Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪರಿಸರದ ರಕ್ಷಣೆಯು ಎಲ್ಲಾ ಪ್ರಜೆಗಳ ಕರ್ತವ್ಯವಾಗಬೇಕು-ಉಷಾ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ಪರಿಸರ ದಿನಾಚರಣೆ
ಮಾನವ ಸಂಘಜೀವಿ”-ಮಾನವನ ವಾಸಸ್ಥಾನ ಪರಿಸರವೇ ಆಗಿದೆ.  ಪರಿಸರದ ರಕ್ಷಣೆಯು ಎಲ್ಲಾ ಪ್ರಜೆಗಳ ಕರ್ತವ್ಯವಾಗಬೇಕು.  ಕಾರಣ ಸಮಾಜದಲ್ಲಿ ಜೀವಿಸುವ ಎಲ್ಲಾ ಜೀವ ಸಂಕುಲಗಳು ಪರಿಸರವನ್ನೇ ಅವಲಂಬಿತವಾಗಿವೆ.  ಆಹಾರ, ವಸತಿ, ಉಡುಗೆ-ತೊಡುಗೆಗಳು, ಆಚಾರ-ವಿಚಾರಗಳೆಲ್ಲವೂ ಪರಿಸರದ ಕೊಡುಗೆಗಳಾಗಿವೆ.  ಆದ್ದರಿಂದ ಪರಿಸರವನ್ನು ಉಳಿಸಿ-ಬೆಳಸುವ ಹಿತದೃಷ್ಠಿಯನ್ನು ವಿಶ್ವ ಸಂಸ್ಥೆ ಎಲ್ಲಾ ರಾಷ್ಟ್ರಗಳಿಗೂ ಸಾರಿದೆ.  ಒಂದು ದೇಶದ ಧನಾತ್ಮಾಕ ಪ್ರಗತಿಯು ಆ ದೇಶದ ಆರೋಗ್ಯಕರ ಪರಿಸರವನ್ನು ಆಧರಿಸಿದೆ.

ಪರಿಸರದ ಸಂರಕ್ಷಣೆಗಾಗಿ ಹಾಗೂ ಜಾಗೃತಿ ನೀಡುವ ದೃಷ್ಠಕೋನದಿಂದ ವಿಶ್ವಸಂಸ್ಥೆ 1972ರಲ್ಲಿ ಎಲ್ಲಾ ರಾಷ್ಟ್ರಗಳೊಂದಿಗೆ ಚರ್ಚಿಸಿತು. ಮೊದಲ ಬಾರಿಗೆ 1973ರಲ್ಲಿ ಪರಿಸರ ರಕ್ಷಣೆಯ ಜಾಗೃತಿ ವೇದಿಕೆಯನ್ನು ಆಯೋಜಿಸಲಾಯಿತು.  ಈ ವೇದಿಕೆಯಲ್ಲಿ 143ಕ್ಕೂ ಹೆಚ್ಚು ದೇಶಗಳ ಸರ್ಕಾರಗಳು, ಎನ್ಜಿವೋಗಳು, ಸಂಘ-ಸಂಸ್ಥೆಗಳು ಪಾಲ್ಗೊಂಡು ಪರಿಸರ ಜಾಗೃತಿ ಅಭಿಯಾನಗಳ ಬಗ್ಗೆ ಚರ್ಚಿಸಲಾಯಿತು. ಈ ವೇದಿಕೆಯಲ್ಲಿ ಸಮುದ್ರ ಇತ್ಯಾದಿ ಜಲರಾಶಿಗಳ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಬಿವೃದ್ಧಿ, ವನ್ಯಜೀವಿ ರಕ್ಷಣೆ, ಪರಿಸರ ಕಾಳಜಿ ಇತ್ಯಾದಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಯಿತು.  ನಂತರ ವಿಶ್ವ ಸಂಸ್ಥೆಯು ಎಲ್ಲಾ ರಾಷ್ಟ್ರಗಳಿಗೂ ಜೂನ್-5ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು  ಅವಕಾಶ ಒದಗಿಸಿತು. 

Advertisement

ನಂತರ, ಇದು ಪ್ರತಿವರ್ಷ ಜೂನ್-5ರಂದು ವಿಶ್ವದಾದ್ಯಂತ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.  ಇದರ ಉದ್ದೇಶ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಅಂಶಗಳ ಬಗ್ಗೆ ಅರಿವು ಮೂಡಿಸುವುದು.  ಜಲ ಮಾಲಿನ್ಯ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಮಣ್ಣಿನ ಮಾಲಿನ್ಯ ಇತರೆ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿರುವ ಮಾಲಿನ್ಯ ಕಾರಕಗಳ ಬಗ್ಗೆ ಜಾಗೃತಿ ಮೂಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಶ್ರಮಿಸುವುದಾಗಿದೆ.

ಈ ನಿಟ್ಟಿನಲ್ಲಿ ವಿಶ್ವ ಪರಿಸರ ದಿನವನ್ನು ಒಂದೊಂದು ಮಹತ್ವಪೂರ್ಣ ವಿಷಯದೊಂದಿಗೆ ಪ್ರತಿ ವರ್ಷ ಆಚರಿಸಲಾಗುತ್ತದೆ.  ಈ ವರ್ಷ ಪ್ರಕೃತಿಯಿಂದ ಸ್ಪೂರ್ತಿ; ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ”, ಈ ವಿಷಯವು ಈ ವರ್ಷದ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಿದ್ಧವಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.  ಈ ವಿಷಯದ ಹಿನ್ನಲೆ ಪ್ರಕೃತಿಯಿಂದ ಜೀವರಾಶಿಗಳ ಸಂರಕ್ಷಣೆ ಮಾಡಲು ಇಂಗಾಲದ ಡೈ ಆಕ್ಸೈಡ್ನ್ನು ತಗ್ಗಿಸುವುದಾಗಿದೆ, ಜೌಗು ಪ್ರದೇಶಗಳಿಂದ ಬರುವ ಬಿರುಗಾಳಿಯನ್ನು ತಡೆಯುವ ಗಿಡ ಮರಗಳನ್ನು ಬೆಳೆಸಿ ಉಳಿಸುವುದರೊಂದಿಗೆ, ಮಣ್ಣಿನ ಫಲವತ್ತತೆಯನ್ನು ಕಾಪಾಡುವುದಾಗಿದೆ. 

ಹಾಗೆಯೇ, 2024ರ ನಂತರದ ವರ್ಷವನ್ನು ಬೆಚ್ಚಗಿನ ವರ್ಷ ಎಂದು ವಿಶ್ವ ಹವಾಮಾನ ಸಂಸ್ಥೆ ಸಾರಿದೆ.  ಕಾರಣ ಜಾಗತಿಕ ತಾಪಮಾನದ ಮಿತಿ ಗಡಿಯನ್ನು ದಾಟಿದೆ.  ಇದರಿಂದ ಕಾಡ್ಗಿಚ್ಚುಗಳು, ಹಿಮನದಿಗಳ ಕುಗ್ಗುವಿಕೆ, ಮಾರುತಗಳ ಹೊಡೆತದ ಪರಿಣಾಮದಿಂದ ಕೋಟ್ಯಾಂತರ ಜನರ ಆರೋಗ್ಯದ ಮೇಲೆ ಪ್ರಭಾವ ಉಂಟಾಗಿವೆ.  ಕ್ಯಾನ್ಸರ್, ಉಸಿರಾಟದ ಸಮಸ್ಯೆಗಳು, ಮಾನಸಿಕ ಖಿನ್ನತೆ ಮತ್ತು ಕುಗ್ಗುವಿಕೆ, ನವಜಾತ ಶಿಶುಗಳಲ್ಲಿ ಕಂಡುಬರುವ ಬೆಳವಣಿಗೆಯ ಕುಂಠಿತತೆ, ಮುಂತಾದ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವಂತಾಗಿದೆ. 

ಈ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ನಿಯಂತ್ರಿಸಲು ಮೊದಲು ಪ್ರತಿಯೊಬ್ಬ ಪ್ರಜೆಯು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುತ್ತದೆ. ಕಾರಣ ಪರಿಸರ ಕಾಳಜಿಯು ಒಂದು ಮೌಲ್ಯ ಹಾಗೂ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ತಿಳಿಸಲಾಗಿದೆ.

ಕನಿಷ್ಟ ಪಕ್ಷ ದಿನ ನಿತ್ಯದ ಬೆಳಕೆಯಲ್ಲಿರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತಗ್ಗಿಸಿ ಇವುಗಳ ಬದಲಾಗಿ ಮರುಬಳಕೆ ಮಾಡುವ ವಸ್ತುಗಳನ್ನು ಅಥವಾ ಮಣ್ಣಿನಲ್ಲಿ ಕರಗುವ ವಸ್ತುಗಳನ್ನು ಬಳಸುವುದು.

ಹವಾಮಾನ ವೈಪರಿತ್ಯಗಳನ್ನು ಕಡಿಮೆಗೊಳಿಸಲು ಹಾಗೂ ತಾಪಮಾನವನ್ನು ತಗ್ಗಿಸಲು ಮನೆಗೊಂದು ಗಿಡ, ಊರಿಗೊಂದು ವನ ಸೃಷ್ಠಿಸುವುದರೊಂದಿಗೆ ಹೆಚ್ಚಿನ ಗಿಡಗಳನ್ನು ಬೆಳಸುವುದು ಹಾಗು ಮರ ಕಡಿಯುವುದನ್ನು ತಗ್ಗಿಸುವುದು.

ಮನೆ ಬಳಕೆಗೆ ಬೇಕಾಗಿರುವ ಪೀಠೋಪಕರಣಗಳ ಬಳಕೆಗೆ ಸಂಬಂಧಿಸಿದಂತೆ, ಮರಗಳ ಕಡಿಯುವಿಕೆಯನ್ನು ತಪ್ಪಿಸುವುದು ಹಾಗೂ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.

ಮಣ್ಣಿನ ಸವೆತಕ್ಕೆ ಕಾರಣವಾಗುವಂತಹ ರಾಸಾಯನಿಕ ಗೊಬ್ಬರಗಳು ಮತ್ತು ಔಷಧಿಗಳ ಬಳಕೆಯನ್ನು ಕೃಷಿಯಲ್ಲಿ ತಗ್ಗಿಸಿ, ಸಾವಯವ ಗೊಬ್ಬರಗಳನ್ನು ಬಳಸುವುದು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಹಾಗೂ ಗಿಡಗಳನ್ನು ಹೆಚ್ಚಾಗಿ ಬೆಳಸುವುದು.

ಇ-ತ್ಯಾಜ್ಯಗಳಿಗೆ ಸೂಕ್ತ ಕ್ರಮವಹಿಸಿ ಅವುಗಳ ಪುನರ್ ಬಳಕೆಗೆ ಅಥವಾ ಅವುಗಳನ್ನು ಸರಿಯಾದ ಜಾಗದಲ್ಲಿ ಹಾಕುವಂತೆ ನಿಗಾವಹಿಸುವುದು.

ಮನೆಗಳಿಂದಲೇ ನೀರಿನ ಪೋಲು ಅಥವಾ ಅತಿ ಹೆಚ್ಚಿನ ಬಳಕೆಗಳನ್ನು ನಿಯಂತ್ರಿಸಿ, ಸರಿಯಾಗಿ ಬಳಸಲು ಕ್ರಮ ವಹಿಸುವುದು ಹಾಗೂ ಕೃಷಿ ವಲಯಗಳಲ್ಲಿ ಹನಿ ನೀರಾವರಿಗಳನ್ನು ಅಳವಡಿಸುವುದು.

ಅನಾವಶ್ಯಕ ಕರಗದ ವಸ್ತುಗಳನ್ನು ಭೂಮಿಗೆ ಮತ್ತು ಪರಿಸರಕ್ಕೆ ಎಸೆಯುವುದನ್ನು ತಪ್ಪಿಸುವುದು.  ಕೈಗಾರಿಕೆಗಳಿಂದ ಬಂದಂತಹ ತ್ಯಾಜ್ಯಗಳನ್ನು ಶುದ್ಧೀಕರಿಸಿ, ಪರಿಸರಕ್ಕೆ ಬಿಡುವುದು.

ಅತೀ ಹೆಚ್ಚಿನ ವಿಕಿರಣಗಳನ್ನು ಹೊರಸೂಸುವ (ಪ್ರಿಡ್ಜ್) ಅಥವಾ ಇಂಗಾಲದ ಡೈ ಆಕ್ಸೈಡ್ನ್ನು ಹೊರ ಹಾಕುವ ವಾಹನಗಳ ಬಳಕೆಯನ್ನು ತಗ್ಗಿಸುವುದು ಹಾಗೂ ಅತಿ ಹೆಚ್ಚು ತಾಪಮಾನ ಉತ್ಪತ್ತಿಮಾಡುವ ವಿಧಾನಗಳನ್ನು ಕಡಿಮೆಗೊಳಿಸುವುದು.

ನವೀಕರಿಸಲಾಗದ ಸಂಪನ್ಮೂಲಗಳನ್ನು ಮಿತವಾಗಿ (ಅಂದರೆ ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಇತರೆ) ಉತ್ಪನ್ನಗಳನ್ನು ಬಳಸುವುದು ಮತ್ತು ಸೌರಶಕ್ತಿಯನ್ನು ಎಲ್ಲಾ ಶಕ್ತಿಗಳ ಮೂಲವಾಗಿ ಗೃಹ, ಸಂಘ-ಸಂಸ್ಥೆಗಳು, ಕೈಗಾರಿಕೆಗಳಲ್ಲಿ ಬಳಸುವುದು.

ಈ ಮೇಲಿನ ಎಲ್ಲಾ ಮೂಲಭೂತ ಮುನ್ನಚ್ಚೆರಿಕೆ ಕ್ರಮಗಳನ್ನು ಅನುಸರಿಸುವುದರ ಮೂಲಕ ಪರಿಸರದ ಮಾಲಿನ್ಯವನ್ನು ತಡೆಗಟ್ಟಿ, ಆರೋಗ್ಯಕರ ಜೀವನ ಶೈಲಿಯನ್ನು ನಡಸಲು ಪ್ರತಿಯೊಬ್ಬ ನಾಗರೀಕನೂ ಶ್ರಮಿಸಬೇಕು.  ಇದಕ್ಕೆ ಪೂರಕವಾಗಿ ಭಾರತ ಸರ್ಕಾರ ಪ್ರಮುಖ ನಿರ್ಧಾರಗಳನ್ನು ವಿವಿಧ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ(KSPCB)ಯು ರಾಜ್ಯದಲ್ಲಿ ಸಾರ್ವಜನಕರಿಗೆ ಪರಿಸರ ಜಾಗೃತಿ ಮೂಡಿಸಲು ಬೆಳಗಾವಿ ವೇಣುಧ್ವನಿರೇಡಿಯೋ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ, ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ(MAHE)ಯು ಹವಾಮಾನ ಬದಲಾವಣೆ ಮತ್ತು ತುರ್ತು ಪರಿಸರ ಅಗತ್ಯಗಳ ಮೇಲೆ ಗಮನ ಹರಿಸಿ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, UN Global Compact (UNGCNI) ವತಿಯಿಂದ ಬೆಂಗಳೂರುನಲ್ಲಿ ಪ್ರಕೃತಿ ಪ್ರೇರಿತವಾಗಿದೆ. ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿಎಂಬ ಶೀರ್ಷಿಕೆಯಡಿಯಲ್ಲಿ ಬಹುಸಂಖ್ಯೆಗಳನ್ನು ಒಳಗೊಂಡ ಕಾರ್ಯಗಾರವನ್ನು ಆಯೋಜಿಸಿದೆ ಮತ್ತು ರಾಷ್ಟ್ರೀಯ ದತ್ತಾಂಶ ಸಂಸ್ಥೆ ಭಾರತದಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸಲು ಸೌರ ಮತ್ತು ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.  ಇನ್ನೂ ಮುಂತಾದ ಕಾರ್ಯಕ್ರಮಗಳು ಕರ್ನಾಟಕದಲ್ಲಿಯೂ ಮುಂದುವರೆದಿವೆ. 

ವಿಶೇಷವಾಗಿ ಸರ್ಕಾರ ತಿಳಿಸಿರುವ ಎಲ್ಲಾ ಮಾರ್ಗಸೂಚನೆಗಳ ಜೊತೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿ ವಿಶೇಷ ಉಪನ್ಯಾಸಗಳು, ಪ್ರಬಂಧ ಸ್ಪರ್ಧೆಗಳು, ನಾಟಕ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.  ಸಮಾಜದಲ್ಲಿರುವ ನಾಗರೀಕರಿಗೆ ಎನ್.ಜಿ.ಒ, ಇತರೆ ಸಂಘ, ಸಂಸ್ಥೆಗಳು, ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಸಂಘಟಿಸಬೇಕು.  ಶಿಕ್ಷಣದ ಮೂಲಕ ಪಠ್ಯಕ್ರಮದಲ್ಲಿ ಪರಿಸರ ಕಾಳಜಿಯ ಬಗ್ಗೆ ವಿಷಯಗಳನ್ನು ಅಳವಡಿಸಬೇಕು ಹಾಗೂ ಜಾಗೃತಿಯನ್ನು ಮೂಡಿಸಬೇಕು. ಇವುಗಳ ಮೂಲಕ ನಮ್ಮ ಮುಂದಿನ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಿ-ಬೆಳೆಸೋಣ, ಕೈಗಾರಿಕರಣ ಮತ್ತು ನಗರೀಕರಣಗಳಿಗೆ ಹೆಚ್ಚಿನ ಆದ್ಯತೆ ನೀಡದೇ ಹಸರೀಕರಣಗಳಿಗೆ ಪ್ರಾಧಾನ್ಯತೆ ನೀಡೋಣ.  ಹಸಿರೇ-ಉಸಿರು ಎಂಬ ಉಕ್ತಿಯೊಂದಿಗೆ ಸಮಾಜದ ನಾಗರೀಕರಿಗೆ ಅರಿವು ಮೂಡಿಸೊಣ.
ಲೇಖನ- ಡಾ. ಉಷಾ.ಆರ್.ಜಿ, ಪ್ರಾಂಶುಪಾಲರು. ದಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕಾರ್ಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯ, ಸರಸ್ವತಿ ಪುರಂ
, ಮೈಸೂರು-570009.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು