Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರೆಸ್ ಕೌನ್ಸಿಲ್’ ಪದ, ಚಿಹ್ನೆ ಮತ್ತು ಲಾಂಛನ ಬಳಕೆ ಮಾಡುವುದು ನಿಷಿದ್ಧ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾಗಿದೆ.  ಪತ್ರಿಕಾ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಮತ್ತು ನಿರ್ವಹಿಸುವ ಸಂಬಂಧ ಪ್ರೆಸ್ ಕೌನ್ಸಿಲ್ ಆಕ್ಟ್ 1978 ಅಡಿಯಲ್ಲಿ ಸಂಸ್ಥೆಯನ್ನು ನವದೆಹಲಿಯ ಲೋಧಿ ರಸ್ತೆಯ ಸಿಜಿಒ ಸಂಕೀರ್ಣದ ಸೂಚನಾ ಭವನದಲ್ಲಿ ಸ್ಥಾಪಿಸಲಾಗಿದೆ.

ಇದು ಯಾವುದೇ ರಾಜ್ಯ ಶಾಖೆಯನ್ನು ಹೊಂದಿಲ್ಲ ಮತ್ತು ಅದರ ಪರವಾಗಿ ಕಾರ್ಯ ನಿರ್ವಹಿಸಲು ಇತರೆ ಯಾವುದೇ ಸಂಸ್ಥೆಯನ್ನು ಅಧಿಕೃತಗೊಳಿಸಿರುವುದಿಲ್ಲ ಅಥವಾ ರಚಿಸಿರುವುದಿಲ್ಲ.

ಇತರ ಪತ್ರಿಕಾ ಸಂಸ್ಥೆಗಳಿಂದ ಪ್ರೆಸ್ ಕೌನ್ಸಿಲ್ಪದವನ್ನು ಬಳಸಿಕೊಂಡಿರುವ ನಿದರ್ಶನಗಳಿದ್ದು, ಇದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸಾಂಸ್ಥಿಕ ಮೌಲ್ಯವವನ್ನು ಕಳೆದುಕೊಂಡಿರುವುದು ಮಾತ್ರವಲ್ಲದೇ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವಿಶಿಷ್ಟ ಡೊಮೇನ್ ಮತ್ತು ಶೀರ್ಷಿಕೆಯನ್ನು ಉಲ್ಲಂಘಿಸಿದಂತಾಗುವುದು.  

"ಪ್ರೆಸ್ ಕೌನ್ಸಿಲ್" ಅಥವಾ ಅದರ ಹಿಂದಿ ಸಮಾನವಾದ ಭಾರತೀಯ ಪ್ರೆಸ್ ಪರಿಷತ್ಅನ್ನು ಬಳಸಿಕೊಂಡು ಯಾವುದೇ ಸ್ಥಳೀಯ ಅಥವಾ ಸರ್ಕಾರಿ ಸಂಘ/ಸಂಸ್ಥೆಯ ನೋಂದಣಿಯನ್ನು ನಿಷೇಧಿಸಲು/ ಸರಿಪಡಿಸಲು ಅಗತ್ಯ ಸಲಹೆಯನ್ನು ಮಾತ್ರ ನೀಡಬಹುದಾಗಿದೆ.

ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ, ‘ಪ್ರೆಸ್ ಕೌನ್ಸಿಲ್ಪದ, ಚಿಹ್ನೆ, ಲಾಂಛನವನ್ನು  ಬೇರೆ ಯಾವುದೇ ಸಂಸ್ಥೆ ಬಳಕೆ ಮಾಡುವುದು ಅನುಚಿತ ಬಳಕೆಯ ತಡೆಗಟ್ಟುವಿಕೆ ಕಾಯ್ದೆ (is in violation of the section 3 read with entry 7(ii)of the Emblem and Names (prevention of improper Use)Act, 1950   ಪ್ರಕಾರ ಉಲ್ಲಂಘನೆಯಾಗುತ್ತದೆ ಎಂದು ಕಾನೂನು ವ್ಯವಹಾರಗಳ ಇಲಾಖೆ ತಿಳಿಸಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ