Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಿನ ಶುಭೋದಯ ಸಂದೇಶಗಳ ಪ್ರಸ್ತುತತೆ ಮತ್ತು ಅಳವಡಿಕೆ

Advertisement
 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಿನ ಶುಭೋದಯ ಸಂದೇಶಗಳ ಪ್ರಸ್ತುತತೆ ಮತ್ತು ಅಳವಡಿಕೆ........ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ.                  

ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ, ರೂಮಿ, ಚಾಣಕ್ಯ, ಗಿಬ್ರಾನ್, ಕಾರ್ಲ್ ಮಾರ್ಕ್ಸ್, ಗಾಲಿಬ್, ಸ್ವಾಮಿ ವಿವೇಕಾನಂದ, ಪರಮಹಂಸ, ಸರ್ವಜ್ಞ, ಭಗವದ್ಗೀತೆ, ಆಚಾರ್ಯತ್ರಯರು, ಖುರಾನ್, ಬೈಬಲ್, ಶರಣರು, ದಾಸರು, ಸೂಫಿ ಸಂತರು ಹೀಗೆ ಅನೇಕರ ವಾಣಿಗಳು ನಮಗಿಷ್ಟವಾಗಿವೆ ಎಂದು ಹಾಕುತ್ತೇವೆ.   

 ಒಂದು ಹಂತಕ್ಕೆ ಇದೆಲ್ಲಾ ಒಳ್ಳೆಯದೆ. ಆದರೆ ಈ ಸಂದೇಶಗಳನ್ನು ಮತ್ತು ಅದನ್ನು ಹೇಳಿರುವವರನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ, ಅದನ್ನು ಹೇಗೆ ಅಳವಡಿಸಿಕೊಂಡಿದ್ದೇವೆ, ಅದರ ಸಾಮಾಜಿಕ  ಪ್ರಸ್ತುತತೆ ಏನು ಎಂಬುದನ್ನು  ಅದರೊಂದಿಗೆ  ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಅದೊಂದು ಕಾಟಾಚಾರದ ಒಣ ಸಂದೇಶವಾಗುತ್ತದೆ.                   

ಏಕೆಂದರೆ ಕಾಲದ ನಿರಂತರತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿರುತ್ತವೆ. ಕೆಲವು ಈಗಲೂ ಪ್ರಸ್ತುತವಾದರೆ, ಕೆಲವು ಸವಕಲು ನಾಣ್ಯಗಳು.

ಮತ್ತೆ ಕೆಲವು ಬದಲಾವಣೆಯಾಗಬೇಕಿದ್ದರೆ, ಇನ್ನೊಂದಿಷ್ಟು ಅಪಾಯಕಾರಿಯೂ ಹೌದು.                    

ಈ ಎಲ್ಲಾ ವ್ಯಕ್ತಿಗಳು ತಾವು ಜೀವಿಸಿದ್ದ ಕಾಲದ ಸ್ಥಿತಿಗತಿಗೆ ಅನುಗುಣವಾಗಿ ಒಂದಷ್ಟು ದೂರದೃಷಿಯಿಂದ ತಮ್ಮ ಚಿಂತನೆಗಳನ್ನು ದಾಖಲಿಸಿರುತ್ತಾರೆ. ಅದು ಈಗ ಎಷ್ಟರ ಮಟ್ಟಿಗೆ ಅಳವಡಿಕೆಗೆ ಯೋಗ್ಯ ಎಂದು ಯೋಚಿಸಬೇಕಾಗುತ್ತದೆ.                      

ಉದಾಹರಣೆಗೆ ಆಗ ರಾಜಪ್ರಭುತ್ವ ಈಗ ಪ್ರಜಾಪ್ರಭುತ್ವ, ಆಗ ಕಾಲ್ನಡಿಗೆ ಅಥವಾ ಕುದುರೆ. ಈಗ ವಿಮಾನ, ಆಗ ಪಾರಿವಾಳ ಇಲ್ಲ ಧೂತ ಸಂದೇಶ ವಾಹಕ, ಈಗ ಇಂಟರ್ ನೆಟ್ - ಮೊಬೈಲ್ ( ಸ್ವಲ್ಪ Techniques ಗೊತ್ತಾದರೆ Fake Photoshop! !??).

ಆಗ ಜಾತಿಗಳ ಶ್ರೇಷ್ಠತೆ ಈಗ ಸ್ವಲ್ಪ ಶಿಥಿಲತೆ, ಆಗ ಪ್ರಾಮಾಣಿಕತೆ ಈಗ ಭ್ರಷ್ಟತೆ, ಆಗ ಹೆಣ್ಣು ಎರಡನೇ ದರ್ಜೆ ಈಗ ಆಕೆಯೇ ಎಲ್ಲದರಲ್ಲೂ First Class ( ? ), ಆಗ ದೇವರು ದೊಡ್ಡವನು ಈಗ ಹಣ ಅಧಿಕಾರ ಇದ್ದವನೇ ದೇವರು .............ಹೀಗೆ ನಾನಾ ರೀತಿಯ ಬದಲಾವಣೆಗಳಾಗಿವೆ.                       

ಆದ್ದರಿಂದ ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳದೆ, ಚಿನ್ನದ ಸೂಜಿಯೆಂದು ಕಣ್ಣಿಗೆ ಚುಚ್ಚಿಕೊಳ್ಳದೆ ಈಗಿರುವ ನಿಮ್ಮ ಜ್ಞಾನದ ಮಿತಿಯಲ್ಲಿ ಒಂದಷ್ಟು ವಿವೇಚನೆಯಿಂದ ನಿಮಗೆ ಸರಿ ಎಂಬುದನ್ನು ಸ್ವೀಕರಿಸಿ. ಕೆಲವನ್ನು ಬದಲಾವಣೆ ಮಾಡಿಕೊಳ್ಳಿ ಇಷ್ಟವಿಲ್ಲದಿದ್ದರೆ ತಿರಸ್ಕರಿಸಿ.                 

ಅನುಭವದ ಆಧಾರದ ಮೇಲೆ ಎಲ್ಲಾ ಉತ್ತಮ ಅಂಶಗಳನ್ನು ಸೇರಿಸಿ ಹೊಸ ಸಾಮಾಜಿಕ ಮನೋಸ್ಥಿತಿ ನಿರ್ಮಿಸಿಕೊಳ್ಳೋಣ. ಆ ಕಾರಣಕ್ಕಾಗಿ ಮಹಾತ್ಮರ Quote ಗಳಿಗೆ ನಿಮ್ಮ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆ ಮುಖ್ಯವಾಗುತ್ತದೆ.

ಏಕೆಂದರೆ ಈ ಕ್ಷಣದಲ್ಲಿ ನಾವು ಜೀವಿಸುತ್ತಿರುವುದು ನಿಮ್ಮೊಂದಿಗೆ ಹೊರತು ಮಹಾತ್ಮರ ಒಡನಾಟದಲ್ಲಿ ಅಲ್ಲ ಆದರೆ ಅವರ ನೆನಪುಗಳೊದಿಗೆ ..............
ಲೇಖನ-ವಿವೇಕಾನಂದ. ಎಚ್.ಕೆ. 9844013068...........
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ