ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿನೇ ದಿನೇ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು (ಟ್ರಾಫಿಕ್) ನಿಯಂತ್ರಿಸುವುದು ಎಷ್ಟು ಸವಾಲಿನ ಕೆಲಸ ಎಂಬುದನ್ನು ಸಾರ್ವಜನಿಕರಿಗೆ ಪ್ರತ್ಯಕ್ಷವಾಗಿ ಅನುಭವಿಸಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿಶಿಷ್ಟ ಅವಕಾಶವೊಂದನ್ನು ಪರಿಚಯಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ (BTP) ವಿಭಾಗದ ಈ ವಿನೂತನ ಮುಂಜಾಗ್ರತಾ ಉಪಕ್ರಮದಡಿ ಸಾರ್ವಜನಿಕರು 'ಒಂದು ದಿನದ ಟ್ರಾಫಿಕ್ ಪೊಲೀಸ್' ಆಗಿ ಕರ್ತವ್ಯ ನಿರ್ವಹಿಸಬಹುದಾಗಿದೆ. ಆನ್-ಗ್ರೌಂಡ್‌ನಲ್ಲಿ ನಿಜವಾದ ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿ ನಗರದ ವಾಹನ ಸಂಚಾರವನ್ನು ನಿರ್ವಹಿಸುವ ಮತ್ತು ಸಂಚಾರ ವ್ಯವಸ್ಥೆಯ ರೂಪುರೇಷೆಗಳನ್ನು ಹತ್ತಿರದಿಂದ ತಿಳಿಯುವ ಅವಕಾಶ ಇದಾಗಿದೆ.
ನೋಂದಣಿ ಹೇಗೆ?
ಈ ಅಭಿಯಾನದಲ್ಲಿ ಭಾಗವಹಿಸಲು ಬಯಸುವ ಸಾರ್ವಜನಿಕರು ಬೆಂಗಳೂರು ಸಂಚಾರ BTP ASTraM ಆ್ಯಪ್ (App) ಮೂಲಕ ತಕ್ಷಣವೇ ನೋಂದಾಯಿಸಿಕೊಳ್ಳಬಹುದು. ನಗರದ ಸಂಚಾರ ಸಮಸ್ಯೆಯನ್ನು ಹತ್ತಿರದಿಂದ ಅರ್ಥೈಸಿಕೊಂಡು, ನಮ್ಮ ಬೆಂಗಳೂರಿನ ಬದಲಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.




