Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೊಬೈಲ್, ಟಿವಿ ವೀಕ್ಷಣೆಯಿಂದ ಜಾನಪದ ಕಲೆಗಳ ಆಸಕ್ತಿ ಕಡಿಮೆಯಾಗುತ್ತಿದೆ: ಕಲ್ಪನಾ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಮೇಲಿನಜೋಗನಹಳ್ಳಿ (ಎಸ್ ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಘಾಟಿ ಸುಬ್ರಹ್ಮಣ್ಯ ದೇವಾಲಯದ ಅವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಹಾಗು ಇಂಚರ ಸಾಂಸ್ಕೃತಿಕ ಕಲಾ ಸಂಘ  ಇವರುಗಳ ಸಹಯೋಗದೊಂದಿಗೆ ' ಕಲಾ ನಡಿಗೆ ನಿಮ್ಮ ಬಳಿಗೆ ' ಎಂಬ  ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿರ್ದೇಶಕಿ ಕಲ್ಪನಾ ಅರ್. ಮಾತನಾಡಿ  ಈಗಿನ ಯುವ ಪೀಳಿಗೆ  ಟಿವಿ ಮತ್ತು ಮೊಬೈಲ್ ಮೂಲಕ ವಿಶ್ವದ ಎಲ್ಲ ರೀತಿಯ ಮನೋರಂಜನೆ, ಸಿನಿಮಾ, ಮತ್ತು ರಿಯಾಲಿಟಿ ಶೋಗಳು ಮನೆಯ ಬಾಗಿಲಿಗೆ ಬರುತ್ತಿರುವುದರಿಂದ, ಗಂಟೆಗಟ್ಟಲೆ ಕುಳಿತು ನೋಡುವ ಯಕ್ಷಗಾನ, ಬಯಲಾಟ, ನಾಟಕ ಜಾನಪದ  ಗೊಂಬೆಯಾಟಗಳಂತಹ ಕಲೆಗಳತ್ತ ಆಸಕ್ತಿ ಕಡಿಮೆಯಾಗಿದೆ. ಅದ್ದರಿಂದ ಸಂಘ ಸಂಸ್ಥೆಗಳು ನಮ್ಮ ರಂಗಭೂಮಿ ಜಾನಪದ ಕಲೆಗಳ ಬಗ್ಗೆ ದಾರ್ಮಿಕ ಹಾಗು ಜನಸಂದಣಿ ಇರುವ ಪ್ರದೇಶಗಳಲ್ಲಿ  ನಮ್ಮ ಸಂಸ್ಕೃತಿಯ ಕಲೆಗಳ ಬಗ್ಗೆ ಅರಿವು ಮೂಡಿಸುವ  ಕಲಾ ನಡಿಗೆ ನಿಮ್ಮ ಬಳಿಗೆ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಚರ ಸಾಂಸ್ಕೃತಿಕ ಕಲಾ ಸಂಘ ವಿ ಎಂ ಗೌತಮ್ ವಹಿಸಿದ್ದರು.

ಈ ಸಂದರ್ಭದಲ್ಲಿ ಜಾನಪದ ಪ್ರಶಸ್ತಿ ವಿಜೇತೆ ಓಬಮ್ಮ, ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ದಿ ಪ್ರಾಧಿಕಾರದ ಸದಸ್ಯೆ ಹೇಮಲತಾ, ರಮೇಶ್,ವ್ಯವಸ್ಥಾಪಕ ಮಹಾಂತೇಶ್,

 ಎಸ್ ಎಸ್ ಘಾಟಿ ಪಂಚಾಯಿತಿಯ ಮಾಜಿ ಸದಸ್ಯ ಪುರುಷೋತ್ತಮ,ಜಾನಪದ ಕಲಾವಿದ ಜೂಗಾನಹಳ್ಳಿ ವೆಂಕಟೇಶ, ಕಲಾವಿದರಾದ ವೈ ಟಿ. ಲಕ್ಷ್ಮೀನಾರಾಯಣ್, ಕುಸುಮ, ಶಾಂತಮ್ಮ, ಸರೋಜಮ್ಮ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ರವಿಕುಮಾರ್, ರಾಜೇಶ್ ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ನುಣುಚಿಕೊಳ್ಳುವಿಕೆ: ಹೂಡಿಕೆ ಕುಸಿತ ಪ್ರೊ. ಚಂದ್ರಶೇಖರ್ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆಸ್ಥಳೀಯ ಮುಖಂಡರೇ ಮಾಜಿ ಸಚಿವ ದಿ. ಸುಧಾಕರ್ ನುಡಿನಮನ ಮಾಡಲಿ:ಕಂದಿಕೆರೆ ಜಗದೀಶ್ಜೀವನದಲ್ಲಿ ಆಧ್ಯಾತ್ಮಿಕ ಶ್ರದ್ಧೆಯ ಪಾತ್ರ ಹಿರಿದು: ಮಾತಾಜೀ ತ್ಯಾಗಮಯೀಕಸದಲ್ಲೂ ಕಮಿಷನ್ ಲೂಟಿ: ಸಿಬಿಐಗೆ ಪ್ರಕರಣ ಒಪ್ಪಿಸಲು ಆರ್. ಅಶೋಕ್ ಸವಾಲು!ರೈತರ ಜಮೀನಿನ ಮೇಲೆ ಬುಲ್ಡೋಜರ್: ಕಾಂಗ್ರೆಸ್ ಸರ್ಕಾರಕ್ಕೆ ಆರ್. ಅಶೋಕ್ ಎಚ್ಚರಿಕೆಕೇಂದ್ರ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ ಆರ್. ಅಶೋಕ್ಹೊಸಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಸಂಸದ ವಿ. ಸೋಮಣ್ಣ ಚಾಲನೆಕೆಆರ್ ಎಸ್ ನೀರಿನ ಮಟ್ಟ 81 ಅಡಿಗೆ ಕುಸಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್: ಶೀಘ್ರ ಪರಿಹಾರದ ಭರವಸೆ