ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಮ್ಮ ರಾಜ್ಯ
ನಮ್ಮ ರಾಜ್ಯ ನಮ್ಮ ಹೆಮ್ಮೆ,
ಹಳದಿ–ಕೆಂಪು ಬಾವುಟದ ಚೆಮ್ಮೆ.
ನಾಡಿನ ಪ್ರೇಮದ ಮಧುರ ಕಂಪು,
ಮನಕೆ ತಂಪು ನೀಡುವ ಇಂಪು.
ಇತಿಹಾಸ ಹೇಳುವ ಹಂಪಿಯ ನೆಲ,
ಗೌರವ ತುಂಬಿದ ಅಮೂಲ್ಯ ಫಲ.
ಸುಂದರ ಮೈಸೂರು ಮೆರೆಯುತಿದೆ,
ಕಮಲದ ಜಲದಲ್ಲಿ ಕಂಗೊಳಿಸುತ್ತಿದೆ.
ಜಲಪಾತಗಳ ಸಿರಿ ನೋಡಲು,
ಕಣ್ಣಿಗೆ ಹಬ್ಬವು ಮೂಡಲು.
ಕರ್ನಾಟಕದ ಸೌಂದರ್ಯವೆಲ್ಲ,
ಹೃದಯ ತಣಿಸುವ ನಮ್ಮ ನೆಲ.
ಕವಿತೆ:ಅನುಷ್ಕಾ, 8ನೇ ತರಗತಿ, ಒನ್ ವರ್ಲ್ಡ್ ಇಂಟರ್‌ನ್ಯಾಷನಲ್ ಸ್ಕೂಲ್, ಸರ್ಜಾಪುರ, ಬೆಂಗಳೂರು.


