Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಬದಿ ಕಸದ ರಾಶಿ, ನಾಗರೀಕ ಸಮಾಜದ ಲಕ್ಷಣವಲ್ಲ-ರುದ್ರಮೂರ್ತಿ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿಕ್ಕ ಸಿಕ್ಕ ರಸ್ತೆಗಳ ಬದಿ ಕಸದ ರಾಶಿಗಳು ಕಾಣುತ್ತಿದ್ದು ಇದು ನಗರಗಳಲ್ಲಿ ಗಂಭೀರ ಸಮಸ್ಯೆಯಾಗಿದ್ದು
ದುರ್ವಾಸನೆ, ಸೊಳ್ಳೆಗಳ ಹಾವಳಿ, ರೋಗಗಳ ಹರಡುವಿಕೆ ಮತ್ತು ರಸ್ತೆಯ ಅಂದಕೇಡಿತನವನ್ನು ಹೆಚ್ಚಿಸುತ್ತವೆ ಎಂದು ರುದ್ರಮೂರ್ತಿ ಎಂ.ಜೆ ಚಿತ್ರದುರ್ಗ ಇವರು ಆತಂಕ ವ್ಯಕ್ತಪಡಿಸಿದ್ದಾರೆ.


 ಇದು ಆರೋಗ್ಯ ಹಾಗೂ ಸ್ವಚ್ಛತೆ ಎರಡಕ್ಕೂ ಅಪಾಯಕಾರಿಯಾಗಿದೆ. ಇದಕ್ಕೆ ಪರಿಹಾರವೆಂದರೆ, ನಾಗರಿಕರು ಕಸವನ್ನು ನಿಗದಿತ ಸ್ಥಳಗಳಲ್ಲಿ ಹಾಕಬೇಕು ಮತ್ತು ಸ್ಥಳೀಯ ಅಧಿಕಾರಿಗಳು ಕಸ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸಬೇಕು.


ಸಾರ್ವಜನಿಕರು ತಮ್ಮ ನಿರ್ಲಕ್ಷ್ಯತನದಿಂದ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ತಪ್ಪಿಸಬೇಕು. ಕಸ ವಿಲೇವಾರಿ ವ್ಯವಸ್ಥೆಯ ಕೊರತೆ ಇದ್ದು ಕಸದ ಆಟೋ ಟಿಪ್ಪರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಕೂಡ ಕಾರಣವಾಗಿದೆ. ಕಸ ವಿಲೇವಾರಿ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರಾಸಕ್ತಿ, ವಿಫಲತೆ ಎದ್ದು ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಸವನ್ನು ಸಿಕ್ಕ ಸಿಕ್ಕ ಜಾಗದಲ್ಲಿ ಹಾಕುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ. ದುರ್ವಾಸನೆ, ಸೊಳ್ಳೆಗಳ ಉತ್ಪತ್ತಿ, ಮತ್ತು ರೋಗಗಳ ಹರಡುವಿಕೆಗೆ ಕಾರಣ ಆಗಲಿದೆ. ನಗರದ ಸೌಂದರ್ಯ ಹಾಳಾಗಲಿ. ರಸ್ತೆಗಳ ಅಕ್ಕಪಕ್ಕದಲ್ಲಿ ಕಸದ ರಾಶಿಗಳು ತುಂಬಿರುವುದು ಸಂಚಾರಕ್ಕೆ ಅಡಚಣೆ ಆಗಲಿದೆ. ಹಂದಿ, ನಾಯಿಗಳು ಕಸ ಕೆದರಿ ರಸ್ತೆಗೆ ಹರಡಿ ಸಂಚಾರಕ್ಕೆ ತೊಂದರೆಯಾಗಲಿದೆ. ಸಾರ್ವಜನಿಕರು ಕಸವನ್ನು ಕಸದ ಆಟೋ ಟಿಪ್ಪರ್‌ಗಳಿಗೆ ನೀಡಬೇಕು. ಸ್ವಚ್ಛತಾ ಆಂದೋಲನ ಮಾಡುವ ಮೂಲಕ ಅರಿವು ಮೂಡಿಸಬೇಕು. ನಗರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಜನರನ್ನು ಪ್ರೋತ್ಸಾಹ ನೀಡಬೇಕು.


ನಾಗರಿಕ ಸಮಾಜದ ಸುಸಂಸ್ಕೃತ ಪ್ರಜೆಗಳಾದ ನಾವು ನಮ್ಮ ಮನೆಯ ಇತರ ತ್ಯಾಜ್ಯವನ್ನ ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಸುರವಿ ವಿರೂಪಗೊಳಿಸುವ ಹೊಸ ವಿಧಾನವನ್ನ ಅಳವಡಿಸಿಕೊಂಡಿದ್ದೇವೆ.
ಕೆಲ ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ಸಾಲು ಮರಗಳ ಸುಂದರ ನೋಟ ಕಾಣಬಹುದಾಗಿತ್ತು. ಆ ಜಾಗದಲ್ಲೀಗ ಕಸದ ರಾಶಿಯ ದರ್ಶನ ಮುಜುಗರ ಉಂಟುಮಾಡುತ್ತಿದೆ.


ಹಾಗೆಯೇ ಮನೆಯಲ್ಲಿ ವಿದ್ಯುತ್ ದೀಪಗಳನ್ನ ನಿಗದಿತ ಸಮಯಕ್ಕೆ ಹಾಕುವ, ಅದನ್ನ ಅಷ್ಟೇ ಕರುವಕ್ಕಾಗಿ ಆಫ್ ಮಾಡುವ ಜಾಣ್ಮೆ ತೋರುವ ನಾವು, ಮನೆಯ ಮುಂದಿನ ಬೀದಿ ದೀಪ ಅದನ್ನ ಕೆಲವರು ಬೆಳಗ್ಗೆ ಆಫ್ ಮಾಡದೆ ದಿನವಿಡೀ ಬಿಡುವ, ಜವಾಬ್ದಾರಿಹೀನರಾಗಿ ವರ್ತಿಸುವ, ಹಗಲು ವೇಳೆಯು ಜ್ಯೋತಿ ನೋಡುವ ಭಾಗ್ಯವಿರುತ್ತದೆ.


ಈಗೀಗ ಬಹುತೇಕರು ದುಡಿಮೆ ಮಾಡುತ್ತಿದ್ದಾರೆ. ಸಂಪಾದನೆಯೂ ಇದೆ. ಇತರೆಗೆ ಆದ್ಯತೆ ನೀಡಿದಂತೆ ಪ್ರವಾಸಕ್ಕೂ ಪ್ರಾಮುಖ್ಯತೆ ನೀಡುತ್ತಿರುವುದನ್ನ ಕಾಣುತ್ತಿದ್ದೇವೆ. ದೇಶ, ವಿದೇಶಗಳ ಸುತ್ತಿ ಅಲ್ಲಿನ ವಿಶೇಷತೆ ಬಗ್ಗೆ ಬಾರೀ ಪ್ರಮಾಣದಲ್ಲಿ ಭಾಷಣ ಮಾಡುವ ನಾವು ಅವರಲ್ಲಿನ ಕಾನೂನು ಪರಿಪಾಲನೆಯಾಗಲಿ.


ಸ್ವಚ್ಚತೆ,ಇತರ ಕ್ಷೇತ್ರಗಳಲ್ಲಿನ ಸುಧಾರಣೆಯನ್ನ ಅನುಸರಿಸದೆ, ಸಾರ್ವಜನಿಕ ಸ್ಥಳಗಳನ್ನ ದುರುಪಯೋಗ ಮಾಡುವ ಪರಿ ಯಾರಿಗೆ ಪ್ರೀತಿ.ಸಾರ್ವಜನಿಕ ಆಸ್ತಿ ಪಾಸ್ತಿಯನ್ನ ಕಾಪಾಡುವುದು ಹೋಗಲಿ ಕುಂದುಂಟು ಮಾಡದಿರುವ ಹೊಣೆಗಾರಿಕೆಯೂ ಉಪಕಾರವೇ...!
ಕಿರು ಲೇಖನ-ರುದ್ರಮೂರ್ತಿ ಎಂ.ಜೆ ಚಿತ್ರದುರ್ಗ,


 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ