Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2ನೇ ಮದುವೆಗೆ ತಯಾರಿ, ಕಲ್ಯಾಣ ಮಂಟಪದಲ್ಲೇ ಚಪ್ಪಲಿಯಿಂದ ಗೂಸಾ ನೀಡಿದ ಮೊದಲ ಪತ್ನಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊದಲನೇ ಮದುವೆ ಆಗಲು ಕನ್ಯೆ ಸಿಗುವುದಿಲ್ಲ ಎನ್ನುವ ಕೊರಗು ಒಂದು ಕಡೆಯಾದರೆ ಎರಡು-ಮೂರು ಮದುವೆ ಮಾಡಿಕೊಂಡು ಮಜಾ ಮಾಡುವವರಿಗೇನು ಕಮ್ಮಿ ಇಲ್ಲ.


4 ವರ್ಷಗಳಿಂದ ಮೊದಲನೇ ಮದುವೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ 2ನೇ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲೇ ಮೊದಲನೇ ಪತ್ನಿ ಸೇರಿದಂತೆ ಅವರ ಕುಟುಂಬದವರು ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ಚಿತ್ರದುರ್ಗ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಜರುಗಿದೆ.

ಎರಡನೇ ಮದುವೆಗಾಗಿ ಹಸೆಮಣೆ ಏರಲು ಸಿದ್ಧವಾಗಿದ್ದ ಪತಿರಾಯನಿಗೆ ಮದುವೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿಯಿಂದ ಹೊಡೆದಿದ್ದಾರೆ. ವರದಕ್ಷಿಣೆ ದುರಾಸೆಗೆ 2ನೇ ಮದುವೆ ಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಪತಿ ಮಾಡಿದ್ದ. ಕಲ್ಯಾಣ ಮಂಟಪದಲ್ಲೇ ಮೊದಲ ಪತ್ನಿಯ ಕಡೆಯವರಿಂದ‌ ಪತಿರಾಯನ ಕಡೆಯವರಿಗೆ ಸಖತ್ ಧರ್ಮದೇಟು ನೀಡಲಾಯಿತು. ತಾಳಿ ಕಟ್ಟುವ ವೇಳೆ 2ನೇ ವಧುವಿನ ಕುಟುಂಬಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ.

ಕಳೆದ 4 ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ‌ ತನುಜಾ ಎಂಬ ಯುವತಿಯನ್ನು ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ ಮದುವೆಯಾಗಿದ್ದ. ಆದರೆ ಮೊದಲ ಪತ್ನಿಗೆ ತಿಳಿಯದಂತೆ ಚಿತ್ರದುರ್ಗದಲ್ಲಿ ಕಾರ್ತಿಕ್ 2ನೇ ಮದುವೆಗೆ ಪ್ಲ್ಯಾನ್ ಮಾಡಿದ್ದ.

ವರದಕ್ಷಿಣೆ ಆಸೆಗೆ ಮತ್ತೊಮ್ಮೆ‌ ಹಸಣೆ ಏರಲು ಕಾರ್ತಿಕ್ ನಾಯ್ಕ್ ಸಿದ್ಧವಾಗಿದ್ದ ಸುದ್ದಿ ತಿಳಿದು ಕಲ್ಯಾಣ ಮಂಟಪಕ್ಕೇ  ಮೊದಲ ಪತ್ನಿ ಮತ್ತು ಕುಟುಂಬದವರು ಬಂದು ಪತಿಗೆ ಧರ್ಮದೇಟು ನೀಡಿದ್ದಾರೆ.



ಇದರಿಂದಾಗಿ ಕಾರ್ತಿಕ ಪತ್ನಿ ತನುಜಾ ಕುಟುಂಬಸ್ಥರು 2ನೇ ಮದುವೆಗೆ ಬ್ರೇಕ್ ಹಾಕಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ