Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪುರುಷರಲ್ಲೂ ಸ್ತ್ರೀ ಸಂವೇದನೆಯ ನೆಲೆಗಳಿವೆ:ಡಾ.ಬಿ.ಎಂ.ಗುರುನಾಥ

Advertisement
  ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರತಿಯೊಬ್ಬ ಪುರುಷನಲ್ಲಿಯೂ ಮಾತೃತ್ವ ಮತ್ತು ಸ್ತ್ರೀ ಸಂವೇದನೆಯ ನೆಲೆಗಳಿದ್ದು ಮಹಿಳಾ ದಿನಾಚರಣೆಯನ್ನು ಸ್ತ್ರೀ-ಪುರುಷರಿಬ್ಬರೂ ಸೇರಿ ಆಚರಿಸಲ್ಪಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ‌ತಿಳಿಸಿದರು.


ನಗರದ ರೋಟರಿ ಬಾಲಭವನದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಮತ್ತು ರೋಟರಿ ಕ್ಲಬ್ ಚಿನ್ಮೂಲದ್ರಿ ಇವುಗಳ ಸಂಯುಕ್ತಾಶ್ರಯದಲ್ಲಿ "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ"ಯ ಪ್ರಯುಕ್ತ  ಆಯೋಜಿಸಿದ್ದ ಶಿವಾನಂದ ಎನ್  ಬಂಡೇಹಳ್ಳಿಯವರ "ಕಡೆದಷ್ಟು ಕನಸುಗಳು" ಕವನ ಸಂಕಲನ ಮತ್ತು  ಬಾಲ ಪ್ರತಿಭೆ ಖುಷಿ ಅರ್ಶ್ ಅವರ "ಪ್ರೂಫ್ ಒವರ್ ಪ್ರಿವಿಲೈಜ್" ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಶಿವಾನಂದ ಎನ್  ಬಂಡೇಹಳ್ಳಿ ಅವರ "ಕಡೆದಷ್ಟು ಕನಸುಗಳು" ಕವನ ಸಂಕಲನದ ಕುರಿತು ಮಾತನಾಡಿದ ಅವರು ಈ ಕವನ ಸಂಕಲನದಲ್ಲಿ ಒಟ್ಟು ಐವತ್ತೇಳು ಕವನಗಳಿದ್ದು ಪ್ರತಿಯೊಂದು ಕವನವು ಗ್ರಾಮೀಣ ಆಡುಭಾಷೆಯ ಸೊಗಡಿನಿಂದ ಕೂಡಿದ್ದು ಅತ್ಯಂತ ವಸ್ತುನಿಷ್ಠತೆಯಿಂದ ಕೊಡಿವೆ. ಕವಿಯ ಕನಸುಗಳು ಆಲೋಚನೆಗಳಾಗಿ ಕವನದ ರೂಪ ಪಡೆದಿದ್ದು ಪ್ರತಿಯೊಂದು ಕವನವು ಆಪ್ತವಾಗಿ ಓದಿಸಿಕೊಂಡು ಹೋಗುತ್ತವೆ ಎಂದರು.

                                 ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾವತಿ ಪುತ್ತೂರ್ಕರ್ ಮಾತನಾಡಿದರು.


ಅರವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಮೇಘನಾ ಜಿ.ಎಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್ ಮಾತನಾಡಿದರು. ಖ್ಯಾತ ವಕೀಲ ಬಿ.ಕೆ.ರಹಮತ್ ಉಲ್ಲಾ
, ಕವಿ ಶಿವಾನಂದ, ರೋಟರಿ ಕ್ಲಬ್ ನ ಅಧ್ಯಕ್ಷೆ ದಿಲ್ ಶಾದ್ ಉನ್ನಿಸಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ  ರಸಪ್ರಶ್ನಾ ಸ್ಪರ್ಧೆಯಲ್ಲಿ ವಿಜೇತರಾದ ಶಾರದಾ ಬಿ.ಜೈರಾಂ ಮತ್ತು ಸ್ಫೂರ್ತಿ ವಿಕಲಚೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತಿಪ್ಪಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ಸಂಸ್ಕೃತಿಯ ನಾರಿಯರ  ಸಂಭ್ರಮ
, ಕವಿಗೋಷ್ಠಿ ಕಾರ್ಯಕ್ರಮಗಳು ನಡೆದವು.      

                           ಈ ಸಂದರ್ಭದಲ್ಲಿ ಡಾ.ಗೌರಮ್ಮ, ಎಚ್.ಸತೀಶ್ ಕುಮಾರ್, ಪಂಡ್ರಹಳ್ಳಿ ಶಿವರುದ್ರಪ್ಪ, ಡಾ.ಬಸವರಾಜ ಹರ್ತಿ, ರಶ್ಮಿ,ಮಮತಾ, ಮೀರಾ ನಾಡಿಗ್, ಡಾ.ಚಾಂದಿನಿ ಖಲೀದ್, ತಿಪ್ಪಮ್ಮ, ನಿರ್ಮಲ, ಉಷಾರಾಣಿ, ಶಶಿಕಲಾ, ಯತೀಶ್ ಎಂ ಸಿದ್ದಾಪುರ, ಕ್ಲಾಸಿಕ್ ಚಂದ್ರಶೇಖರ್, ಪಗಲಬಂಡೆ ನಾಗೇಂದ್ರಪ್ಪ, ಬಿ.ಮುರಳೀಧರ, ಜಯದೇವಮೂರ್ತಿ, ಜಯಪ್ರಕಾಶ್ ಸೇರಿದಂತೆ ಉದಯೋನ್ಮುಖ ಕವಿ ಮನಸ್ಸುಗಳು ಭಾಗವಹಿಸಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ