Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ದೇಶದ ಪ್ರಥಮ ಗೂಢಾಚಾರಿಣಿ, ಅಪ್ರತಿಮ ದೇಶಭಕ್ತೆಯಾಗಿ ಸೇವೆ ಸಲ್ಲಿಸಿದ ನೀರಾಆರ್ಯ

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟ್ ನಲ್ಲಿ ದೇಶದ ಪ್ರಥಮ ಗೂಢಾಚಾರಿಣಿಯಾಗಿ ಸೇವೆ ಸಲ್ಲಿಸಿ ಅಪ್ರತಿಮ ದೇಶಭಕ್ತರಾದ ನೀರಾಆರ್ಯರವರ ದೇಶ ಸೇವೆ ಮರೆಯಲಾಗದು ಎಂದು ನಿವೃತ್ತ ಮುಖ್ಯ ಶಿಕ್ಷಕರು
, ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕಿ ವಿಜಯಲಕ್ಷ್ಮಿ ತಿಳಿಸಿದರು.


ಇಲ್ಲಿನ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಐಎನ್ಎ ವೀರ ಸೈನಿಕೆ ನೀರಾ ಆರ್ಯ ಜನ್ಮದಿನ ಆಚರಣೆಯ ಅಂಗವಾಗಿ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಪ್ರತಿಮ ವೀರ ಸೈನಿಕರಾದ ನೀರಾ ಆರ್ಯ ರವರ ಜನ್ಮದಿನದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.


 ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅತ್ಯಂತ ಕಷ್ಟಕರವಾದ ಹಿಂಸೆಗೆ ಒಳಗಾದ ನೀರಾ ಆರ್ಯರವರನ್ನು ಬ್ರಿಟಿಷರು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ದೇಶಪ್ರೇಮದ ನೀರಾ ಆರ್ಯ ನೇತಾಜಿಯವರ ಬಗ್ಗೆ ಯಾವುದೇ  ರಹಸ್ಯವನ್ನು ಬಿಟ್ಟು ಕೊಡದೆ ಇಂಡಿಯನ್ ನ್ಯಾಷನಲ್ ಆರ್ಮಿಯ ಶ್ರೇಷ್ಠ ಸೈನಿಕರಾಗಿ ಸೇವೆ ಸಲ್ಲಿಸಿದ ಮಹಾನ್ ವೀರ ಗೂಡಾಚಾರಿಣಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡುತ್ತ ನೀರ ಆರ್ಯ ಭಾರತದ ಹೆಮ್ಮೆಯ ವೀರ ವನಿತೆ. ಸುಭಾಷ್ ಚಂದ್ರ ಬೋಸ್ ರವರ ರಹಸ್ಯವಿಷಯಗಳನ್ನು ತಿಳಿಸಲು ನಿರಾಕರಿಸಿದ ನೀರಾ ರವರನ್ನು ಅಂಡಮಾನ್ ಜೈಲಿಗೆ ಕಳುಹಿಸಲಾಯಿತು. ನೀರಾ ಆರ್ಯ ರವರ ಸ್ತನಗಳನ್ನು ಕತ್ತರಿಸುವ ಮೂಲಕ ಅಟ್ಟಹಾಸ ಮೆರೆದ ಬ್ರಿಟಿಷರ ಕ್ರೂರ ಹಿಂಸೆಗೆ ಒಳಗಾದವರು ನೀರ ಆರ್ಯ.

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪ್ರಾಣತೆಗೆಯಲು ಹಾರಿಸಿದ ಗುಂಡು ಸುಭಾಷ್ ಅವರ ಚಾಲಕನಿಗೆ ತಗುಲಿ ಪ್ರಾಣ ಅರ್ಪಣೆಯಾಯಿತು. ಸುಭಾಷ್ ರವರನ್ನು ರಕ್ಷಿಸಲು ನೀರಾ ರವರು ಬ್ರಿಟಿಷ್ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಪತಿಯನ್ನೇ ಕೊಂದು ಹಾಕಿದ ಧೀರ ಮಹಿಳೆ. ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಹಿಳೆಯರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಮರೆಯಬಾರದು. ಪ್ರತಿ ಮನೆಮನೆಗಳಲ್ಲೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನ್ ವೀರರನ್ನು ಸ್ಮರಿಸಿಕೊಳ್ಳುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕು .

ಇತ್ತೀಚೆಗೆ ನಟಿ ರೂಪ ಅಯ್ಯರ್ ರವರು ನೀರ ಆರ್ಯ ರವರ ಹೋರಾಟದ ಕುರಿತು ಆಜಾದ್ ಭಾರತ್ ಎಂಬ ಜೀವನ ಚರಿತ್ರೆಯ ಚಲನಚಿತ್ರವನ್ನು ತೆಗೆದಿರುವುದು ಸಂತೋಷವಾಗಿದೆ . ಪ್ರತಿಯೊಬ್ಬ ಭಾರತೀಯರು ಆಜಾದ್ ಭಾರತ್ ಚಲನಚಿತ್ರವನ್ನು ವೀಕ್ಷಿಸಬೇಕಾಗಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಸರಸ್ವತಿ, ಕುಸುಮ,ಶಿಕ್ಷಕರಾದ ಮಂಜುಳ, ಬೋಜರಾಜ್, ಬಿಕೆ ಆರಾಧ್ಯ , ಭರತ್ ಜೈನ್ ಹಾಗೂ ಶ್ರಾವ್ಯ ಋಗ್ವೇದಿ ಇದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು