ಚಂದ್ರವಳ್ಳಿ ನ್ಯೂಸ್, ಹರಿಯಬ್ಬೆ:
ಹರಿಯಬ್ಬೆ ಗ್ರಾಮದ ಹಿರಿಯರಾದ ಜಿ. ಗಂಗಣ್ಣ (80) ಅವರು ವಯೋ ಸಹಜ ಕಾಯಿಲೆಯಿಂದ ಸೋಮವಾರ ನಿಧನರಾಗಿದ್ದಾರೆ.
ಮೃತರು ಪ್ರಗತಿಪರ ರೈತರಾದ ಕಟ್ಟೆ ಸುರೇಶ್ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರ:
ಮೃತರ ಅಂತ್ಯಸಂಸ್ಕಾರವನ್ನು ಹರಿಯಬ್ಬೆ ಗ್ರಾಮದ ಕಣಜನಹಳ್ಳಿ ರಸ್ತೆಯ ಕಾಳನಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.



