ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಉಪವಿಭಾಗ ಕಾರ್ಯ ಮತ್ತು ಪಾಲನಾ ಘಟಕ-3ರ ವ್ಯಾಪ್ತಿಯಲ್ಲಿನ ಚಿತ್ರದುರ್ಗ 220/66/11 ಕೆ.ವಿ ಎಸ್.ಆರ್.ಎಸ್‍ನಿಂದ ವಿದ್ಯುತ್ ಪೂರೈಕೆಯಾಗುವ ಎಫ್-1 ಕಾಪರ್‍ಮೈನ್ಸ್ ಮಾರ್ಗದಲ್ಲಿ ನಿರ್ವಹಣಾ ಕೆಲಸ ಇರುವುದರಿಂದ ಇದೇ ಮೇ 30ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿತ್ರದುರ್ಗ ನಗರ ಉಪ ವಿಭಾಗ ಘಟಕ-3ರ ಪ್ರದೇಶದ ವ್ಯಾಪ್ತಿಯ ಕುಂಚಿಗನಹಾಳ್, ಡಿ.ಎಸ್.ಹಳ್ಳಿ, ಎಣ್ಣಿಗೆರೆ, ಕ್ಯಾದಿಗೆರೆ, ಓರಗುಂಟನಮಾಳಿಗೆ, ಕಸವನಹಳ್ಳಿ,
ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಡಲು, ಬಾಪೂಜಿ ಕಾಲೋನಿ ಗ್ರಾಮಗಳಿಗೆ ಹೊಂದಿಕೊಂಡಂತಹ ಪ್ರದೇಶಗಳಲ್ಲಿ ಗ್ರಾಮಗಳ ವಿದ್ಯುತ್ ಹಾಗೂ ಐ.ಪಿ. ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.



