Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳು ವಿನಯ, ವಿಧೇಯತೆ ಮತ್ತು ದಾನಶೀಲತೆ ರೂಢಿಸಿಕೊಳ್ಳಬೇಕು: ವೈ ರಾಜಾರಾಮ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿನಯ, ವಿಧೇಯತೆ ಮತ್ತು ದಾನಶೀಲತೆಯಂತಹ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಾಧಕರಾಗಿ ಹೊರಹೊಮ್ಮಬೇಕು ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷ ವೈ.ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು.

 

ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಆವರಣದಲ್ಲಿ ಶ್ರೀನರಹರಿ ಸೇವಾ ಪ್ರತಿಷ್ಠಾನದಿಂದ "ಬ್ರಹ್ಮಶ್ರೀ ಸಿಂಹಾದ್ರಿ ಸದ್ಗುರುಗಳ 106ನೇ ವರ್ಷ"ದ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ 2025-2026ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ‌.ಯು.ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ‌ಚಳ್ಳಕೆರೆ ನಗರ ಹಾಗೂ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 93 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗರಂಗೆರೆ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಯವರಿಗೆ ಗೌರವಧನ  ನೀಡಿ ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.

 

ಮುಖ್ಯ ಶಿಕ್ಷಕ ಮತ್ತು ನರಹರಿ ಆಶ್ರಮದ ಸದ್ಭಕ್ತ ಮಲ್ಲಿಕಾರ್ಜುನಪ್ಪ ಅವರು ಕಾರ್ಯಕ್ರಮ ಶಿಸ್ತುಬದ್ಧವಾಗಿ ನಿರೂಪಿಸಿ ಸಿಂಹಾದ್ರಿ ಸದ್ಗುರುಗಳ ಜೀವನ ಮತ್ತು ಸಾಧನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.       

ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಎನ್ ಪದ್ಮನಾಭ ಬಿ.ಸಿ ಸಂಜೀವಮೂರ್ತಿ, ರವಿ, ರಾಜೇಶ್ವರಿ ರಾಜಾರಾಮ್, ಲಂಕೇಶಪ್ಪ, ಧನಂಜಯ, ಯತೀಶ್ ಎಂ ಸಿದ್ದಾಪುರ, ಐಶ್ವರ್ಯ, ಹಂಸಿನಿ, ಸುಹಾಸ್, ನೇತ್ರಾ,ದವನ, ವಿದ್ಯಾ, ಬಿಂದುಶ್ರೀ, ಸ್ಕಂದನ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.