Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಮಿಷಾ ಪ್ರಿಯ, ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಮಿಷಾ ಪ್ರಿಯ.......

ಬದುಕು ಜಟಕಾ ಬಂಡಿ,
ವಿಧಿ ಅದರ ಸಾಹೇಬ
,
ಕುದುರೆ ನೀನ್
,
ಅವನು ಪೇಳ್ದಂತೆ ಪಯಣಿಗರು
,
ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು,
ಪದ ಕುಸಿಯೇ ನೆಲವಿಹುದು
ಮಂಕು ತಿಮ್ಮ
,.......
ಡಿವಿಜಿ.


ದೂರದ ಯೆಮೆನ್ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹೋದ ಕೇರಳದ ಪಾಲಕ್ಕಾಡಿನ ನಿಮಿಷಾ ಪ್ರಿಯ ಎಂಬ ದಾದಿ, ಬದುಕಿನ ಆಕಸ್ಮಿಕ ಹೊಡೆತಕ್ಕೆ ಸಿಲುಕಿ ಕೊಲೆ ಆರೋಪದ  ಅಪರಾಧ ಸಾಬೀತಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಸಾವು ಬದುಕಿನ ನಡುವೆ ದಿನಗಳನ್ನು ದೂಡುತ್ತಾ ಯಾವುದೇ ಕ್ಷಣದಲ್ಲಿ ನೇಣುಗಂಬಕ್ಕೇರುವ ಅಥವಾ ಬಿಡುಗಡೆಯಾಗಿ ಹೊಸ ಬದುಕಿನೊಂದಿಗೆ ತನ್ನ ಹುಟ್ಟೂರಿಗೆ ಬರುವ ಅತ್ಯಂತ ತೆಳುವಾದ ಗೆರೆಯ ಮಧ್ಯೆ ನಿಂತಿದ್ದಾಳೆ.

ಕೆಲವು ವಿಷಯಗಳೇ ಹಾಗೆ. ಇದ್ದಕ್ಕಿದ್ದಂತೆ ತುಂಬಾ ಪ್ರಚಾರಕ್ಕೆ ಬಂದು ಬಿಡುತ್ತವೆ. ಇಂತಹ ಘಟನೆಗಳು ಸಾಕಷ್ಟು ನೆಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಮಾತ್ರ ವಿಶೇಷ ಮಹತ್ವವನ್ನು ಪಡೆಯುತ್ತವೆ. ಉದಾಹರಣೆಗೆ ದೆಹಲಿಯಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ನಡೆದಿದ್ದರು ಜ್ಯೋತಿಸಿಂಗ್ ಎಂಬ ನಿರ್ಭಯ ಪ್ರಕರಣ ಇಡೀ ರಾಷ್ಟ್ರದ ಗಮನ ಸೆಳೆಯಿತು. ಹಾಗೆಯೇ ಈಗ ನಿಮಿಷಾ ಪ್ರಿಯ ದೇಶದ ಎಲ್ಲರ ಮನಸ್ಸುಗಳಲ್ಲಿ ಸೇರಿ ಕುತೂಹಲದಿಂದ, ಮರುಕದಿಂದ  ಬಿಡುಗಡೆಗಾಗಿ ಪ್ರಾರ್ಥಿಸುವಂತಾಗಿದೆ.

ಇಡೀ ಘಟನೆಯ ಬಗ್ಗೆ ಬಂದಿರುವ ಸುದ್ದಿಗಳ ಆಧಾರದಲ್ಲಿ ಹೇಳುವುದಾದರೆ ಆಕೆಯದು ಉದ್ದೇಶಪೂರ್ವಕ ಕೊಲೆಯಲ್ಲ. 2017 ರಲ್ಲಿ ಸಾಂಸಾರಿಕ ಮತ್ತು ವ್ಯಾವಹಾರಿಕ ಘರ್ಷಣೆಯಲ್ಲಿ ಕೋಪದಿಂದ ತನ್ನ ಸಹಪಾಠಿಗೆ ನೀಡಿದ ಅನಸ್ತೇಶಿಯಾ ಮಾದರಿಯ ಔಷಧದ ಡೋಸ್ ಹೆಚ್ಚಾಗಿ ಆತ ನಿಧನ ಹೊಂದಿ, ಈಕೆಯನ್ನು ಕೊಲೆ ಆರೋಪದಲ್ಲಿ ಬಂಧಿಸಿ ಅಪರಾಧಿಯನ್ನಾಗಿ ಮಾಡಲಾಗಿದೆ. ಬಹುತೇಕ ಗಲ್ಲು ಶಿಕ್ಷೆ ಖಾಯಂ ಆಗಿದೆ. ಅದನ್ನು ತಪ್ಪಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಆಕೆ ಮರಳಿ ಭಾರತಕ್ಕೆ ಜೀವಂತ ಬಂದು ಹೊಸ ಬದುಕು ರೂಪಿಸಿಕೊಳ್ಳಲಿ ಎಂದು ತುಂಬು ಹೃದಯದಿಂದ ನಿಮ್ಮೆಲ್ಲರ ಪರವಾಗಿ ಹಾರೈಸುತ್ತಾ......

ಬದುಕೇ ಹಾಗೆ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಆಕಸ್ಮಿಕವಾಗಿ ಅನೇಕ ತಿರುವುಗಳನ್ನು ಪಡೆಯುತ್ತಾ ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ. ಆ ಕೊಂಡೊಯ್ಯುವಿಕೆ ಪ್ರಗತಿಪರವಾಗಿ, ಸುಖಕರವಾಗಿ, ಆರೋಗ್ಯಕರವಾಗಿ, ಸಹಜವಾಗಿ ಇದ್ದರೆ ಅದೊಂದು ಯಶಸ್ವಿ ಬದುಕು. ಆದರೆ ಅದೇ ಬದುಕು ವಿಫಲವಾಗಿ, ಅಸಹಾಯಕವಾಗಿ, ವಿನಾಶದತ್ತ ಕೊಂಡೊಯ್ದರೆ ಆ ಬದುಕು ಅತ್ಯಂತ ಅಸಹನೀಯ ಮತ್ತು ದುರಾದೃಷ್ಟಕರವಾಗಿರುತ್ತದೆ.

ನಿಮಿಷಾ ಪ್ರಿಯ ಬದುಕು ಕೂಡ ಹಾಗೆ ವಿನಾಶದತ್ತ ಸಾಗಿದೆ. ಸುಮಾರು ಎಂಟು ವರ್ಷಗಳಿಂದ ಸತತವಾಗಿ ಜೈಲಿನಲ್ಲಿ ಕೊಳೆಯುತ್ತಾ ತನ್ನದಲ್ಲದ ದೇಶದಲ್ಲಿ, ಸದಾ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿರುವಭಾರತದಂತ ಪ್ರಜಾಪ್ರಭುತ್ವ ಸರ್ಕಾರ ಇಲ್ಲದ, ಧರ್ಮಾಧಾರಿತ  ದೇಶದಲ್ಲಿ ಒಂಟಿಯಾಗಿ, ಜೈಲಿನ ಸರಳುಗಳ ನಡುವೆ ಕಾಲ ಕಳೆಯುತ್ತಿರುವ ನಿಮಿಷಾ ಪ್ರಿಯ ಮಾನಸಿಕ ಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ಬಹುಶಃ ಮಧ್ಯವಯಸ್ಕಳಾಗಿರುವ ಆಕೆ ತನ್ನ ಪರಿಸ್ಥಿತಿಗೆ ಎಷ್ಟೊಂದು ಪಶ್ಚಾತಾಪ ಪಡುತ್ತಿರಬಹುದು ಅಥವಾ ದೃಢ ಮನಸ್ಸಿನಿಂದ ತಾನು ಬಿಡುಗಡೆಯಾಗುವುದಾಗಿ ಆತ್ಮವಿಶ್ವಾಸದಿಂದ ಇರಬಹುದೇ. ಆಕೆಗೆ ಹೊರ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ವಿಷಯಗಳು ಅರಿವಿರಬಹುದೇ....

ಯಾವುದೋ ವಾಸಿಯಾಗದ  ಖಾಯಿಲೆಯಂತೆ, ಎಲ್ಲೋ ದಾರಿ ತಪ್ಪಿ ಕಳೆದು ಹೋದ ಆತಂಕದಂತೆ, ವಿಷಾನಿಲಕ್ಕೆ ಸಿಲುಕಿ ಉಸಿರುಗಟ್ಟಿದಂತೆ, ಪ್ರಪಾತಕ್ಕೆ ಬಿದ್ದು ಭಯಭೀತವಾದಂತೆ, ನೀರಿನ ಪ್ರವಾಹಕ್ಕೆ ತುತ್ತಾಗಿ ಕೊಚ್ಚಿ ಹೋದಂತೆ ನಿಮಿಷಾ ಪ್ರಿಯ ಮನಸ್ಸು ಅಲ್ಲೋಲ ಕಲ್ಲೋಲ ಆಗಿರಬಹುದಲ್ಲವೇ...

ಈ ರೀತಿಯ ಘಟನೆಗಳು ನಮ್ಮ ಅರಿವಿಗೆ ಬಂದಾಗ ನಾವು ಅದರ ಮೂಲವನ್ನು ಗಂಭೀರವಾಗಿ ಯೋಚಿಸಿ ಆತ್ಮವಿಮರ್ಶೆ ಮಾಡಿಕೊಂಡು ನಮ್ಮೊಳಗಿನ ತಾಳ್ಮೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೂ ದುಡುಕಿ ಅತ್ಯಂತ ಅಪಾಯಕಾರಿ ಕೆಲಸಗಳಿಗೆ ಮುಂದಾಗಬಾರದು. ಅದರಿಂದಾಗಿ ಇಡೀ ಬದುಕೇ ಸರ್ವನಾಶವಾಗುತ್ತದೆ.

ಏನೇ ಆಗಲಿ ಆಕೆಯ ಬಿಡುಗಡೆಗಾಗಿ ನೆಡೆಯುತ್ತಿರುವ ಸಂಧಾನ ಯಶಸ್ವಿಯಾಗಿ ಆಕೆಗೆ ಮರುಜೀವ ಸಿಗಲಿ ಎಂದು ಮತ್ತೊಮ್ಮೆ ಆಶಿಸುತ್ತಾ......
ಲೇಖನ-ವಿವೇಕಾನಂದ. ಎಚ್. ಕೆ. 9663750451


 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ