವಳಿ ಆಯೋಜನೆಶೀಬಾರ ಮಠದ ವನದಲ್ಲಿ ಇಂದು ಶ್ರಮದಾನ, ಶಿವಯೋಗ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮಜವಗೊಂಡನಹಳ್ಳಿಯಲ್ಲಿ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ ಆಡಳಿತಾವಧಿಯ ಲಿಪಿಗಲ್ಲು ಪತ್ತೆಪೊಲೀಸ್ ನೇಮಕಾತಿ ಪರೀಕ್ಷೆ ಕೆ.ಇ.ಎ ಮಾರ್ಗಸೂಚಿಗಳ ಪಾಲನೆ ಕಡ್ಡಾಯ-ಜಿಲ್ಲಾಧಿಕಾರಿ ಟಿ.ವೆಂಕಟೇಶ್ಅಡುಗೆ ತಯಾರಕ ಎಂ.ಮಹಮ್ಮದ್ ಚಮನ್ ಅವರಿಗೆ ಆತ್ಮೀಯ ಬಿಳ್ಕೋಡುಗೆನಿವೃತ್ತಿ, ವರ್ಗಾವಣೆ ಹೊಂದಿದ ಅಧಿಕಾರಿಗಳಿಗೆ ಬೀಳ್ಕೊಡುಗೆಬಬ್ಬೂರು ಫಾರಂನಲ್ಲಿ ರೈತರಿಗೆ ಸಮಗ್ರ ಕೃಷಿ ಪದ್ಧತಿ ಕುರಿತು ಮೂರು ದಿನಗಳ ವಸತಿಯುಕ್ತ ಉಚಿತ ತರಬೇತಿಸಂಗೀತ ಪ್ರೇಮಿಗಳ ಹೃದಯದಲ್ಲಿ ಎಸ್. ಜಾನಕಮ್ಮ ಶಾಶ್ವತ ಡಾ.ಕೆ.ಜೆ. ಕಾಂತರಾಜ್ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜಿನಪ್ಪ ನವರಿಗೆ ಬೀಳ್ಕೊಡುಗೆ