ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಜಿಲ್ಲಾ ಕಲಾಭವನದಲ್ಲಿ ನಡೆದ 52ನೇ ಮಾಸದ ರಂಗಕಲಾ ಜ್ಯೋತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ರೈತ ಸಂಘದ ಯುವ ಅಧ್ಯಕ್ಷ ವಿನೋದ್ ಕುಮಾರ್ ಗೌಡ ನೆರವೇರಿಸಿದರು.
ಸಂಘದ ಗೌರವಾಧ್ಯಕ್ಷರಾದ ಕೆಎಮ್ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿ ಎಲ್ಲ ಇಂತಹ ಕಾರ್ಯಕ್ರಮಗಳು ಯುವ ಕಲಾವಿದರಿಗೆ ಸ್ಫೂರ್ತಿಯಾಗುತ್ತದೆ. ಹಿರಿಯ ರಂಗಭೂಮಿ ಮನಸುಗಳಿಗೆ ಸಾರ್ಥಕತೆಯ ಮನೋಭಾವ ಮೂಡಿಸುತ್ತದೆ. ಹಾಗಾಗಿ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ರಂಗಭೂಮಿ ಕಲಾವಿದರಾದ ಮೆಳೇಕೋಟೆ ಶಾಮಣ್ಣ ರವರಿಗೆ ರಂಗ ಕಲಾ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೆಳೇಕೋಟೆ ರಂಗಭೂಮಿ ಕಲಾವಿದರಾದ ಅಂಜಿನಪ್ಪನವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಖ್ಯಾತ ರಂಗಭೂಮಿ ಕಲಾವಿದ ರಂಗ ರಾಮಯ್ಯ, ಸಂಘದ ಹಿರಿಯ ಉಪಾಧ್ಯಕ್ಷ ರಬ್ಬನಹಳ್ಳಿ ಮುನಿರಾಜು ಸೇರಿದಂತೆ ಹಲವಾರು ರಂಗಕರ್ಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



