Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯುವಜನೋತ್ಸವಕ್ಕೆ ಗ್ರಾಮೀಣ ಕ್ರೀಡೆಗಳ ಮೆರಗು

Advertisement
ಚಂದ್ರವಳ್ಳಿ ನ್ಯೂಸ್, ತಿಪಟೂರು:
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ವೀರಶೈವ ಲಿಂಗಾಯತ ಸಂಘಟನೆ ಹಾಗೂ ಯುವ ವೇದಿಕೆಯಿಂದ ನಡೆದ ಯುವಜನೋತ್ಸವ ಗಮನ ಸೆಳೆಯಿತು. ಸಾರ್ವಜನಿಕರ ರಂಗಗೀತೆ
, ವಚನಗಾಯನ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ, ಗೋಣಿ ಚೀಲದ ಸ್ಪರ್ಧೆ, ರಂಗೋಲಿ ಸ್ಪರ್ಧೆ ನಡೆಯಿತು.

ಯುವ ಜನೋತ್ಸವವನ್ನು ಕಂಚಾಘಟ್ಟ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಬಸವಣ್ಣನ ವಚನಗಳು ಇಂದಿಗೂ ಪ್ರಸ್ತುತ. ಅವರ ಚಿಂತನೆ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಥಟ್ ಅಂತ ಹೇಳಿಕಾರ್ಯಕ್ರಮವನ್ನು ಸೋಮೇಶ್ವರ ಉದ್ಘಾಟಿಸಿದರು. ಭಾಗವಹಿಸಿದ್ದ ಐವತ್ತಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಗಳ ಸುರಿಮಳೆ ಕೇಳಿ ರಂಜಿಸಿದರು.

ಹಗ್ಗ ಜಗ್ಗಾಟದ ಪುರುಷ, ಮಹಿಳೆಯರ ವಿಭಾಗದಲ್ಲಿ ನಾಲ್ಕು ತಿಪಟೂರಿನಲ್ಲಿ ನಡೆದ ಯುವಜನೋತ್ಸವದಲ್ಲಿ ಹಗ್ಗ-ಜಗ್ಗಾಟ ನಡೆಯಿತು.
ಪುರುಷರಲ್ಲಿ ಬಸವ ಬಳಗ ರಂಗಾಪುರ ತಂಡ ಪ್ರಥಮ
, ಬಸವಶ್ರೀ ತಂಡ ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಮೋನಿಕಾ ತಂಡ ಪ್ರಥಮ, ಹೇಮಲತಾ ತಂಡ ದ್ವಿತೀಯ ಸ್ಥಾನ ಪಡೆಯಿತು.

ರಂಗಗೀತೆ ಸ್ಪರ್ಧೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಕಿರಣ್ ಪ್ರಥಮ, ಸುಮಿತ್ರಮ್ಮ ದ್ವಿತೀಯ, ಚಂದನ ತೃತೀಯ, ಕಿರಿಯ ವಿಭಾಗದಲ್ಲಿ ಲಕ್ಷ್ಮಿ ಪ್ರಥಮ, ಸ್ವಾನಿಕ ದ್ವಿತೀಯ, ಲೇಖನ ತೃತೀಯ ಸ್ಥಾನ ಪಡೆದರು.

ವಚನ ಗಾಯನ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಜನ ಭಾಗವಹಿಸಿ ಹಿರಿಯರ ವಿಭಾಗದಲ್ಲಿ ಚಂದನ ಸಿ.ಎಸ್ ಪ್ರಥಮ, ನಂದಿತ ದ್ವಿತೀಯ, ಕಾತ್ಯಾಯಿನಿ ತೃತೀಯ, ಕಿರಿಯರ ವಿಭಾಗ ಲೇಖನ ಪ್ರಥಮ, ಲಾಸ್ಯ ದ್ವಿತಿಯ, ಮಹಿಮಾ ತೃತೀಯ ಸ್ಥಾನ ಪಡೆದರು.

ರಂಗೋಲಿ ಸ್ಪರ್ಧೆಯಲ್ಲಿ ಹತ್ತು ಜನ ಭಾಗವಹಿಸಿದ್ದರು. ಸುಜಾತ ಕರೀಕೆರೆ ಪ್ರಥಮ, ಕೋಮಲ ಟಿ.ಆರ್. ದ್ವಿತೀಯ, ಪಾರ್ವತಮ್ಮ ಗೋವಿನಪುರ ತೃತೀಯ ಸ್ಥಾನ ಪಡೆದರು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ೩೦ ಜನ ಬಾಗವಹಿಸಿದ್ದು ಕಿಶನ್ ರಂಗಾಪುರ, ದಯಾನಂದ ಬೆಳಗರಹಳ್ಳಿ, ಮನ್ವಿತಾ ಗಂಗಾ ಬೆಳಗರಹಳ್ಳಿ, ಸ್ಥಾನ ಪಡೆದರು.

ಒಡೆಯುವ ಸ್ಪರ್ಧೆ-
ಗೋಣಿಚೀಲ ಓಟ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಮನ್ವಿತ್
, ಶಂಕರ್, ಹೇಮಲತಾ, ಭುವನಾ ಷಡಕ್ಷರಿ ಕಿರಣ್, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ವಿದ್ಯಾ ಜಿ. ಪ್ರಥಮ, ಸವಿತ ದ್ವಿತೀಯ, ಮೋನಿಕಾ ತೃತೀಯ ಸ್ಥಾನ ಪಡೆದರು.

ಶೇಖರ್ ಬ್ಲಡ್ ಬ್ಯಾಂಕ್‌ನಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ತೀರ್ಪುಗಾರರಾಗಿ ಶೈಲಜಾ ಶಿವಮೂರ್ತಿ, ಬಸವರಾಜಪ್ಪ, ಉದಯ್‌ಶಂಕರ್, ಕಾರ್ಯನಿರ್ವಹಿಸಿದರು.
ಶಿವಗಂಗಪ್ಪ ಮಧುಚಂದ್ರ, ಯುವಜನೋತ್ಸವದಲ್ಲಿ ಸ್ಪರ್ಶ ಆಸ್ಪತ್ರೆ ವೈದ್ಯ ಚಂದ್ರಮೌಳಿ
, ಪೊಲೀಸ್ ಅಧಿಕಾರಿ ದಿನೇಶ್ ಪಾಟೀಲ್, ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್, ದೈಹಿಕ ಶಿಕ್ಷಣ ತಾಲ್ಲೂಕು ಅಧಿಕಾರಿ ಶಮಂತ ಹಾಗೂ ಶೇಖರ್ ಆಸ್ಪತ್ರೆ ವೈದ್ಯ ಶೇಖರ್, ವೀರಶೈವ ಲಿಂಗಾಯಿತ ಸಂಘಟನೆಯ ಅಧ್ಯಕ್ಷ ರೇಣುಕಾರಾಧ್ಯ, ಸಂಘಟನೆಯ ಉಪಾಧ್ಯಕ್ಷ ರಘುನಂದನ್, ದಿಬ್ಬನಹಳ್ಳಿ ಶ್ಯಾಮ್ ಸುಂದರ್, ಕಾರ್ಯದರ್ಶಿ ಕುಮಾ ರಸ್ವಾಮಿ, ರಾಜಶೇಖರ್, ಗುರುಸ್ವಾಮಿ, ಮಂಜುನಾಥ್, ದಿವಾಕರ್, ವಸಂತ್ ಕುಮಾರ್, ರೇಣು ಮಾದಿಹಳ್ಳಿ, ಸಿರಿಗಂಧ ಗುರು ಪಾಲ್ಗೊಂಡಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ