Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಗಿ ಮಾಲ್ಟ್ ತಿಂದು ಪ್ರಥಮ ಸ್ಥಾನ ಪಡೆದ ವಿದೇಶಿ ಶ್ವಾನ

Advertisement
ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ದಾವಣಗೆರೆ ನಗರದ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ 7ನೇ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನದಲ್ಲಿ ಸ್ವದೇಶಿ
, ವಿದೇಶಿ ಶ್ವಾನಗಳನ್ನು ಸ್ಪರ್ಧೆಗೆ ಪಾಲಕರು ಕರೆ ತಂದಿದ್ದು ಶ್ವಾನ ಪ್ರಿಯರಿಗೆ ಆಕರ್ಷಣೆಯ ಕೇಂದ್ರವಾಗಿತ್ತು.

ಶಾಮಿಯಾನದ ನೆರಳಿನ ಆಸರೆಯಲ್ಲಿ ಶ್ವಾನಗಳು ತಮ್ಮ‌ಭಿನ್ನಾಣದ ನಡಿಗೆಯಿಂದ ಜನರನ್ನ ಆಕರ್ಷಿಸಿದವು. ಈ ಡಾಗ್ ಶೋ ಅಲ್ಲಿ ಬೆಂಗಳೂರು, ಮೈಸೂರು, ಬಾಗಲಕೋಟೆ, ದಾವಣಗೆರೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 180ಕ್ಕೂ ಹೆಚ್ಚು ಶ್ವಾನಗಳು ಭಾಗಿಯಾಗಿದ್ದವು.

ಪ್ರಥಮ ಸ್ಥಾನ: ಮುಧೋಳ್, ಜರ್ಮನ್ ಶೆಫರ್ಡ್, ಪಪ್ಪಿ, ಲ್ಯಾಬ್ರೋಡಾರ್, ರಾಟ್ ವೀಲರ್, ಪಿಟ್ ಬುಲ್, ಗ್ರೇಟ್ ಡೆನ್ ಸೈಬೇರಿಯನ್ ಹಸ್ಕಿ, ಸಿಕ್ಸ್ ಜೂ, ಪಾಮೆರಿಯನ್, ನೆಲ್ಜಿಯನ್, ಪಗ್, ಟಾಯ್ ಸೇರಿದಂತೆ ಮತ್ತಿತರ ಎಲ್ಲ ತಳಿಯ ನಾಯಿಗಳು ಉತ್ತಮ ಪ್ರದರ್ಶನ ನೀಡಿದವು.
ತಮ್ಮ ಮಾಲೀಕನ ಜೊತೆ ಸುಂದರ‌ನಡಿಗೆಯಿಂದ ಹೆಜ್ಜೆ ಹಾಕಿದ ಶ್ವಾನಗಳು ತೀರ್ಪುಗಾರರನ್ನು ಆಕರ್ಷಿಸಿದವು. ಶ್ವಾನ ಪ್ರದರ್ಶನದಲ್ಲಿ ವಿದೇಶಿ ತಳಿಯ ಜರ್ಮನ್ ಶೆಫರ್ಡ್ ಶ್ವಾನಕ್ಕೆ ಪ್ರಥಮ ಬಹುಮಾನ ನೀಡಲಾಯಿತು.


ರಾಗಿ ಮಾಲ್ಟ್ ತಿಂದು ಪ್ರಥಮ ಸ್ಥಾನ ಪಡೆದ ವಿದೇಶಿ ಶ್ವಾನ:
ಶ್ವಾನ ಪ್ರದರ್ಶನಕ್ಕೆ ಮೊದಲ ಬಾರಿಗೆ ಶ್ವಾನ ಕರೆತಂದಿದ್ದೇವೆ
, ನೋಡಬೇಕು ಏನ್ ಆಗುತ್ತೆ. ಇದಕ್ಕೆ ಆಹಾರದಲ್ಲಿ ಬೆಳಗ್ಗೆ ರಾಗಿ ಮಾಲ್ಟ್, ರಾತ್ರಿ 200 ಗ್ರಾಂ ಚಿಕನ್ ಕೊಡ್ತೇವೆ, ಚೆನ್ನಾಗಿ ಸಾಕುತ್ತಿದ್ದೇವೆ ಎಂದು ನಾಯಿ ಮಾಲೀಕ ಅಕ್ಷಯ್ ತಿಳಿಸಿದರು.

ಬಹುಮಾನ ದಕ್ಕಿಸಿಕೊಂಡ ‌ಶ್ವಾನಗಳಿವು : ವಯಸ್ಕ ಪಪ್ಪಿ,‌ಭಾರತೀಯ‌ಉತ್ತಮ ತಳಿ ವಿಭಾಗದ ಶ್ವಾನ ಪ್ರದರ್ಶನ ನಡೆಯಿತು.‌ವಯಸ್ಕ ವಿಭಾಗದ ಸ್ಪರ್ಧೆಯಲ್ಲಿ ರಾಣೇಬೆನ್ನೂರಿನ ವಿನೀತ್ ಅವರ ಜರ್ಮನ್ ಶೆಫರ್ಡ್ ತಳಿಯ ನಾಯಿ ಪ್ರಥಮ ಸ್ಥಾನ (25 ಸಾವಿರ) ಬಹುಮಾನ, ಚಿತ್ರದುರ್ಗದ ಸುಬ್ರಹ್ಮಣ್ಯ ಅವರ ಡಾಬರ್ ಮನ್ ನಾಯಿ ದ್ವಿತೀಯ (15 ಸಾವಿರ) ಬಹುಮಾನ, ಮುಧೋಳದ ವಿಜಯಕುಮಾರ್ ಅವರ ಬೀಗಲ್ ತಳಿಯ ನಾಯಿ ತೃತೀಯ (10 ಸಾವಿರ) ಬಹುಮಾನ ದಕ್ಕಿಸಿಕೊಂಡಿವೆ.



ನಾಯಿ ಮಾಲೀಕ ರಾಮಪ್ಪ ಮಾತನಾಡಿ, ಮುಧೋಳ್​​ನಿಂದ‌ಆಗಮಿಸಿದ್ದೇವೆ ಇದು ಮುಧೋಳ್‌ತಳಿ. ಇದರ ಮೆಂಟೆನೆನ್ಸ್​​ ಜಿರೋ, ಯಾರು ಬೇಕಾದರೂ ಸಾಕಬಹುದು. ರೈತರು ತಮ್ಮ ತೋಟಕ್ಕೆ, ಕುರಿಗಳಿಗಾಗಿ ಸಾಕಬಹುದು. ನೀವು ಯಾವ ಆಹಾರ ಕೊಟ್ಟರೂ ಅದನ್ನ ಸೇವಿಸುತ್ತೆ. ಮಳೆ, ಚಳಿಗೂ ಹೊಂದಾಣಿಕೆ ಆಗುತ್ತೆ ಎಂದು ತಿಳಿಸಿದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ