Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೈಕಮಾಂಡ್‌ಗೆ ತಮ್ಮ ಬಲ ಪ್ರದರ್ಶಿಸಿ ಹೆದರಿಸಲು ಸಾಧನಾ ಸಮಾವೇಶ

ಚಂದ್ರವಳ್ಳಿ ನ್ಯೂಸ್, ಮೈಸೂರು:
ರಾಜ್ಯದ ಹಾಲೀ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು
, ಕಾಂಗ್ರೆಸ್ ಹಮ್ಮಿಕೊಳ್ಳುತ್ತಿರುವ 'ಸಾಧನಾ ಸಮಾವೇಶ' ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕಟು ಶಬ್ದಗಳಿಂದ ಟೀಕಿಸಿದರು.

'ಹೈಕಮಾಂಡ್‌ಗೆ ಹೆದರಿಸಲು ಸಾಧನಾ ಸಮಾವೇಶ!'-
ಸರ್ಕಾರ ಹಮ್ಮಿಕೊಳ್ಳುತ್ತಿರುವ ಸಾಧನಾ ಸಮಾವೇಶದ ಔಚಿತ್ಯವನ್ನು ಪ್ರಶ್ನಿಸಿದ ಹೆಚ್. ವಿಶ್ವನಾಥ್
, "ನಿಮ್ಮನ್ನು ನೀವೇ ಹೊಗಳಿಕೊಳ್ಳಲು ಈ ಸಮಾವೇಶ ಮಾಡುತ್ತಿದ್ದೀರಾ? ನೀವು ಮಾಡಿರುವ ಸಾಧನೆಯಾದರೂ ಏನು?" ಎಂದು ಲೇವಡಿ ಮಾಡಿದರು.

Advertisement

"ಇದು ಜನರನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರ. ಕೇವಲ ಪ್ರಚಾರಕ್ಕಾಗಿ, ಹೈಕಮಾಂಡ್‌ಗೆ ತಮ್ಮ ಬಲ ಪ್ರದರ್ಶಿಸಿ ಹೆದರಿಸಲು ಈ ಸಾಧನಾ ಸಮಾವೇಶವನ್ನು ಮಾಡಲಾಗುತ್ತಿದೆ. ಈ ಸಮಾವೇಶಕ್ಕೆ ಜನರನ್ನು ದುಡ್ಡು ಕೊಟ್ಟು ಕರೆತರಲಾಗುತ್ತಿದೆ. ಜನರ ತೆರಿಗೆ ಹಣವನ್ನು ಸರ್ಕಾರ ತನಗಿಷ್ಟ ಬಂದಂತೆ ಪೋಲು ಮಾಡುತ್ತಿದೆ," ಎಂದು ಅವರು ಆರೋಪಿಸಿದರು.

ಸಾಂಸ್ಕೃತಿಕ ನಗರಿ ಈಗ 'ಡ್ರಗ್ಸ್ ನಗರಿ'!-
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಯುವಕರ ದಾರಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವನಾಥ್
, ಮೈಸೂರು ನಗರದ ಇಂದಿನ ಪರಿಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು.

ಬೆಲೆ ಏರಿಕೆ ಬರೆ: ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಎಲ್ಲದರ ಬೆಲೆಯನ್ನು ಏರಿಸುತ್ತಿದೆ. ಮದ್ಯದ ಬೆಲೆಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದು, ಇಂದು ಒಂದು ಬಿಯರ್ ಬೆಲೆ 250 ರೂಪಾಯಿಗೆ ತಲುಪಿದೆ.

ಗಾಂಜಾ ಹಾವಳಿ: ಮದ್ಯದ ಬೆಲೆ ಏರಿಕೆಯಾಗಿರುವುದರಿಂದ ಯುವಕರು ಸುಲಭವಾಗಿ ಹಾಗೂ ಅಗ್ಗವಾಗಿ ಸಿಗುವ ಮಾದಕ ಪದಾರ್ಥಗಳ ಕಡೆಗೆ ಮುಖ ಮಾಡುತ್ತಿದ್ದಾರೆ. "50 ರೂಪಾಯಿ ಕೊಟ್ಟರೆ ಒಂದು ಪ್ಯಾಕೆಟ್ ಗಾಂಜಾ ಸಿಗುತ್ತದೆ. ಇದರಿಂದಾಗಿ ಯುವ ಸಮೂಹ ವ್ಯಸನಿಗಳಾಗುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಇಂದು ಗಾಂಜಾ ಮತ್ತು ಅಫೀಮು ಕೇಂದ್ರವಾಗುತ್ತಿದೆ," ಎಂದು ದೂರಿದರು.

'ಹಿಜಾಬ್ ವಿವಾದ ಸೃಷ್ಟಿಸಿದ್ದು ಯಾರು?'-
ಸರ್ಕಾರದ ಸಮಾಜ ವಿಭಜಕ ನೀತಿಗಳ ವಿರುದ್ಧ ಹರಿಹಾಯ್ದ ಅವರು
, "ರಾಜ್ಯದಲ್ಲಿ ಯಾರು ಹಿಜಾಬ್ ಬೇಕು ಎಂದು ಮನವಿ ಮಾಡಿದ್ದರು? ಹಿಂದೂ-ಮುಸ್ಲಿಂ ನಡುವೆ ಅನಾವಶ್ಯಕವಾಗಿ ಜಗಳ ತಂದು ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಈ ಸರ್ಕಾರದ ಕೆಲಸವಾಗಿದೆ," ಎಂದು ವಿಶ್ವನಾಥ್ ಆಪಾದಿಸಿದರು.

ಗ್ಯಾರಂಟಿ ಯೋಜನೆಗಳ ಅವೈಜ್ಞಾನಿಕ ಹಂಚಿಕೆಯನ್ನು ಟೀಕಿಸಿದ ಅವರು, "ನಿಜಕ್ಕೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಗ್ಯಾರಂಟಿ ನೀಡಬೇಕಿತ್ತು. ಅದನ್ನು ಬಿಟ್ಟು, 'ಹೇ ಮಹದೇವಪ್ಪ ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ' ಎಂದು ಎಲ್ಲರಿಗೂ ಉಚಿತ ಎಂದು ಘೋಷಿಸಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಲಾಗುತ್ತಿದೆ," ಎಂದು ವಿಶ್ವನಾಥ್ ವಾಗ್ದಾಳಿ ಮಾಡಿದರು.

ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕೆ ಟೀಕೆ-
ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಂತಹ ಗಣ್ಯರೇ ವಿಮಾನದಲ್ಲಿ ಸಾಮಾನ್ಯ ತರಗತಿಯಲ್ಲಿ (ಎಕಾನಮಿ ಕ್ಲಾಸ್) ಪ್ರಯಾಣಿಸುತ್ತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋದರೂ
, ಮೈಸೂರಿಗೆ ಬಂದರೂ ವಿಶೇಷ ವಿಮಾನದಲ್ಲೇ (ಸ್ಪೆಷಲ್ ಫ್ಲೈಟ್) ಓಡಾಡುತ್ತಾರೆ. ಇದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆ ಎಂದು ವಿಶ್ವನಾಥ್ ಕಿಡಿಕಾರಿದರು.

'ವಿರೋಧ ಪಕ್ಷವೇ ಇಲ್ಲದಂತಾಗಿದೆ!'-
ಇದೇ ವೇಳೆ ರಾಜ್ಯದ ವಿರೋಧ ಪಕ್ಷಗಳ ನಿಷ್ಕ್ರಿಯತೆಯ ಬಗ್ಗೆಯೂ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. "ನಾನು ಬಿಜೆಪಿಯಲ್ಲಿದ್ದರೂ ಸರ್ಕಾರದ ತಪ್ಪುಗಳನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದೇನೆ. ಆದರೆ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ವಿರೋಧ ಪಕ್ಷದ ನಾಯಕರು ಕೂಡ ನನ್ನಷ್ಟೂ ಕಟುವಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ
," ಎಂದು ಸ್ವಪಕ್ಷ ಹಾಗೂ ವಿಪಕ್ಷಗಳ ನಾಯಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು