Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಳ ಮೀಸಲಾತಿ ಜಾರಿ ಮಾಡದೆ ಹಿಂದೇಟು ಹಾಕುತ್ತಿರುವ ಸರ್ಕಾರದ ನಡೆ ಮಾದಿಗರ ಅಕ್ರೋಶಕ್ಕೆ ಕಾರಣವಾಗಿದೆ, ಒಳ ಮೀಸಲಾತಿ ಜಾರಿಗೆ ಅಗ್ರಹಿಸಿ ಕರ್ನಾಟಕ ಮಾದರ ಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ದೊಡ್ಡಬಳ್ಳಾಪುರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಒಳ ಮೀಸಲಾತಿಗೆ ಆಗ್ರಹಿಸಿ ಮಾದಿಗ ಸಮುದಾಯ ಕಳೆದ 35 ವರ್ಷಗಳ ಸುದೀರ್ಘ ಹೋರಾಟ ಮಾಡಿದೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆಯಾಗಿದೆ. ಆದರೆ ಒಳ ಮೀಸಲಾತಿಯನ್ನ ಅಳವಡಿಸದೆ 56,342 ಖಾಲಿ ಹುದ್ದೆಗಳನ್ನ ತುಂಬಲು ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ, ಸರ್ಕಾರದ ಈ ಕ್ರಮ ಮಾದಿಗ ಸಮುದಾಯದ ಅಕ್ರೋಶಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ 56,342 ಖಾಲಿ ಹುದ್ದೆಗಳನ್ನ ಒಳ ಮೀಸಲಾತಿಯಡಿಯಲ್ಲಿ ಭರ್ತಿ ಮಾಡಬೇಕು, ಶೇಕಡಾ 15ರ ಹಂಚಿಕೆಯನ್ನ ಸ್ವಷ್ಟವಾಗಿ ಅನ್ವಯಿಸಿ ಕ್ರಮ ತೆಗೆದುಕೊಳ್ಳ ಬೇಕು, ಪರಿಷ್ಕೃತ ರೋಸ್ಟರ್ ಜಾರಿಗೊಳಿಸ ಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ಮಾದರ ಮಾಹಾಸಭಾದ ಕಾರ್ಯದರ್ಶಿಗಳಾದ ಬಚ್ಚಹಳ್ಳಿ ನಾಗರಾಜು, ಸ್ವಾತಂತ್ರ್ಯ ನಂತರದ ಭಾರತದ ಇತಿಹಾಸದಲ್ಲಿ ಸುಧೀರ್ಘವಾದ ಹೋರಾಟ ಇದ್ದಾರೆ ಅದು ಒಳ ಮೀಸಲಾತಿ ಹೋರಾಟ ಮಾತ್ರ, 35 ವರ್ಷಗ ಹೋರಾಟದ ಇತಿಹಾಸ ಸೇರಲಿದೆ, ಸುದೀರ್ಘವಾದ ಹೋರಾಟ ಇದ್ದರು ನಮ್ಮನ್ನಳಿದ ಮೂರು ಪಕ್ಷಗಳು ಸರ್ಕಾರಗಳು ನಮ್ಮ ನೋವಿಗೆ ಧ್ವನಿಯಾಗಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ.

ಒಳ ಮೀಸಲಾತಿಗೆ ರಾಜ್ಯಪಾಲರ ಅಂಕಿತ ಸಿಕ್ಕಿದೆ, ಆದೇಶವನ್ನ ಕತ್ತಲಲ್ಲಿಟ್ಟ ಸರ್ಕಾರ ಒಳ ಮೀಸಲಾತಿ ಅಳವಡಿಸದೆ 56,342 ಖಾಲಿ ಹುದ್ದೆಗಳನ್ನ ಭರ್ತಿ ಮಾಡಲು ಮುಂದಾಗಿದೆ, 2012ರ ಮೀಸಲಾತಿಯಂತೆ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ, 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ, ನಮ್ಮ ಹೋರಾಟಗಾರರ ಬಲಿದಾನಕ್ಕೆ ಸರ್ಕಾರ ಕೊಡುವ ಬೆಲೆಯೇ ಇದು.

 

ಸರ್ಕಾರ ಅಧಿಸೂಚನೆಯನ್ನ ಹಿಂಪಡೆದು  ಹೊಸ ಅಧಿಸೂಚನೆಯನ್ನ ಹೊರಡಿಸ ಬೇಕು, ಒಳ ಮೀಸಲಾತಿಯಡಿ ಖಾಲಿ ಹುದ್ದೆಗಳು ಭರ್ತಿಯಾಗ ಬೇಕು, ಮಾರ್ಚ್ 12ರಂದು ಫ್ರೀಡಂ ಪಾರ್ಕ್ ನಲ್ಲಿ ಐಕ್ಯ ಹೋರಾಟ ಪ್ರಾರಂಭವಾಗಲಿದೆ, ಒಳ ಮೀಸಲಾತಿ ಪಡೆಯುವರೆಗೂ ಯಾರು ಮನೆಗೆ ಹೋಗುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಮಾದರ ಮಾಹಾಸಭಾದ ಜಿಲ್ಲಾಧ್ಯಕ್ಷರಾದ ಹೆಚ್.ಎಂ.ಸುಬ್ಬರಾಜು, ಉಪಾಧ್ಯಕ್ಷರಾದ ವಿ.ನಾರಾಯಣಸ್ವಾಮಿ, ಖಂಜಾಜಿ ಎಂ.ವೆಂಕಟೇಶ್, ತೂಬಗೆರೆ ಹೋಬಳಿ ಅಧ್ಯಕ್ಷರಾದ ಮುಕ್ಕಡಿಘಟ್ಟ ನಾಗರಾಜು, ಉಪಾಧ್ಯಕ್ಷರಾದ ಲಘುಮೇನಹಳ್ಳಿ ಮಂಜುನಾಥ್, ಸಮುದಾಯದ ಮುಖಂಡರಾದ ಅಪ್ಪಕಾರನಹಳ್ಳಿ ಹನುಮಯ್ಯ, ದೊಡ್ಡತುಮಕೂರು ವೆಂಕಟೇಶ್, ದೊಡ್ಡತುಮಕೂರು ರಾಮಕೃಷ್ಣಪ್ಪ, ಟಿ.ಡಿ.ಮುನಿಯಪ್ಪ, ತಳವಾರ ನಾಗರಾಜು, ಹಾದ್ರಿಪುರ ಹರ್ಷ, ಕಾಂತರಾಜು, ಕನ್ನಡ ವೆಂಕಟೇಶ್, ಮಾಡೇಶ್ವರ ನರೇಂದ್ರ, ನಾರಸಿಂಹನಹಳ್ಳಿ ಗಂಗರಾಜು ಸೇರಿದಂತೆ ಹಲವು ಮುಖಂಡರು ಇದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ