Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರಿನಲ್ಲಿ ಹಂದಿಗಳ ಕಾರ್ಯಾಚರಣೆ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆ ವತಿಯಿಂದ ವೇದಾವತಿ ನಗರದ ಕೆಲವು ವಾರ್ಡ್ ಗಳಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ನಗರ ನಿವಾಸಿ ಎಂ.ವೇಣುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇತ್ತೀಚೆಗೆ ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂಬ ವರದಿ ಕೆಲವು ಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನಗರಸಭೆ ಕಾರ್ಯಾಲಯ ಕ್ರಮ ವಹಿಸಿದೆ. ಹಂದಿ ಸಾಂಕ್ರಾಮಿಕ ಅತಿಸಾರ ವೈರಸ್ ಅಥವಾ ಹಂದಿ ತೀವ್ರ ಅತಿಸಾರ ಸಿಂಡ್ರೋಮ್ ಕೊರೊನಾವೈರಸ್‌ನಂತಹ ಹಂದಿ ಕೊರೊನಾ ವೈರಸ್‌ಗಳು ಮಾನವ ಜನಸಂಖ್ಯೆಗೆ ಹರಡುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಸಿದ್ದಾರೆ.


ಹಂದಿಗಳು ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳ ವಾಹಕಗಳಾಗಿವೆ. ಇವುಗಳಿಂದ ಹಂದಿ ಜ್ವರ ಮತ್ತು ಅತಿಸಾರ ಭೇದಿಯಂತಹ ಕಾಯಿಲೆಗಳು ಹರಡುವ ಅಪಾಯವಿರುತ್ತದೆ ಎಂದು ವೇಣುಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ರಸ್ತೆಗಳು, ಚರಂಡಿಗಳು ಮತ್ತು ಕಸದ ರಾಶಿಗಳ ಬಳಿ ಹಂದಿಗಳು ಅಲೆದಾಡುವುದರಿಂದ ಪರಿಸರ ಅಶುದ್ಧವಾಗುತ್ತದೆ. ಇವು ಚರಂಡಿಯ ಕೊಳಕನ್ನು ವಸತಿ ಪ್ರದೇಶಗಳಿಗೆ ಹರಡುತ್ತವೆ,

ಇದು ಸೊಳ್ಳೆ ಮತ್ತು ನೊಣಗಳ ಸಂತಾನೋತ್ಪತ್ತಿಗೆ ಕಾರಣವಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹೆಚ್ಚಾಗಲು ಪ್ರೇರೇಪಿಸುತ್ತದೆ. ರಸ್ತೆಗಳಲ್ಲಿ ಹಂದಿಗಳ ಹಠಾತ್ ಸಂಚಾರವು ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತದೆ, ಇದು ಅಪಘಾತಗಳಿಗೆ ಮತ್ತು ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಖಾಲಿ ಇರುವ ನಿವೇಶನಗಳಲ್ಲಿ ಹಂದಿಗಳು ಕಸವನ್ನು ಹರಡುವುದರಿಂದ ಆ ಪ್ರದೇಶದ ಸ್ವಚ್ಛತೆ ಕೆಡುತ್ತದೆ ಮತ್ತು ದುರ್ವಾಸನೆ ಹರಡುತ್ತದೆ. ಈ ರೀತಿಯಾಗಿ ಹಂದಿಗಳಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಅವುಗಳ ಮಾಲೀಕರಿಗೆ ಮಾಹಿತಿ ನೀಡಿ, ಅವುಗಳನ್ನು ಜನನಿಬಿಡ ಪ್ರದೇಶಗಳಿಗೆ ಸ್ಥಳಾಂತರಿಸಲು ಹೇಳಿ, ದಂಡ ವಿಧಿಸುವ ಮೂಲಕ ಹಂದಿ ಹಾವಳಿಗಳನ್ನು ತಪ್ಪಿಸಲು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೌರಾಯುಕ್ತ ಎ. ಖಾಸಿಂ, ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಶಶಿಧರ್, ಹೆಡ್ ಕಾನ್ಸ್ಟೇಬಲ್ ಇಬ್ರಾಹಿಂ ಖಲೀಲ್, ಮಹಿಳಾ ಕಾನ್ಸ್ಟೇಬಲ್ ನಳಿನ, ನಗರ ಸಭೆಯ ಪೌರಕಾರ್ಮಿಕರು, ಭರತ್, ಸ್ಟುಡಿಯೋ ವಿಜಿ, ತಿಪ್ಪೇಸ್ವಾಮಿ, ಮಧುಸೂದನ್, ಓಬಳೇಶ್ ಹಾಗೂ ಹಲವು ನಾಗರೀಕರ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ಜರುಗಿತು ಎಂದು ವೇಣುಕುಮಾರ್. ಎಂ ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ