LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಗೊಂದಲ: ಗೃಹ ಸಚಿವರ ರಾಜೀನಾಮೆಗೆ ಸಿ.ಟಿ. ರವಿ ಪಟ್ಟು

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯೂ ಗೊಂದಲದ ಗೂಡಾಗಿ, ಸಂಪೂರ್ಣ ವೈಫಲ್ಯ ಕಾಣುತ್ತಿದೆ" ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

​ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಾದ ಒಎಂಆರ್ ಶೀಟ್ ಗೊಂದಲ ಹಾಗೂ ಅಸಮರ್ಥ ನಿರ್ವಹಣೆಯನ್ನು ಖಂಡಿಸಿರುವ ಅವರು, "ಈ ಪರೀಕ್ಷಾ ವೈಫಲ್ಯದ ಹೊಣೆ ಹೊತ್ತು ಗೃಹ ಸಚಿವರ ರಾಜೀನಾಮೆ ಪಡೆಯುತ್ತೀರಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ?" ಎಂದು ಪ್ರಶ್ನಿಸಿದ್ದಾರೆ. 

​ಯುವಕರ ಭವಿಷ್ಯದ ಜೊತೆ ಸರ್ಕಾರದ ಆಟ:
​ಗ್ರಾಮೀಣ ಭಾಗದ ಸಾವಿರಾರು ಯುವಕ-ಯುವತಿಯರು ವರ್ಷಗಟ್ಟಲೆ ಕಠಿಣ ಅಭ್ಯಾಸ ನಡೆಸಿದ್ದು, ಉದ್ಯೋಗದ ಕನಸು ಕಂಡಿದ್ದರು. ಆದರೆ ಸರ್ಕಾರದ ಅಸಮರ್ಥ ವ್ಯವಸ್ಥೆಯಿಂದಾಗಿ ಅವರ ಭವಿಷ್ಯಕ್ಕೆ ಕಂಟಕ ಎದುರಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯೇ ಈ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ದೂರಿದರು.

​ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ:
​"ಗೃಹ ಸಚಿವರು ತಮ್ಮ ಇಲಾಖೆಯ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಇತರರಿಗೆ ಸರ್ಟಿಫಿಕೇಟ್ ಕೊಡುತ್ತಾ ಕಾಲ ಕಳೆಯುತ್ತಿದ್ದಾರೆ. ಒಂದೇ ಒಂದು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಸಿ.ಟಿ. ರವಿ ವ್ಯಂಗ್ಯವಾಡಿದರು. 

​ಪ್ರಮುಖ ಬೇಡಿಕೆಗಳು:
​ಮರು ಪರೀಕ್ಷೆ: ಗೊಂದಲಕ್ಕೊಳಗಾದ ಕೇಂದ್ರಗಳ ಅಭ್ಯರ್ಥಿಗಳಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಮರು ಪರೀಕ್ಷೆ ನಡೆಸಬೇಕು. 

​ಉನ್ನತ ಮಟ್ಟದ ತನಿಖೆ: ಈ ಪರೀಕ್ಷಾ ಲೋಪಕ್ಕೆ ಕಾರಣರಾದವರ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. 

​ಗೃಹ ಸಚಿವರ ರಾಜೀನಾಮೆ: ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡುವ ಮುಖ್ಯಮಂತ್ರಿಗಳು, ರಾಜ್ಯದ ಯುವಜನತೆಗೆ ನ್ಯಾಯ ಒದಗಿಸಲು ಗೃಹ ಸಚಿವರ ರಾಜೀನಾಮೆ ಪಡೆಯಬೇಕು. 

​ಕಾಂಗ್ರೆಸ್ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಬೀದಿಗೆ ಬೀಳುವಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜವಳಿ ಉತ್ಪನ್ನ ರಫ್ತುಗೆ ಸರ್ಕಾರ ಉತ್ತೇಜನ:ಆಯುಕ್ತ ಎ.ಬಿ. ಬಸವರಾಜು ಎಂಪಿಆರ್ ಎಸಿಎಸ್ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಸ್ಪಷ್ಟ ಬಹುಮತಕಾಮನ್‌ವೆಲ್ತ್‌ಕ್ರೀಡಾಕೂಟದಲ್ಲಿ ಭಾರತಕ್ಕೆ 39 ಪದಕ: ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಕಾವೇರಿ ವಿಚಾರದಲ್ಲಿ ಸರ್ಕಾರದ ವಿಫಲತೆ: ಮಳೆಯಿಂದಷ್ಟೇ ರೈತರಿಗೆ ಆಸರೆ—ವಿಪಕ್ಷ ನಾಯಕ ಆರ್‌‌. ಅಶೋಕ್ ವಾಗ್ದಾಳಿನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ವೈಫಲ್ಯ: ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಸಂಪುಟ ವಿಸ್ತರಣೆ ಹೈ ಡ್ರಾಮಾ: ಕೊನೆ ಕ್ಷಣದಲ್ಲಿ ಮಂಕಾಳಗೆ ಕೊಕ್, ಎಸ್.ಎಸ್.ಎಂಗೆ ಒಲಿದ ಸಚಿವ ಸ್ಥಾನ!ಕೈ ಸಂಪುಟ ಪುನಾರಚನೆ ಬಿರುಗಾಳಿ: ಸಿದ್ದರಾಮಯ್ಯ ಆಪ್ತರಾಗಿದ್ದ 12 ಹಿರಿಯ ನಾಯಕರಿಗೆ ಕೊಕ್!ಕಾಂಗ್ರೆಸ್‌ಗೆ ಸಂಪುಟ ವಿಸ್ತರಣೆ ಬಿಸಿ: ಜಯಚಂದ್ರ ಬೆಂಬಲಿಗರು, ಕುಂಚಿಟಿಗ ಸಮಾಜ ಆಕ್ರೋಶ – ರಾಜೀನಾಮೆಗೆ ಜಯಚಂದ್ರ ಸಿದ್ಧ?ಕೈ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಾಟೀಲ್ ವೇದಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿದ ಸನಾತನ ಧರ್ಮದ ಪ್ರಸಾರಕ ವೇದವ್ಯಾಸರು: ಎಚ್ ಲಕ್ಷ್ಮೀದೇವಮ್ಮ