Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಸಮರ್ಪಣೆ

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಕನ್ನಡದ ಭೋಜ ಎಂದೇ ಪ್ರಸಿದ್ಧರಾದ ಮೈಸೂರು ಸಂಸ್ಥಾನದ ಶ್ರೇಷ್ಠ ಸುಧೀರ್ಘ ಆಡಳಿತಗಾರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಸಮರ್ಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅರ್ಪಿಸಲಾಯಿತು.

 ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಂಸ ಸಭಾಂಗಣದಲ್ಲಿ ಜರುಗಿದ ಮು ಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಹಾಗೂ ಮೈಸೂರು ಸಂಸ್ಥಾನದ ಕೊಡುಗೆಗಳ ಕುರಿತು ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುರೇಶ್ ಎನ್ ಋಗ್ವೇದಿ ಮೈಸೂರು ಸಂಸ್ಥಾನದಲ್ಲಿ ಸುದೀರ್ಘ ಆಡಳಿತವನ್ನು ನೆರವೇರಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಸಮಗ್ರ ಅಭಿವೃದ್ಧಿಯ ಜೊತೆಗೆ ಕಲೆ, ಸಾಹಿತ್ಯ, ಸಂಗೀತ,ನೃತ್ಯ, ವರ್ಣಕಲೆ, ಚಿತ್ರಕಲೆ, ಶಿಲ್ಪ ಕಲೆಗಳಿಗೆ ಅಪಾರ ಕೊಡುಗೆಯನ್ನು ನೀಡಿದ ಮಹಾದೂರದೃಷ್ಟಿಯ ಅರಸರು.  

Advertisement

ಅರಿಕೊಟಾರವನ್ನು ಚಾಮರಾಜನಗರ ಎಂಬ ನೂತನ ಹೆಸರು ಇಟ್ಟು ಹೊಸ ನಗರ ನಿರ್ಮಿಸುವ ಮೂಲಕ ಭಾರತ ದೇಶದಲ್ಲಿ ಚಾಮರಾಜನಗರ ತನ್ನದೇ ಆದ ಇತಿಹಾಸ ಸಂಸ್ಕೃತಿ ಗೌರವಕ್ಕೆ ಪಾತ್ರವಾಗಲು ಮುಮ್ಮಡಿ ಕೃಷ್ಣರಾಜ ಒಡೆಯರವರೇ ಕಾರಣ. ಮುಮ್ಮಡಿ. ಕೃಷ್ಣ ರಾಜ ಒಡೆಯರ್ ರವರ ಗೌರವವನ್ನು ಹೆಚ್ಚಿಸಲು ಅವರ ಪ್ರತಿಮೆ ಸ್ಥಾಪಿಸುವ ಮೂಲಕ 200 ವರ್ಷಗಳು ಚಾಮರಾಜನಗರದ ರಥೋತ್ಸವಕ್ಕೆ 200ವರ್ಷವಾಗು ಗುತ್ತಿರುವ  ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಿ ಗೌರವ ನೀಡಬೇಕು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಹೊಸಗನ್ನಡದ ಮೊದಲ ಗ್ರಂಥವಾದ  ಮುದ್ರಾ ಮಂಜೂಷ ಕರ್ತೃ ಕೆಂಪುನಾರಾಯಣ ರಿಗೆ ಆಶ್ರಯ ನೀಡಿದವರು. ಇವರಲ್ಲದೇ ಪ್ರಸಿದ್ಧ ಸಾಹಿತಿ ದೇವಚಂದ್ರ, ವೆಂಕಟರಮಣ ಶಾಸ್ತ್ರಿ ರವರು ಅವರ ಆಸ್ಥಾನವನ್ನು ಅಲಂಕರಿಸಿದ್ದರು. ಮಹಾನ್ ಸಂಗೀತಗಾರರಾದ ತ್ಯಾಗರಾಜ ರನ್ನು ಆಹ್ವಾನಿಸಿ ಗೌರವಿಸಿ ಸನ್ಮಾನಿಸಿದ ಕೀರ್ತಿ ಮುಮ್ಮಡಿ ಅವರಿಗೆ ಸಲ್ಲುತ್ತದೆ. ಮೊಟ್ಟಮೊದಲ ಬಾರಿಗೆ ಮುದ್ರಣ ಯಂತ್ರವನ್ನು  ಸ್ಥಾಪಿಸುವ ಮೂಲಕ ಅನೇಕ ಕನ್ನಡ ಪುಸ್ತಕಗಳ ರಚನೆಗೆ ಕಾರಣರಾದ   ಒಡೆಯರ್ ಪೂಜನೀಯರು ಎಂದು ತಿಳಿಸಿದರು.

 ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ತಂದೆ ತಾಯಿಯ ಹೆಸರನ್ನು ತಿರಸ್ತಾಯಿಯಾಗಿ ಮಾಡುವ ಮೂಲಕ ತಮ್ಮ ತಂದೆ ಚಾಮರಾಜ ಒಡೆಯರ್ ಮತ್ತು ತಾಯಿ ಕೆಂಪನಜಾಂಬ ರವರ ಹೆಸರಿನಲ್ಲಿ ವಿಶೇಷವಾಗಿ ದೇವಾಲಯವನ್ನು ನಿರ್ಮಾಣ ಮಾಡಿದವರು. ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸುವ ಮೂಲಕ ಚಾಮರಾಜನಗರದ ಮೂಲ ದೇವತೆಗೆ ಅಗ್ರಸ್ಥಾನವನ್ನು ನೀಡಿದ ವ್ಯಕ್ತಿ. ಚಾಮರಾಜನಗರ ಅಭಿವೃದ್ಧಿ ಕಾರಣರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಆಚರಿಸುತ್ತಿರುವುದು ಬಹಳ ಸಂತೋಷ ಎಂದರು. ಚಾಮರಾಜನಗರ ಅಭಿವೃದ್ಧಿಗೆ ಶ್ರಮಿಸಿದವರನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ಮಹಾರಾಜರನ್ನು ನೆನಪಿಸಿ ಕೊಳ್ಳುವುದೇ ಒಂದು ಪುಣ್ಯ ಎಂದು ತಿಳಿಸಿದರು.

 ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಕಹಳೆ ಮಾತನಾಡಿ  ಮೈಸೂರು ಸಂಸ್ಥಾನ ಹಾಗೂ ಚಾಮರಾಜನಗರಕ್ಕೂ ಅಪಾರ ಪ್ರೀತಿ ಬಾಂಧವ್ಯ ಇದೆ. ಚಾಮರಾಜನಗರದ  ಸಂಬಂಧದ ಸಾಕ್ಷಿಯಾಗಿ ಚಾಮರಾಜನಗರದಲ್ಲಿ ರಾಜಮುದ್ರೆ ಇರುವುದನ್ನು ನಾವು ಕಾಣಬಹುದು.ಪ್ರತಿ ವರ್ಷಶ್ರೀ ಚಾಮರಾಜೇಶ್ವರ ರಥೋತ್ಸವದ ಸಂದರ್ಭದಲ್ಲಿ ಎಲ್ಲಾ ಜನಾಂಗದವರ ಭಾವೈಕ್ಯತೆಗೆ ಸಾಕ್ಷಿಯಾಗಿ ಪೂಜಿಸುವ ಪದ್ಧತಿಯ ಇದೆ. ಮೈಸೂರು ಮಹಾರಾಜರೇ ನಗರದ ಏಕತೆಗೆ ಸಾಕ್ಷಿಯಾಗಿದ್ದಾರೆ  ಎಂದರು.

 ಪ್ರಾಚಾರ್ಯಹಾಗೂ ಗಾಯಕರಾದ ಕಾಗಲವಾಡಿ ರಂಗಸ್ವಾಮಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಂಸ್ಥಾನದ ಒಡೆಯರ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಚರಿಸುತ್ತಿದೆ. ಮಹಾರಾಜರ ಗೌರವಾರ್ಥ ಸಂಗೀತ ಕಾರ್ಯಕ್ರಮವನ್ನು ಗಾಯನ ಕಾರ್ಯಕ್ರಮವನ್ನು ರೂಪಿಸೋಣ. ಎಲ್ಲಾ ಕಲಾವಿದರು ಅವಕಾಶ ನೀಡಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉತ್ತಮ ಸಂಘಟಕರಾದ ಋಗ್ವೇದಿಯವರಿಗೆ ವಿಶೇಷ ಅಭಿನಂದನೆಗಳನ್ನು   ತಿಳಿಸಿದರು.

 ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ,ಶಿವಲಿಂಗ ಮೂರ್ತಿ, ಸರಸ್ವತಿ,ಚಿತ್ರ ಕಲಾವಿದ ಮಹಮದ್ ಗೌಸ್, ಹರದನಹ ಳ್ಳಿ ಮದನ್ ಕುಮಾರ್  ಇದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು