Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಮೇಕ್ ಇನ್ ಕರ್ನಾಟಕದ ಹೆಮ್ಮೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಕ್ ಇನ್ ಕರ್ನಾಟಕದ ಹೆಮ್ಮೆ!
Anlon Technology Solutions ವತಿಯಿಂದ ರನ್‌ವೇ ಸುರಕ್ಷತಾ ವಾಹನದ ಉತ್ಪಾದನೆ ಆರಂಭ ದೊಡ್ಡಬಳ್ಳಾಪುರ ಸಮೀಪದ ಆದಿನಾರಾಯಣ ಹೊಸಹಳ್ಳಿ ಸಮೀಪದ ಕೈಗಾರಿಕಾ ವಲಯದಲ್ಲಿ Anlon Technology Solutions ಸಂಸ್ಥೆಯು ಅಭಿವೃದ್ಧಿಪಡಿಸಿರುವ, ರನ್ ವೇ ಕ್ಲೀನಿಂಗ್ ವಾಹನವನ್ನು ಉದ್ಘಾಟಿಸಿದ್ದು ಸಂತಸ ತರಿಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ವಿಮಾನಯಾನ ಹಾಗೂ ನಗರ ಮೂಲಸೌಕರ್ಯ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾದ ಈ ವಿಶೇಷ ಯಂತ್ರಗಳನ್ನು ದೇಶದಲ್ಲೇ ಮೊದಲ ಬಾರಿಗೆ, ದೇಶೀಯವಾಗಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲೇ ಉತ್ಪಾದಿಸುತ್ತಿರುವುದು ಮಹತ್ವದ ತಾಂತ್ರಿಕ ಸಾಧನೆ. ಈ ಸಾಧನೆಗಾಗಿ Anlon Technology Solutions ಸಂಸ್ಥೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಸ್ವಿಟ್ಜರ್ ಲ್ಯಾಂಡ್ ನ Bucher Municipal ಸಂಸ್ಥೆಯ ಸಹಯೋಗದಲ್ಲಿ ಜಾಗತಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿ, ತಯಾರಿಸಲಾದ ಈ ಆಧುನಿಕ ರನ್ ವೇ ಹಾಗೂ ಮ್ಯುನಿಸಿಪಲ್ ಸ್ವೀಪರ್ ಗಳು, ಲೋಹದ ತುಣುಕುಗಳು ಸೇರಿದಂತೆ, ಸಸ್ಯಸಂಬಂಧಿ ಕಸ ಮತ್ತು ಸ್ಕಿಡ್ ಗೆ ಕಾರಣವಾಗುವ ಅಂಶಗಳನ್ನು ತೆರವುಗೊಳಿಸುವ ಮೂಲಕ ಸುರಕ್ಷತಾ ಚಾಲನೆಯನ್ನು ಮಹತ್ವಪೂರ್ಣವಾಗಿ ಹೆಚ್ಚಿಸಲಿವೆ.

ಇಂತಹ ಪ್ರಯತ್ನಗಳು ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯ ಉಳಿಸುವ ಜೊತೆಗೆ, ಭಾರತದ ಆಂತರಿಕ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

ನಿಖರ ಎಂಜಿನಿಯರಿಂಗ್ ಮತ್ತು ಮೊಬೈಲಿಟಿ ಕ್ಷೇತ್ರದಲ್ಲಿ ಕರ್ನಾಟಕ ನಿರ್ಮಿಸಿಕೊಂಡಿರುವ ಬಲಿಷ್ಠ ಪರಿಸರ ವ್ಯವಸ್ಥೆಯೇ ಇಂತಹ ಉನ್ನತ ಪ್ರಭಾವದ ತಯಾರಿಕಾ ಯಶಸ್ಸುಗಳಿಗೆ ಆಧಾರವಾಗಿದೆ.



ಕೈಗಾರಿಕಾ ನೀತಿ 2025–30ರ ಅಡಿಯಲ್ಲಿ, ವಿಮಾನಯಾನ ಮತ್ತು ಸಾರ್ವಜನಿಕ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಆಮದು ಪರ್ಯಾಯಕ್ಕೆ ಮುಂದಾಗುವ ಸಂಸ್ಥೆಗಳಿಗೆ ನಮ್ಮ ಸರ್ಕಾರದ ಬೆಂಬಲ ಮುಂದುವರಿಯಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು