ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಜಂಟಿ ನೇತೃತ್ವದಲ್ಲಿ ಈ ವರ್ಷದ 'ಹಿಂದೂ ಮಹಾ ಗಣಪತಿ' ಮಹೋತ್ಸವದ ಪ್ರಮುಖ ಸಮಿತಿಯನ್ನು ಅಧಿಕೃತವಾಗಿ ರಚನೆ ಮಾಡಲಾಗಿದೆ. ನೂತನ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ರೆಡ್ಡಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸುವ ನಿಟ್ಟಿನಲ್ಲಿ ಪ್ರಮುಖ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಮಿತಿಯ ವಿವರ ಇಲ್ಲಿದೆ:
ನೂತನ ಪದಾಧಿಕಾರಿಗಳ ಪಟ್ಟಿ: ಅಧ್ಯಕ್ಷರು: ಪ್ರಥಮ ದರ್ಜೆ ಗುತ್ತಿಗೆದಾರ ನಾರಾಯಣ ರೆಡ್ಡಿ, ಉಪಾಧ್ಯಕ್ಷರು: ಗೋವಿಂದಾಚಾರ್, ಕಾರ್ಯದರ್ಶಿ: ಪ್ರಭಾಕರ್, ಖಜಾಂಚಿಗಳು: ಬೋಜರಾಜ್ ಮತ್ತು ಮುರಳಿಧರ್.

ಈ ಸಂದರ್ಭದಲ್ಲಿ ವೆಂಕಟೇಶ್ ಜಿ., ಚೇತನ್, ನವೀನ್, ಚೇತನ್, ಮಧು, ಪ್ರಶಾಂತ್, ಚಿನ್ಮಯ್, ಆರ್.ಟಿ. ಮಂಜುನಾಥ್, ಮೇಣು ಜಗದೀಶ್, ಧನುಷ್, ಕಿಶನ್ ರೆಡ್ಡಿ, ಮನೋಜ್, ಅಮರನಾಥ್, ರಾಜೇಂದ್ರ ದೇಸಾಯಿ, ಕಾಂತರಾಜ್, ರಾಜಣ್ಣ, ಮಂಜಣ್ಣ, ಸಂದೀಪ್ ನಾಯಕ್, ಲೋಕೇಶ್ ನಾಯಕ್ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



