Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಫೆ.೧೭ರಂದು ಕಿಲಾರಿ ಕಲರವ ಪಶುಪಾಲಕ ಬುಡಕಟ್ಟು ಕಿಲಾರಿಗಳ ಅಸ್ಮಿತೆ: ವಿಚಾರ-ಮಾತು ಕತೆ-ಹಾಡಿಕೆ

ಫೆ.೧೭ರಂದು ಕಿಲಾರಿ ಕಲರವ
ಪಶುಪಾಲಕ ಬುಡಕಟ್ಟು ಕಿಲಾರಿಗಳ ಅಸ್ಮಿತೆ: ವಿಚಾರ-ಮಾತು ಕತೆ-ಹಾಡಿಕೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ

ರ‍್ನಾಟಕ ಜಾನಪದ ಅಕಾಡೆಮಿ, ರ‍್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ವಿಭಾಗಗಳು ಸಂಯುಕ್ತಾಶ್ರಯದಲ್ಲಿ ಇದೇ ಫೆ.೧೭ರಂದು ಬೆಳಿಗ್ಗೆ ೧೦.೩೦ಕ್ಕೆ ಚಿತ್ರದರ‍್ಗ ನಗರದ ರ‍್ಕಾರಿ ಕಲಾ ಕಾಲೇಜು ಪಿ.ಜಿ.ಸಭಾಂಗಣದಲ್ಲಿ “ಕಿಲಾರಿ ಕಲರವ” ಪಶುಪಾಲಕ ಬುಡಕಟ್ಟು ಕಿಲಾರಿಗಳ ಅಸ್ಮಿತೆ: ವಿಚಾರ-ಮಾತು ಕತೆ-ಹಾಡಿಕೆ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರ‍್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕರ‍್ಯಕ್ರಮ ಉದ್ಘಾಟಿಸುವರು. ಅಕಾಡೆಮಿ ಸದಸ್ಯ ಸಂಚಾಲಕ ಡಾ.ಮಲ್ಲಿಕರ‍್ಜುನ ಕಲಮರಹಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡುವರು. ರ‍್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸುವರು.

ರ‍್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತಾ, ರ‍್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಕರಿಯಪ್ಪ ಮಾಳಿಗೆ, ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಪ್ರೊ.ತಾರಿಣಿ ಶುಭದಾಯಿನಿ, ಸಮಾಜಶಾಸ್ತ್ರ ವಿಭಾಗದ ಪ್ರೊ.ವೈ.ಯಶೋಧಮ್ಮ ಗೌರವ ಉಪಸ್ಥಿತಿವಹಿಸುವರು. ಸಾಂಸ್ಕೃತಿಕ ಕರ‍್ಯರ‍್ಶಿ ಕೆ.ಮಂಜುನಾಥ್ ನರ‍್ವಹಣೆ ಮಾಡುವರು.
ಮಧ್ಯಾಹ್ನ ೧೨ಕ್ಕೆ ಗೋಷ್ಠಿ-೧ರಲ್ಲಿ “ಕಿಲಾರಿ ಸಂಪ್ರದಾಯಗಳು” ಎಂಬ ವಿಷಯ ಕುರಿತು ಡಾ.ಎಸ್.ಎಂ.ಮುತ್ತಯ್ಯ ಮಾತುನಾಡುವರು. “ಕಿಲಾರಿ ಕುಲಚಿಹ್ನೆಗಳು” ವಿಷಯ ಕುರಿತು ಪಿ.ಅರಡಿಮಲ್ಲಯ್ಯ ಕಟ್ಟೇರ ಮಾತುನಾಡುವರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಆರ್.ಶಿವಪ್ಪ, ರ‍್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ಗಂಗಾಧರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಿರೀಶ ನಾಯಕ ಉಪಸ್ಥಿತಿವಹಿಸುವರು. ಡಾ.ಜಿ.ಹೆಚ್.ನಾಗರ‍್ಮ ಅವರು ಗೋಷ್ಠಿ ನರ‍್ವಹಣೆ ಮಾಡುವರು.

ಮಧ್ಯಾಹ್ನ ೨.೩೦ಕ್ಕೆ ಗೋಷ್ಠಿ-೨ರಲ್ಲಿ ಕಿಲಾರಿಗಳೊಂದಿಗೆ ಮಾತು-ಕತೆಯಲ್ಲಿ ಕಂಪಳದೇವರಹಟ್ಟಿ ಕಿಲಾರಿ ಬೋರಯ್ಯ, ಮುತ್ತಿಗಾರಹಳ್ಳಿ ಕಿಲಾರಿ ಪಾಲಯ್ಯ ಭಾಗವಹಿಸಲಿದ್ದು, ಸಂವಾದಕರಾಗಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಸುರೇಶ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಶ್ಯಾಮರಾಜ, ಹಂಪಿಯ ಪೋಸ್ಟ್ ಡಾಕ್ಟರಲ್ ಫೆಲೋ ಡಾ.ಎಸ್.ಶಿವರಾಜ್, ಉಪನ್ಯಾಸಕ ಡಾ.ಡಿ.ಎಂ.ಪ್ರಹ್ಲಾದ್ ಭಾಗವಹಿಸುವರು.

ಇಂಗ್ಲಿಷ್ ವಿಭಾಗದ ಪ್ರೊ.ಟಿ.ಮುರುಳೀಧರ ನರ‍್ವಹಣೆ ಮಾಡುವರು.
ಮಧ್ಯಾಹ್ನ ೩.೩೦ಕ್ಕೆ ಗೋಷ್ಠಿ-೩ರಲ್ಲಿ ಕಿಲಾರಿ ಪದಗಾಯನದಲ್ಲಿ ನಲಗೇತನಹಟ್ಟಿಯ ಎಂ.ಮಂಜುನಾಥ, ಆರ್.ಎಂ.ಸಣ್ಣಬೋರಯ್ಯ ಹಾಗೂ ಗಡ್ಡದ ಬೋರಯ್ಯನಹಟ್ಟಿಯ ಕಿಲಾರಿ ಬೋರಯ್ಯ, ಪೂಜಾರಿ ಸಣ್ಣಪಾಲಯ್ಯ ಭಾಗವಹಿಸುವರು. ಸೋಬಾನೆ ಪದಗಾಯನದಲ್ಲಿ ಕಂಪಳದೇವರಹಟ್ಟಿಯ ಓಬಮ್ಮ ಬಡಬೋರಯ್ಯ, ಪಾಲಯ್ಯ, ಪಾಪಯ್ಯ, ಓಬಮ್ಮ ದು.ಪಾಪಯ್ಯ, ಓಬಮ್ಮ, ಕಾಟಯ್ಯ ಭಾಗವಹಿಸುವರು. ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಪ್ರಸಾದ್ ನರ‍್ವಹಣೆ ಮಾಡುವರು.

ಕಿಲಾರಿ ಕಲರವ: ಕಿಲಾರಿಗಳು ಮ್ಯಾಸಬೇಡರಲ್ಲಿ ಪ್ರಚಲಿತವಿರುವ ಸಂಪ್ರದಾಯ ಆಚರಣೆಗಳಲ್ಲಿ ಇಂದಿಗೂ ಗಟ್ಟಿಯಾಗಿ ಅಸ್ತಿತ್ವದಲ್ಲಿರುವ ಕಿಲಾರಿ ಸಂಪ್ರದಾಯವು ಒಂದು. ಪದ ಕೋಶಗಳು ಹೇಳುವಂತೆ “ಕಿಲಾರ್’ ಅಥವಾ “ಕಿಲಾರಿ” ಎಂದರೆ ದನಗಳ ವಿಶಿಷ್ಟವಾದ ಒಂದು ತಳಿ. ಈ ತಳಿಯ ದನಗಳನ್ನು ರ‍್ಕಾರದ ಅಧೀನದಲ್ಲಿ ಸಾಕಲಾಗುತ್ತಿತ್ತು ಎಂಬುದಾಗಿ ತಿಳಿದುಬರುತ್ತದೆ. ರ‍್ನಾಟಕದ ಹಲವು ಕಡೆಗಳಲ್ಲಿ ಕಿಲಾರಿ ದನಗಳು ಸಿಗುತ್ತವೆ. ಆದರೆ ಮ್ಯಾಸಬೇಡರ ಸಮುದಾಯದೊಳಗೆ ಕುರಿ ಕಿಲಾರಿ, ಎತ್ತಿನ ಕಿಲಾರಿ ಎನ್ನುವ ಪದ ಬಳಕೆ ಸಾಮಾನ್ಯವಾಗಿದೆ. ಕುರಿ ಕಾಯುವವನಿಗೆ ಕುರಿ ಕಿಲಾರಿ ಅಂದ್ರೆ, ಎತ್ತು ಕಾಯುವವನಿಗೆ ಎತ್ತಿನ ಕಿಲಾರಿ ಎನುತ್ತಾರೆ ಎಂದು ರ‍್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದ್ದಾರೆ.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು