Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಂ.ಎಫ್ ಹುಸೇನರ ಆಕ್ಷೇಪಾರ್ಹ ಚಿತ್ರಗಳನ್ನು ಸುರಕ್ಷಿತವಾಗಿಡಲು ಪಟಿಯಾಲ ನ್ಯಾಯಾಲಯ ಆದೇಶ

Advertisement
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಹಿಂದೂದ್ವೇಷಿ ಚಿತ್ರಕಾರ ಎಂ. ಎಫ್ ಹುಸೇನ್ ಇವರ ಹಿಂದೂ ದೇವಿ-ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಿದ್ದ ಪ್ರಕರಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳಿಂದ ನೀಡಲಾದ ದೂರಿನ ನಂತರ ಮಹತ್ವಪೂರ್ಣ ತೀರ್ಪು ಬಂದಿದೆ.


ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಮಹಾನಗರ ದಂಡಾಧಿಕಾರಿ ಸಾಹಿಲ ಮೋಂಗ ಇವರು ಡಿಸೆಂಬರ್ 4 ರಿಂದ ಡಿಸೆಂಬರ್  10, 2024 ವರೆಗಿನ ಸಿಸಿಟಿವಿ  ಫೂಟೇಜ್ ಗಳನ್ನು ಸುರಕ್ಷಿತವಾಗಿರಿಸಲು ಪೊಲೀಸರಿಗೆ ಆದೇಶ  ನೀಡಿದೆ. ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ನರೇಂದ್ರ ಸುರ್ವೆ ಇವರು,

ಈ ಆದೇಶ ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಡುವ ಯೋಧರ ಮತ್ತು ಹಿಂದೂ ಸಂಘಟನೆಗಳ ದೊಡ್ಡ ಗೆಲುವಾಗಿದೆ. ಈ ಆದೇಶದಿಂದ ಸತ್ಯ ಬೆಳಕಿಗೆ ತರಲು ಸಹಾಯವಾಗಲಿದೆ. ನಾವು ಸರಕಾರಕ್ಕೆ ಅಪರಾಧ ಮರೆಮಾಚಲು ಸಾಕ್ಷಿ ನಾಶ ಮಾಡುವವರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದರು.

ದಿಲ್ಲಿ ಆರ್ಟ್ ಗ್ಯಾಲರಿಯಲ್ಲಿನ ಹುಸೇನ್ : ದ ಟೈಮಲೇಸ್ ಮಾಡರ್ನಿಸ್ಟ್' ಈ ಪ್ರದರ್ಶನದಲ್ಲಿ ಹಿಂದೂ ದೇವಿ ದೇವತೆಯರ ನಗ್ನ ಮತ್ತು ಆಕ್ಷೇಪಾರ್ಹ ಚಿತ್ರಗಳ ಸಮಾವೇಶವಿತ್ತು. ಇದರಲ್ಲಿ ಒಂದು ಚಿತ್ರದಲ್ಲಿ ಭಗವಂತ ಗಣೇಶನ ತೊಡೆಯ ಮೇಲೆ ನಗ್ನ ಸ್ತ್ರೀ (ಬಹುತೇಕ ರೀದ್ಧಿ/ಸಿದ್ಧಿ) ತೋರಿಸಲಾಗಿದೆ. ಇನ್ನೊಂದು ಚಿತ್ರದಲ್ಲಿ ಭಗವಂತ ಹನುಮಂತ ಓರ್ವ ನಗ್ನ ಸ್ತ್ರೀಗೆ (ಬಹುಶಃ ಸೀತಾ ಮಾತೆ) ಕೈಯಲ್ಲಿ ಹಿಡಿದು ಹಾರುತ್ತಿರುವುದು ಕಾಣುತ್ತಿದೆ.

ಇನ್ನೊಂದು ಚಿತ್ರದಲ್ಲಿ ಶಂಕರನ ತೊಡೆಯ ಮೇಲೆ ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ. ಈ ಚಿತ್ರಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪ್ರಯತ್ನಪೂರ್ವಕವಾಗಿ ನೋವುಂಟು ಮಾಡುವುದಕ್ಕಾಗಿ ರೂಪಗೊಂಡಿವೆ ಎಂದು ಸ್ಪಷ್ಟವಾಗುತ್ತದೆ. ಸಮಿತಿಯು ಭಾರತೀಯ ದಂಡ ವಿಧಾನ ಕಲಂ 295 (A) ಮತ್ತು ನ್ಯಾಯ ಸಂಹಿತೆ ಕಲಂ 299 ಅಂತರ್ಗತ ಆಯೋಜಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿತ್ತು.

ದೂರಿನ ನಂತರ ಗ್ಯಾಲರಿ ವ್ಯವಸ್ಥಾಪಕರಿಂದ ವಿವಾದಿತ ಚಿತ್ರಗಳು ಗೌಪ್ಯವಾಗಿ ತೆಗೆಯಲಾದವು; ಆದರೆ ಪೊಲೀಸ್ ವಿಚಾರಣೆಯಲ್ಲಿ ಈ ಚಿತ್ರಗಳು ಪ್ರದರ್ಶನಗೊಂಡಿರುವುದರ ಕುರಿತು ನಿರಾಕರಿಸಿದರು. ಸಮಿತಿಯ ನ್ಯಾಯವಾದಿ ಅಮಿತಾ ಸಚದೇವ್ ಮತ್ತು ಇತರರು ಪಟಿಯಾಲ ನ್ಯಾಯಾಲಯದಲ್ಲಿ ಸುರಕ್ಷಿತ ಇರಿಸಲು ಮತ್ತು ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ದಾಖಲಿಸಲು ಆಗ್ರಹಿಸಿದ್ದಾರೆ.

ಸನ್ಮಾನ್ಯ ನ್ಯಾಯಾಲಯವು ಈ ಬೇಡಿಕೆ ಒಪ್ಪಿಕೊಂಡು ದೆಹಲಿ ಪೊಲೀಸರಿಗೆ ಆದೇಶ ನೀಡಿರುವುದು, ಸಂಬಂಧಿತ ಕಾಲಾವಧಿಯಲ್ಲಿನ ಫೂಟೇಜ್ ಸುರಕ್ಷಿತ ಇರಿಸಬೇಕು ಮತ್ತು ವರದಿ ಪ್ರಸ್ತುತಪಡಿಸಬೇಕು. ಮುಂದಿನ ವಿಚಾರಣೆ ಜನವರಿ 4, 2025 ರಂದು ನಡೆಯುವುದು ಎಂದು ಹೇಳಿದೆ.



ಈ ಹೋರಾಟದಲ್ಲಿ ಸರ್ವೋಚ್ಚ  ನ್ಯಾಯಾಲಯದ ಹಿರಿಯ ನ್ಯಾಯವಾದಿ ಮಕರಂದ ಆಡಕರ, ನ್ಯಾಯವಾದಿ ಶಾಂತನು, ನ್ಯಾಯವಾದಿ ಕೇಸರಿ, ನ್ಯಾಯವಾದಿ ವಿಕ್ರಂ, ನ್ಯಾಯವಾದಿ ಯಾದವೇಂದ್ರ, ಸನಾತನ ಸ್ವಾಭಿಮಾನ ಸಭೆಯ ಅಧ್ಯಕ್ಷ ಬ್ರಿಜೇಶ್ ಶರ್ಮಾ ಮತ್ತು ಸಮಿತಿಯ ವಕ್ತಾರರು  ನರೇಂದ್ರ ಸುರ್ವೆ ಇವರು ಸಹಭಾಗಿಯಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ