Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಚನ ಸಾಹಿತ್ಯದಲ್ಲಿ ಸಮಾನತೆಗೆ ಆದ್ಯತೆ

Advertisement
ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಕಾನಹೊಸಹಳ್ಳಿಯ ಕನ್ನಡ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ತಾಲೂಕು ಕದಳಿ ವೇದಿಕೆ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಎನ್ ಎಂ ರವಿಕುಮಾರ್ ಮಾತನಾಡಿ  ನಮ್ಮ ಬದುಕಿನಲ್ಲಿ ಶರಣರ ಆಶಯ ಅಳವಡಿಕೆ ಅತ್ಯವಶ್ಯಕವಾದದ್ದು.


12ನೇ ಶತಮಾನದ ಶರಣೀಯರ ಜೀವನ ಆದರ್ಶಮಯವಾಗಿದೆ. ಅವರ ಅನುಭವದ ಮೂಲಕ ರಚಿಸಿದ ವಚನಗಳ ಆದರ್ಶಗಳನ್ನು ಪಾಲಿಸಿದರೆ ಸುಂದರ ಸಮಾಜ ನಿರ್ಮಾಣವಾಗುವುದೆಂದು ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿ ಎನ್ ಎಂ ರವಿಕುಮಾರ್ ಹೇಳಿದರು.

12ನೇ ಶತಮಾನದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ಶರಣರು ಸಾರಿದ್ದಾರೆ. ಇತ್ತೀಚಿನ ವಾತಾವರಣ ನೋಡುತ್ತಿದ್ದರೆ ಭಯವೇ ಧರ್ಮದ ಮೂಲವಯ್ಯ ಎನ್ನುವಂತಾಗಿರುವುದು ನೋವಿನ ಸಂಗತಿಯಾಗಿದೆ.

 ವಿಶ್ವದಲ್ಲೇ ಶ್ರೇಷ್ಠ ಧರ್ಮ ಶರಣ. ಧರ್ಮ ಶ್ರೇಷ್ಠ ಸಾಹಿತ್ಯ ವಚನ ಸಾಹಿತ್ಯ,ಬೌದ್ಧ ಧರ್ಮಕ್ಕೆ ದೊರೆತ ರಾಜಶ್ರೀಯ ವಿಶ್ವವ್ಯಾಪಿ ಶರಣ ಧರ್ಮಕ್ಕೆ ದೊರೆಯುತ್ತಿದ್ದರೆ ವಿಶ್ವ ಮಾನ್ಯತೆಯನ್ನು ಪಡೆಯುತ್ತಿತ್ತು ಎಂದು ತಿಳಿಸಿದರು .

 ಗೌಡರ ಗಂಗಣ್ಣ ಹಂಪಮ್ಮ ರವಿಚಂದ್ರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದ ಕುರಿತು ಬಸವಾದಿ ಶರಣರ ಸಂದೇಶ ಪ್ರಸಾರ ಮತ್ತು ಶರಣರ ಸಾಹಿತ್ಯದ ಪ್ರಸ್ತುತತೆ  ಕುರಿತು ನಿವೃತ್ತ ಉಪನ್ಯಾಸಕ ವಸಂತ ಸಜ್ಜನ್ ಮಾತನಾಡಿ  12ನೇ ಶತಮಾನದ ಬಸವಣ್ಣನವರ ಕಾಯಕ ದಾಸೋಹ ತತ್ವಕ್ಕೆ ಮಾರುವಾಗಿ ಕಾಶ್ಮೀರದ ಅರಸು ಇಂದಿನ ಮೋಳಿಗೆ ಮಾರಯ್ಯ ಎಂದೇ ಪ್ರಖ್ಯಾತಿ ಪಡೆದರು. ನಾನಾ ಭಾಗದಿಂದ ಕಲ್ಯಾಣಕ್ಕೆ ಆಗಮಿಸಿದರು ಎಂದರು. ಫ. ಗು ಹಳಕಟ್ಟಿಯವರು ಕುರಿತು ಸವಿವರವಾಗಿ ತಿಳಿಸಿದರು.

 ಬಸವಣ್ಣನವರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಲ್ಯಾಣದಲ್ಲಿ ಎಲ್ಲರೊಳಗೊಂಡ ಶರಣರ ಕೂಟವನ್ನು ರಚಿಸಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದವರು ಎಂದು ಹೇಳಿದರು.

 ಇದೇ ಸಂದರ್ಭದಲ್ಲಿ  ಫ. ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ  ಸಾ ಮ ಸಂಗಮೇಶ್ವರಯ್ಯ, ಅಧ್ಯಕ್ಷತೆ ವಹಿಸಿದ್ದರು, ಕವಿ  ಯು ಜಗನ್ನಾಥ್ , ಹಿರಿಯ ಸಾಹಿತಿಗಳಾದ ಡಾ. ಎ. ವೃಷಭೇಂದ್ರ ಆಚಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ವೇಶ್ವರ ಸಜ್ಜನ್,ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಕೆಎಎಸ್ ವೀರೇಶ್, ಸರಳ ಸಾಹಿತ್ಯ ಪರಿಷತ್ತು ತಾಲೂಕು ಮಹಿಳಾ ಕದಳಿ ವೇದಿಕೆಯ ಘಟಕದ ಅಧ್ಯಕ್ಷ ತಿಪ್ಪೀರಮ್ಮ ಸಕಲಪುರದ ಹಟ್ಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನಂದಿ ಬಸವರಾಜ್, ದತ್ತಿ ದಾಸೋಹಿಗಳಾದ ಎಚ್ ಜಿ ಶರಣಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ,

ಸಫಾರಿ ರಾಮಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು   ಕಾರ್ಯದರ್ಶಿ ಕೆ ಸುಭಾಷ್ ಚಂದ್ರ, ನಿವೃತ್ತ ಶಿಕ್ಷಕರಾದ ಮಹದೇವಪ್ಪ , ಮಂಜುನಾಥ, ಪ್ರದೀಪ, ಅಶೋಕ, ಟಿಎಂ ಸಿದ್ದಲಿಂಗ ಮೂರ್ತಿ, ವೀರೇಶ, ಸುಮತಿ ಮಂಜುನಾಥಯ್ಯ, ಬಸವರಾಜಪ್ಪ ಹುಚ್ಚವನಹಳ್ಳಿ, ಜಿ.ಬಿ. ಮಹದೇವ ಗೌಡ, ನಾಗರಾಜ್, ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ