Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸಮಾನ ಶಿಕ್ಷಣ ಸಿಕ್ಕಿದಿದ್ದರೆ ಒಳ ಮೀಸಲಾತಿ ಕೇಳುತ್ತಿರಲಿಲ್ಲ- ಸರಸ್ವತಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅರವತ್ತು ವರ್ಷಗಳ ಹಿಂದೆಯೇ ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕಿದಿದ್ದರೆ ನಾವುಗಳ್ಯಾರು ಒಳ ಮೀಸಲಾತಿ ಕೇಳುತ್ತಿರಲಿಲ್ಲ ಎಂದು ಖ್ಯಾತ ಸಾಹಿತಿ
ಬೆಂಗಳೂರಿನ ದು.ಸರಸ್ವತಿ ಅಭಿಪ್ರಾಯಪಟ್ಟರು.

ಸಾಮಾಜಿಕ ಸಂಘರ್ಷ ಸಮಿತಿ ಚಿತ್ರದುರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ತುಮಕೂರು ಸಹಯೋಗದೊಂದಿಗೆ ವಿಜ್ಞಾನ ಕಾಲೇಜು ಎದುರು ಆದಿ ಕರ್ನಾಟಕ ಹಾಸ್ಟೆಲ್‌ನಲ್ಲಿ ಭಾನುವಾರ ನಡೆದ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ ಧೃವಿಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭೂಮಿಯ ಹಕ್ಕನ್ನು ಜಾರಿಗೊಳಿಸುವವರು ಪ್ರಬಲ ಜಾತಿಯವರು. ನಾನಷ್ಟೆ ಮಿಗಿಲು ಎನ್ನುವ ಬ್ರಾಹ್ಮಣ್ಯಶಾಹಿ, ಮನುವಾದಿಗಳನ್ನು ಎದೆಯೊಳಗಿಂದ ಈಚೆಗೆ ತೆಗೆಯಬೇಕು. ಪ್ರಜಾಪ್ರಭುತ್ವದ ಮೂಲಭೂತ ತಿರುಳು ಭಿನ್ನಮತ. ಹೊರಗಿನಿಂದ ಬರುವ ಪ್ರಾಬಲ್ಯವನ್ನು ವಿರೋಧಿಸುವುದರ ಜೊತೆಗೆ ಒಳಗಿನ ಪ್ರಾಬಲ್ಯವನ್ನು ವಿರೋಧಿಸುತ್ತಿದ್ದ ಅಂಬೇಡ್ಕರ್‌ರವರು ನಾಗರೀಕ ಪ್ರಜ್ಞೆ ಬಗ್ಗೆ ಮಾತನಾಡಿದ್ದಾರೆ. ಹತ್ತು ವರ್ಷಗಳಲ್ಲಿ ನೂರು ಪೌರ ಕಾರ್ಮಿಕರು ಮಲದ ಗುಂಡಿಯಲ್ಲಿ ಬಿದ್ದು ಸತ್ತಿದ್ದಾರೆ. ದ್ವೇಷಿಸುವವರನ್ನು ಪ್ರೀತಿಸುವುದಕ್ಕೆ ದೊಡ್ಡ ತಾಕತ್ತು, ಶಕ್ತಿಯಿರಬೇಕೆಂದು ಹೇಳಿದರು.

ಕಸವನ್ನು ವಿಲೇವಾರಿ ಮಾಡುವವರು ಪೌರ ಕಾರ್ಮಿಕರು. ಆದರೆ ಆಳುವವರಿಗೆ ಪೌರ ಕಾರ್ಮಿಕರ ಕಷ್ಟ ಏನೆಂಬುದು ಗೊತ್ತಾಗುತ್ತಿಲ್ಲ. ಪ್ರಜ್ಞೆ, ಕರುಣೆ, ಮೈತ್ರಿಯೇ ಬುದ್ದತ್ವ. ಬಂಧುತ್ವವಿಲ್ಲದ ಸ್ವಾತಂತ್ರ್ಯ ಸಮಾನತೆಗೆ ಅರ್ಥವಿಲ್ಲ. ಸಹೋದರತ್ವವನ್ನು ಬೆಸೆಯುವ ಸೇತುವೆಗಳು ಕಡಿಮೆಯಾಗುತ್ತಿವೆ. ಚಕ್ರತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಹೆಣ್ಣು ಮಕ್ಕಳನ್ನು ಜೊತೆಯಲ್ಲಿ ಸೇರಿಸಿಕೊಳ್ಳದಿದ್ದರೆ ಯಾವ ಚಳುವಳಿಯ ಯಶಸ್ವಿಯಾಗುವುದಿಲ್ಲವೆಂದು ನಿರ್ಧಾಕ್ಷಣ್ಯವಾಗಿ ನುಡಿದರು.

ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ಪ್ರೊ.ಬಿ.ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಧೃವಿಕರಣ ಕಟ್ಟುವಿಕೆ, ಮುನ್ನಡೆಸುವುದು ಮಾದಿಗರಿಂದ ಸಾಧ್ಯ. ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ತೀರ್ಪು ನೀಡಿ ಆ.೧ ಕ್ಕೆ ಒಂದು ವರ್ಷವಾಗಲಿದೆ. ಇನ್ನು ಸರ್ಕಾರಗಳಿಗೆ ಬುದ್ದಿ ಬಂದಂತಿಲ್ಲ. ಚಳುವಳಿಗಾರ ಪ್ರೊ.ಬಿ.ಕೃಷ್ಣಪ್ಪನವರ ನಂತರ ಕಟ್ಟುವಿಕೆ ಮಾದಿಗರಿಗೆ ಒಲಿದು ಬಂದಿದೆ. ಆರ್.ಎಸ್.ಎಸ್, ಬಿಜೆಪಿಯಿಂದ ಆತಂಕವಿದೆ ಎಂದು ನೋವು ವ್ಯಕ್ತಪಡಿಸಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಒಳ ಮೀಸಲಾತಿ ಹೋರಾಟಕ್ಕೆ ಇಳಿದಿದ್ದೇವೆ. ಜಾಗತಿಕರಣ, ಖಾಸಗಿಕರಣದ ಬಗ್ಗೆ ಯಾರು ಗಂಭೀರವಾಗಿ ಮಾತನಾಡುತ್ತಿಲ್ಲ. ಧೃವಿಕರಣ ಮುಖ್ಯವಾಗಬೇಕು. ಪ್ರೊ.ಬಿ.ಕೃಷ್ಣಪ್ಪನವರ ನಂತರ ಹೋರಾಟ ಕೈಬಿಟ್ಟಿದ್ದೇವೆ. ಮಾಯಾವತಿ, ಕಾನ್ಷಿರಾಂ ಇವರುಗಳನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಒಳ ಮೀಸಲಾತಿ ಜಾರಿ, ಧೃವಿಕರಣ, ಖಾಸಗಿಕರಣ, ಭೂ ಸುಧಾರಣೆ, ಭೂಮಿ ಹಕ್ಕಿನ ಬಗ್ಗೆ ಧ್ವನಿ ಎತ್ತದಿದ್ದರೆ ಚಳುವಳಿಗೆ ಅರ್ಥ ಬರುವುದಿಲ್ಲವೆಂದರು.

ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶಪ್ಪ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್, ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ನಿವೃತ್ತ ಪ್ರಾಂಶುಪಾಲ ವಿ.ಬಸವರಾಜ್, ಬಸವರಾಜ್, ಎಂ.ಡಿ.ರವಿ, ಇಮ್ತಿಯಾಜ್ ಹುಸೇನ್ ವಿಪಶ್ಯನ ನಿರ್ವಹಣೆಗಾರ ಬಿ.ಜಿ.ಗೋವಿಂದಪ್ಪ, ಪ್ರೊ.ಸಿ.ಕೆ.ಮಹೇಶ್, ಎಸ್.ಜಯಣ್ಣ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು