Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪಾರ್ಟ್‌ಮೆಂಟ್ ಮಾಲೀಕತ್ವ ರಕ್ಷಣೆಗೆ ಹೊಸ ಮಸೂದೆ: ಆತುರದ ಅಂಗೀಕಾರವಿಲ್ಲ ಸಿಎಂ ಡಿಕೆಶಿ

Advertisement
Advertisement

​ ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಜೀವನಪೂರ್ತಿ ಕಷ್ಟಪಟ್ಟು ದುಡಿದು ಅಪಾರ್ಟ್‌ಮೆಂಟ್ ಖರೀದಿಸಿರುವ ಮಾಲೀಕರ ಆಸ್ತಿಗೆ ಸಂಪೂರ್ಣ ಕಾನೂನು ರಕ್ಷಣೆ ದೊರೆಯಬೇಕು. ಆಸ್ತಿ ಹಸ್ತಾಂತರವಾಗುವಾಗ ಅದರ ಮೇಲಿನ ಸಂಪೂರ್ಣ ಹಕ್ಕು ಹಾಗೂ ನಿಜವಾದ ಮಾಲೀಕತ್ವ ಗ್ರಾಹಕರಿಗೇ ಸಿಗಬೇಕು," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೃಢವಾಗಿ ಹೇಳಿದ್ದಾರೆ.

​ಬುಧವಾರ ಬೆಂಗಳೂರಿನಲ್ಲಿ ನಡೆದ 'ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2026' ಕುರಿತ ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ನಿವಾಸಿಗಳ ಸಂಘಗಳ ಪ್ರತಿನಿಧಿಗಳ ಮಹತ್ವದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

​ಆತುರದ ಅಂಗೀಕಾರವಿಲ್ಲ, ಸಾರ್ವಜನಿಕರ ಸಲಹೆಗೆ ಅವಕಾಶ:
​ಈ ಮಸೂದೆಯನ್ನು ಸರ್ಕಾರ ಯಾವುದೇ ಆತುರದಲ್ಲಿ ಅಥವಾ ಬಲವಂತವಾಗಿ ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ವಿಧಾನಸಭೆ ಅಧಿವೇಶನಕ್ಕೂ ಮುನ್ನ ಸಾಕಷ್ಟು ಸಮಯವಿದ್ದು, ಮೊದಲು ಸಚಿವ ಸಂಪುಟದ ಮುಂದೆ ಮಸೂದೆ ಬರಲಿದೆ. ಅದಕ್ಕೂ ಮುನ್ನ ಅಪಾರ್ಟ್‌ಮೆಂಟ್ ಸಂಘಗಳು, ಬಿಲ್ಡರ್‌ಗಳು, ಕಾನೂನು ತಜ್ಞರು ಹಾಗೂ ರಾಜಕೀಯ ಪಕ್ಷಗಳ ಉತ್ತಮ ಸಲಹೆಗಳನ್ನು ಪಡೆದು ಮಸೂದೆಗೆ ಅಂತಿಮ ರೂಪ ನೀಡಲಾಗುವುದು ಎಂದು ಭರವಸೆ ನೀಡಿದರು.

​ಮೂಲ ದಾಖಲೆ ತಡೆಹಿಡಿಯುವ ಬಿಲ್ಡರ್‌ಗಳಿಗೆ ಎಚ್ಚರಿಕೆ:
ಬ್ಯಾಂಕ್‌ಗಳಲ್ಲಿ ಅಡಮಾನ ಇಟ್ಟಿರುವ ನೆಪ ಹೇಳಿ ಮನೆ ಖರೀದಿದಾರರಿಗೆ ಮೂಲ ಆಸ್ತಿ ದಾಖಲೆಗಳನ್ನು ಹಸ್ತಾಂತರಿಸದ ಬಿಲ್ಡರ್‌ಗಳನ್ನು ಸದ್ಯದಲ್ಲೇ ಚರ್ಚೆಗೆ ಕರೆಯಲಾಗುವುದು. ಇಂತಹ ಕ್ರಮಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಿಎಂ ಎಚ್ಚರಿಸಿದರು.

​‘ಭೂಮಿ ಗ್ಯಾರಂಟಿಹಾಗೂ ಬೆಂಗಳೂರು ಮೂಲಸೌಕರ್ಯ:
​6ನೇ ಗ್ಯಾರಂಟಿ ಜಾರಿ: ಸರ್ಕಾರದ ಆರನೇ ಗ್ಯಾರಂಟಿ ಯೋಜನೆ ಎನ್ನಲಾದ 'ಭೂಮಿ ಗ್ಯಾರಂಟಿ' ಮೂಲಕ ಲಂಚಮುಕ್ತವಾಗಿ ಆಸ್ತಿ ಮಾಲೀಕರಿಗೆ ಖಾತಾ ಪ್ರಮಾಣಪತ್ರ ನೀಡಲಾಗುತ್ತಿದೆ. ಈಗಾಗಲೇ 40 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, 26 ಲಕ್ಷ ಖಾತಾಗಳನ್ನು ವಿತರಿಸಲಾಗಿದೆ.

1.5 ಲಕ್ಷ ಕೋಟಿ ಯೋಜನೆಗಳು: ಬೆಂಗಳೂರಿನ ಮೂಲಸೌಕರ್ಯ ವಿಸ್ತರಣೆಗೆ ವಿವಿಧ ಇಲಾಖೆಗಳ ಮೂಲಕ 1.5 ಲಕ್ಷ ಕೋಟಿ ಮೌಲ್ಯದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಹಾಗೂ ಗುಂಡಿ ಮುಚ್ಚಲು 4,000 ಕೋಟಿ ಮಂಜೂರು ಮಾಡಲಾಗಿದೆ. ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮನೆಗಳು ಇಂದಿಗೂ ಕೈಗೆಟುಕುವ ದರದಲ್ಲಿವೆ ಎಂದು ಸಿಎಂ ತಿಳಿಸಿದರು.

​ಆನ್‌ಲೈನ್ ಮೂಲಕ ಸಲಹೆ ಆಹ್ವಾನ: ಸಚಿವ ಕೃಷ್ಣ ಬೈರೇಗೌಡ
​ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ
, ಈ ಸಭೆಯ ಮೂಲ ಉದ್ದೇಶ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದೇ ಆಗಿದೆ ಎಂದರು. ಕರಡು ಮಸೂದೆಯ ಪ್ರಮುಖ ಅಂಶಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಕಾನೂನು ತಜ್ಞರು [email protected] ಇ-ಮೇಲ್ ವಿಳಾಸಕ್ಕೆ ತಮ್ಮ ಅನಿಸಿಕೆಗಳನ್ನು ಕಳುಹಿಸಬಹುದು ಎಂದು ಮಾಹಿತಿ ನೀಡಿದರು.

​ತ್ಯಾಜ್ಯ ನಿರ್ವಹಣೆ ದರ ಸ್ಪಷ್ಟನೆ: ಅಪಾರ್ಟ್‌ಮೆಂಟ್‌ಗಳ ಘನತ್ಯಾಜ್ಯ ನಿರ್ವಹಣೆ ಶುಲ್ಕದ ಕುರಿತು ಮಾತನಾಡಿದ ಸಚಿವರು, "ಸರ್ಕಾರ ಗರಿಷ್ಠ 12 ಮಾತ್ರ ನಿಗದಿಪಡಿಸಿದೆ, ಇದು ಕಡ್ಡಾಯ ದರವಲ್ಲ. ಅಪಾರ್ಟ್‌ಮೆಂಟ್ ಸಂಘ ಮತ್ತು ಸೇವಾ ಸಂಸ್ಥೆಗಳ ನಡುವೆ ಮಾತುಕತೆಯ ಮೂಲಕ ದರ ನಿರ್ಧಾರವಾಗಬಹುದು. ಏಕಸ್ವಾಮ್ಯ ತಡೆಯಲು ಹೆಚ್ಚಿನ ಸಂಸ್ಥೆಗಳನ್ನು ನೋಂದಾಯಿಸಲಾಗುವುದು," ಎಂದರು.

​ಹೊಸ ಮಸೂದೆಯಲ್ಲಿ ಗೊಂದಲ ನಿವಾರಣೆ: ತುಷಾರ್ ಗಿರಿನಾಥ್
​ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ
, "ಹಳೆಯ ಕಾನೂನಿನಲ್ಲಿದ್ದ ಪ್ರಮುಖ ತೊಡಕುಗಳನ್ನು ಈ ಹೊಸ ಕರಡು ಮಸೂದೆಯಲ್ಲಿ ನಿವಾರಿಸಲಾಗಿದೆ. ಹಿಂದೆ ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳಿಗೆ ಕಡ್ಡಾಯ ನೋಂದಣಿ ಇರಲಿಲ್ಲ, ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ. ಬಿಲ್ಡರ್‌ಗಳು ಕಾಮನ್ ಏರಿಯಾವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದ ಗೊಂದಲಕ್ಕೂ ಹೊಸ ಕಾನೂನಿನಲ್ಲಿ ಬ್ರೇಕ್ ಹಾಕಲಾಗಿದೆ," ಎಂದು ಸ್ಪಷ್ಟಪಡಿಸಿದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.