Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ರಾಷ್ಟ್ರೀಯ ಟೂರ್ನಿಗೆ ದಾವಣಗೆರೆ, ಬೆಂಗಳೂರು ವಿವಿ ತಂಡಗಳು

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಆತಿಥೇಯ ದಾವಣಗೆರೆ ವಿಶ್ವವಿದ್ಯಾನಿಲಯ ಸೇರಿದಂತೆ ಮಂಗಳೂರು, ಬೆಂಗಳೂರು ಉತ್ತರ ಮತ್ತು ಕ್ಯಾಲಿಕತ್ ವಿಶ್ವವಿದ್ಯಾಲಯಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋಖೋ ಟೂರ್ನಿಗೆ ಅರ್ಹತೆ ಪಡೆದಿವೆ.

ದಾವಣಗೆರೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ತಂಡವು ಮದ್ರಾಸ್ ವಿಶ್ವವಿದ್ಯಾಲಯವನ್ನು ೧೩-೧೧ರಿಂದ ಮಣಿಸಿತು. ವಿಜೇತ ತಂಡದ ಟಿ. ಹುಲಗಪ್ಪ (೩.೧೦ ನಿಮಿಷ ಡಾಜಿಂಗ್ ಮತ್ತು ೨ ಅಂಕಗಳು) ಮತ್ತು ಜೆ.ಜಿ.ಶರತ್ (೨.೪೦ ನಿಮಿಷ ಡಾಜಿಂಗ್) ಅವರ ಉತ್ತಮ ಆಟ ಗೆಲುವಿಗೆ ನೆರವಾಯಿತು. ಮದ್ರಾಸ್ ತಂಡದ ತರುಣ್ ವಿಘ್ನೇಶ್ವರನ್ (೨.೧೦ ನಿಮಿಷ ಡಾಜಿಂಗ್ ಮತ್ತು ೩ ಅಂಕಗಳು) ಉತ್ತಮ ಪ್ರದರ್ಶನ ನೀಡಿದರು.

ಇನ್ನೊಂದು ತೀವ್ರ ಸೆಣಸಾಟದ ಪಂದ್ಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ೧೬-೧೫ರಿಂದ ಭಾರತೀದಾಸನ್ ವಿಶ್ವವಿದ್ಯಾಲಯವನ್ನು ಸೋಲಿಸಿತು. ಬೆಂಗಳೂರು ತಂಡದ ಐವಾನ್ ಪಾಷಾ ೭ ನಿಮಿಷ ಡಾಜಿಂಗ್ ಮಾಡಿ, ೬ ಅಂಕ ಗಳಿಸಿ ಗೆಲುವಿನ ರೂವಾರಿಯಾದರು. ಎದುರಾಳಿ ತಂಡದ ಹರಿಪ್ರಶಾಂತ್ (೩.೪೦ ನಿ. ಡಾಜಿಂಗ್ ಮತ್ತು ೩ ಅಂಕಗಳು) ಉತ್ತಮ ಆಟವಾಡಿದರು.

ಮಂಗಳೂರು ವಿಶ್ವವಿದ್ಯಾಲಯವು ಮತ್ತೊಂದು ಪಂದ್ಯದಲ್ಲಿ ೧೪-೪ ರಿಂದ ಏಕಪಕ್ಷೀಯವಾಗಿ ಮೈಸೂರು ವಿಶ್ವವಿದ್ಯಾಲಯ ತಂಡವನ್ನು ಸುಲಭವಾಗಿ ಸೋಲಿಸಿ ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಪಡೆಯಿತು. ವಿಜಯೀ ತಂಡದ ಅಭಿಜಿತ್ (೬ ನಿಮಿಷ ಡಾಜಿಂಗ್) ಮತ್ತು ನಿಖಿಲ್ (೪ ನಿಮಿಷ ಡಾಜಿಂಗ್ ಮತ್ತು ೨ ಅಂಕಗಳು) ಉತ್ತಮ ಆಟ ಪ್ರದರ್ಶಿಸಿದರು.

ಕ್ಯಾಲಿಕತ್ ವಿಶ್ವವಿದ್ಯಾಲಯವು ೧೮-೧೬ರಿಂದ ಕೇರಳ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು. ಕ್ಯಾಲಿಕತ್ ತಂಡದ ಅತುಲ್ ವೇಣು ಅತ್ಯುತ್ತಮ ಆಟವಾಡಿದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಎಸ್‌ಸಿ ಅಕ್ರಮ, ರೆಸಾರ್ಟ್ ಪರೀಕ್ಷೆ ಹಗರಣ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಸಾರ್ವಜನಿಕರ ಅಹವಾಲುಗಳ ನಿರಂತರ ಪರಿಶೀಲನೆ, ಅಧಿಕಾರಿಗಳ ಹೊಣೆಗಾರಿಕೆಯಾಗಿದೆ- ಡಾ.ಶಾಲಿನಿ ರಜನೀಶ್ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ: ಮರು ಪರಿಶೀಲನೆ ಅವಧಿ ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆ!ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಿದ್ದರಾಮಯ್ಯ ಬಾಂಬ್!ಪ್ರಧಾನಿ ವಿರುದ್ಧ ಕಿಡಿಕಾರಿದ್ದ ರುಚಿಕಾ ಸಿಂಗ್‌ಗೆ ಕಾಂಗ್ರೆಸ್ ಬೆಂಬಲ: ಭವ್ಯಾ ನರಸಿಂಹಮೂರ್ತಿಯಿಂದ "ಧೀರ ಬಾಲಕಿ" ಶ್ಲಾಘನೆ!ವಿವಾಹೇತರ ಸಂಬಂಧಕ್ಕೆ ಅಡ್ಡ ಬಂದ ಪತಿಯ ಭೀಕರ ಹತ್ಯೆ; 2 ಲಕ್ಷ ಸುಪಾರಿ ಕೊಟ್ಟಿದ್ದ ಪತ್ನಿ, ಪ್ರಿಯಕರ ಜೈಲಿಗೆ!13 ಕನ್ನಡಿಗರ ನಾಪತ್ತೆ: ಪತ್ತೆಗೆ ಕ್ರಮ, ಕೆಪಿಎಸ್‌ಸಿ ಹಗರಣದ ತನಿಖೆಯಲ್ಲಿ ಮಧ್ಯಪ್ರವೇಶಿಸಲ್ಲ – ಸಿಎಂ ಡಿಕೆಶಿ775 'ಅರಣ್ಯ ವೀಕ್ಷಕ' ಹುದ್ದೆಗಳ ಭರ್ತಿಗೆ ಪರಿಷ್ಕೃತ ಅಧಿಸೂಚನೆ: ಲಿಖಿತ ಪರೀಕ್ಷೆಯಿಲ್ಲದೆ ಭರ್ತಿ!ರೈಲ್ವೆ ಹಳಿ ದಾಟುವಾಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ದುರಂತ ಸಾವು!ಪತಿಗೆ ಕ್ರೌರ್ಯ, ಪ್ರತ್ಯೇಕ ವಾಸ: ಕೆಳ ಕೋರ್ಟ್ ಆದೇಶ ರದ್ದುಗೊಳಿಸಿ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್!