Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಜಂತರ್ ಮಂಥರ್ ನಲ್ಲಿ ಚಳುವಳಿ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರನ್ನು ಪ್ರಾಯೋಗಿಕವಾಗಿ ಹರಿಸುವುದನ್ನೇ ಕೆಲವು ರಾಜಕರಣಿಗಳು ಅತಿಯಾಗಿ ಬಿಂಬಿಸಿ ಮತ್ತೆ ಅಪೂರ್ಣ ಕೆಲಸಗಳ ನೆಪದಿಂದ ಜಿಲ್ಲೆಯ ಜನರನ್ನು ಮತ್ತೊಮ್ಮೆ ವಂಚಿಸುವುದನ್ನು ವಿರೋಧಿಸಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲೆಯ
6 ತಾಲ್ಲೂಕುಗಳಲ್ಲಿ ಏಕಕಾಲಕ್ಕೆ ವಿವಿಧ ಮಾದರಿಯ ಅನಿರ್ಧಿಷ್ಟ ಚಳುವಳಿಯನ್ನು  ಜಿಲ್ಲೆಯ ರೈತ ಸಂಘಟನೆಗಳು ರೈತರ ಅನಿರ್ಧಿಷ್ಟ ಅಹೋರಾತ್ರಿ ಧರಣಿ ಸತ್ಯಗ್ರಹ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು

ನಗರದ ಗಾಂಧಿ ವೃತ್ತದ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಗೆ ನೀರು ಹರಿಸುವ ವಿಚಾರವಾಗಿ 2002 ರಲ್ಲಿ 2000 ಕೋಟಿ ಹಣ ಸರ್ಕಾರ ಮೀಸಲಿಟ್ಟು ಭದ್ರಾ ಹಿನ್ನೀರಿನ ಮಾಗುಂಡಿ ಎಂಬ ಸ್ಥಳದಿಂದ ಸಹಜಹರಿವು (ಗ್ರಾವಿಟಿ) ಮೂಲಕ ವೇದಾವತಿಗೆ ನೀರು ಹರಿಸಿ, ವಾಣಿವಿಲಾಸ ಜಲಾಶಯ ಭರ್ತಿ ಮಾಡಿ ಬಯಲು ಸೀಮೆಯ ಎಲ್ಲಾ ತಾಲ್ಲೂಕಿನ ರೈತರಿಗೂ ನೀರು ಹರಿಸಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿತ್ತು.

ಆದರೆ ಅದನ್ನು ತಿರುಚಿ, 2008 ರಲ್ಲಿ ಮಾರ್ಗ ಬದಲಾಯಿಸಿರುವುದರಿಂದ ಈ ವರೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿ, ಯೋಜನೆ ಗಾತ್ರ ಕೂಡ ಹೆಚ್ಚಾಗಿದೆ, ಪ್ರತೀ ಚುನಾವಣೆ ಸಮಯದಲ್ಲಿ ರಾಜಕರಣಿಗಳು ನೀರು ಹರಿಸುವ ಸುಳ್ಳು ಭರವಸೆಗಳನ್ನು ಜನರಲ್ಲಿ ಬಿತ್ತುತ್ತ ವಂಚಿಸುತ್ತಿದ್ದಾರೆ. ಈಗಲೂ ಜಿಲ್ಲೆಯಲ್ಲಿ ನೀರು ತುಂಬಿಸಲು ಯಾವುದೇ ಕೆರೆಗಳನ್ನು ಸಿದ್ದಗೊಳಿಸಿಲ್ಲ.

ಜಿಲ್ಲೆಯಲ್ಲಿ ತಾರತಮ್ಯವಿಲ್ಲದೆ ಪ್ರತಿ ರೈತರ ಜಮೀನಿಗೆ ನೀರು ಹರಿಸಲೇಬೇಕು. ಇದೇ ಬೇಸಿಗೆಯಲ್ಲಿ ತುಂಗಾ ದಿಂದ ಭದ್ರಾದವರೆಗಿನ ಕಾಮಗಾರಿಗಳು ಮತ್ತು ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಮಾಡಲು ಎಲ್ಲಾ ಕಾಮಗಾರಿರಿಗಳನ್ನು ಮುಕ್ತಾಯಗೊಳಿಸಿ, ಮಳೆಗಾಲದಲ್ಲಿ ನೀರು ಹರಿಸಲೇಬೇಕು ಎಂಬ ಛಲದೊಂದಿಗೆ ನಿರ್ದಿಷ್ಟ ಹೋರಾಟಕ್ಕೆ ಇಳಿಯಲೇ ಬೇಕಾಗಿದೆ. ಈ ಚಳುವಳಿಯನ್ನು ಕೇವಲ ತಾಲ್ಲೂಕು, ಜಿಲ್ಲೆ ಅಲ್ಲ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.

ಫೆಬ್ರವರಿ  10 ರಂದು ಹಿರಿಯೂರು ತಾಲ್ಲೂಕು ಬಂದ್ ಮಾಡಲಾಗುವುದು. ಫೆಬ್ರವರಿ 12 ರಂದು ಹಿರಿಯೂರು ನಗರದಿಂದ ಚಿತ್ರದುರ್ಗ ಕ್ಕೆ ಪಾದಯಾತ್ರೆ. ಫೆಬ್ರವರಿ 13- ರಂದು ಜಿಲ್ಲಾಧಿಕಾರಿ ಕಛೇರಿ ಹಾಗೂ ನೀರಾವರಿ ಇಲಾಖೆಗಳಿಗೆ ಮುತ್ತಿಗೆ ಹಾಕಿ ಸಮಾವೇಶ ನಡೆಸಲಾಗುವುದು ಎಂದರು

   ಕೆರೆಗಳಿಗೆ ನೀರು ಹರಿಸುವ ಯೋಜನೆ ಬರೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಕೂಗು ಸರ್ಕಾರದ ಆದೇಶ ಬರವರಿಗೂ ನಮ್ಮ ಹೋರಾಟ ಎಂದಿಗೂ ಹೋರಾಟ ಕೈ ಬಿಡುವುದಿಲ್ಲ  ಎಂದು ಎಚ್ಚರಿಸಿದರು.

ಒತ್ತಾಯಗಳ ಈಡೇರಿಕೆಗಾಗಿ ನಾವು ಇನ್ನೂ ನೀರಿನ ಮೋಸದ ಭರವಸೆಗಳಿಗೆ ಮಣಿಯುವುದಿಲ್ಲ ಎಂಬ ದೃಢ ಸಂಕಲ್ಪದೊಂದಿಗೆ ಜನಪರ, ನೆಲ, ಜಲ, ಭಾಷಾಪರ ಜಿಲ್ಲೆಯ ಅಭಿವೃದ್ಧಿಪರ ಸಂಘಟನೆಗಳು ನಾಗರೀಕರು ಸಮಾನ ಜವಾಬ್ದಾರಿಯಿಂದ ಹೋರಾಟಕ್ಕಿಳಿಯಬೇಕೆಂದು ಕರೆಕೊಟ್ಟರು. 

ಒತ್ತಾಯಗಳು:
1) ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ಬಜೆಟ್ ಅಲ್ಲಿ ಘೋಷಿಸಿರುವ 5300 ಕೋಟಿ ಹಣ ತುರ್ತಾಗಿ ಬಿಡುಗಡೆ ಮಾಡಬೇಕು.
2) ರಾಜ್ಯ ಸರ್ಕಾರ ಬರುವ
26-27 ನೇ ಸಾಲಿನ ಬಜೆಟ್ ಅಧಿವೇಶದಲ್ಲಿ 5000 ಕೊಟಿ ಹಣ ಮೀಸಲಿಡಬೇಕು.
3) ಕಲ್ಪಳ್ಳಿಭಾಗದ ಗಾಯಿತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ತುರ್ತಾಗಿ ಪ್ರಾರಂಭಿಸಬೇಕು.

4) ಐಮಂಗಲ ಹಾಗೂ ಕಸಬಾ ಹೋಬಳಿಯ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಬೇಕು.
5) ಧರ್ಮಪುರ ಹೋಬಳಿಯ ಉಳಿದ ಕೆರೆಗಳಿಗೆ ನೀರು ತುಂಬಿಸುವ ಕಾಮಾರಿಯನ್ನು ಕೈಗೆತ್ತಿಕೊಳ್ಳಬೇಕು.
6) ವಾಣಿ ವಿಲಾಸ ಜಲಾಶಯಕ್ಕೆ 5 ಟಿ.ಎಂ.ಸಿ.ನೀರು ಮೀಸಲಿಡಬೇಕು. ಸರ್ಕಾರಗಳು ನಮ್ಮ ಅನಿರ್ದಿಷ್ಟ ಧರಣಿಗೆ ಮಣಿಯದ್ದಿರೆ ಎಲ್ಲಾ ತಾಲ್ಲೂಕುಗಳಿಂದ ಪಾದಯಾತ್ರೆಯ ಮೂಲಕ ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಛೇರಿಗೆ ಮುತ್ತಿಗೆ ಹಾಕಿ ಸಮಾವೇಶ ನಡೆಸಲಾಗುವುದು.

 ಈ ಸಮಾವೇಶದಲ್ಲಿ ನೀರಾವರಿ ಸಚಿವರು ಸಭೆಗೆ ಬಂದು ನಿರ್ಧಾರ ಪ್ರಕಟಿಸಬೇಕು. ಒಂದು ವೇಳೆ ನಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯದೇ ಇದ್ದರೆ ವಿಧಾನಸೌಧ ಚಲೋ ನಡೆಸಿ, ಫ್ರೀಡಂ ಪಾರ್ಕಲ್ಲಿ ಚಳುವಳಿ ಮುಂದುವರಿಸಲಾಗುವುದು. ಕೇಂದ್ರ ಸರ್ಕಾರ ನೀರಾವರಿಗಾಗಿ ಘೋಷಿಸಿರುವ ಹಣ ಬಿಡುಗಡೆ ಮಾಡದಿದ್ದಲ್ಲಿ ದೆಹಲಿಯ  ಚಳುವಳಿ ಹಮ್ಮಿಕೊಳ್ಳಲಾಗುವುದು.

ಈ ಸಂದರ್ಭದಲ್ಲಿ ಕೆ.ಟಿ ತಿಪ್ಪೇಸ್ವಾಮಿ ತಾಲ್ಲೂಕು ಅಧ್ಯಕ್ಷರು, ಬಳಗಟ್ಟೆ ಸಿ.ವೆಂಕಟೇಶ್ಗೌರವಾಧ್ಯಕ್ಷ ಆಲೂರು ಸಿದ್ದರಾಮಣ್ಣ, ರಾಜ್ಯ ಸಮಿತಿಯ ಪದಾಧಿಕಾರಿಗಳು: ಕಾರ್ಯಾಧ್ಯಕ್ಷ ಈಚಗಟ್ಟಿ ಸಿದ್ದವೀರಪ್ಪ, ಹೊಳಲ್ಕೆರೆ ತಾಲ್ಲೂಕು, ರಾಜ್ಯ ಉಪಾಧ್ಯಕ್ಷರು - ರೆಡ್ಡಿಹಳ್ಳಿ ವೀರಣ್ಣ, ಚಳ್ಳಕೆರೆ ತಾ. ರಾಜ್ಯ ಕಾರ್ಯಾಧ್ಯಕ್ಷರು, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಳ್ಳಕೆರೆ ಚಿಕ್ಕಣ್ಣ, ಬೊಂಬೇರಹಳ್ಳಿ, ಜಿಲ್ಲಾ ಸಮಿತಿ ಪದಾಧಿಕಾರಿ ಅರಳೀಕೆರೆ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ