Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನಕ ಗೌರವ ಮತ್ತು ಕನಕ ಯುವ ಪುರಸ್ಕಾರಕ್ಕೆ ಆಯ್ಕೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂತಕವಿ ಕನಕದಾಸ ಮತ್ತು ತತ್ವಪದ ಅಧ್ಯಯನ ಕೇಂದ್ರದಿಂದ ವಾರ್ಷಿಕವಾಗಿ ಕೊಡಮಾಡುವ ಕನಕ ಗೌರವ ಮತ್ತು ಕನಕ ಯುವ ಪುರಸ್ಕಾರಕ್ಕೆ ನಾಲ್ಕು ವರ್ಷಗಳ ಅವಧಿಗೆ ಪರಿಣಿತರ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

2021-22 ನೇ ಸಾಲಿನ ಕನಕಗೌರವ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರೊ. ತಾಳ್ತಜೆ ವಸಂತಕುಮಾರ್, 2022-23 ನೇ ಸಾಲಿಗೆ ಹಾವೇರಿಯ ಡಾ.ನೀಲಪ್ಪ ಮೈಲಾರಪ್ಪ ಅಂಬಲಿಯವರ, 2023-24 ನೇ ಸಾಲಿಗೆ ಬೆಂಗಳೂರಿನ ಡಾ.ಎಚ್.ಎನ್. ಮುರಳೀಧರ, 2024-25 ನೇ ಸಾಲಿಗೆ ತುಮಕೂರಿನ ಡಾ. ಜಿ.ವಿ. ಆನಂದಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

2021-22
ನೇ ಸಾಲಿನ ಕನಕ ಯುವ ಪುರಸ್ಕಾರಕ್ಕೆ ಮೈಸೂರಿನ ಡಾ.ಅನಿಲ್‍ಕುಮಾರ್,  2022-23 ನೇ ಸಾಲಿಗೆ ಚಿಕ್ಕಮಗಳೂರಿನ ಡಾ.ಚಿಕ್ಕಮಗಳೂರು ಗಣೇಶ್, 2023-24 ನೇ ಸಾಲಿಗೆ ವಿಜಯನಗರ ಜಿಲ್ಲೆಯ ಡಾ.ಉಮೇಶ .ಎಂ (ಉಬಾಮ), 2024-25 ನೇ ಸಾಲಿಗೆ ಅರ್ಹ ಯುವ ಪುರಸ್ಕøತರು ಅಲಭ್ಯವಾಗಿರುವುದರಿಂದ ಆಯ್ಕೆ ಮಾಡಿರುವುದಿಲ್ಲ.

ಕನಕ ಗೌರವ ಪುರಸ್ಕಾರವನ್ನು 50 ವರ್ಷಕ್ಕೂ ಮೇಲ್ಪಟ್ಟ ಹಿರಿಯ ವಿದ್ವಾಂಸರಿಗೆ ಕನಕ ಗೌರವ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಪುರಸ್ಕಾರದ ಮೊತ್ತ ರೂ.75,000/-ಗಳು. ಇದರೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ನೀಡಲಾಗುತ್ತದೆ. ಈಗಾಗಲೇ ಕನಕದಾಸರ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರಕಟಣೆಗಳನ್ನು ಹೊರತಂದಿರುವ ಹಿರಿಯ ವಿದ್ವಾಂಸರನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ.

ಕನಕ ಯುವ ಪುರಸ್ಕಾರವನ್ನು 40 ವರ್ಷದೊಳಗಿನ ಕಿರಿಯ ವಿದ್ವಾಂಸರಿಗೆ ಕನಕ ಯುವ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯ ಮೊತ್ತ ರೂ.50,000/-ಗಳು. ಇದರೊಂದಿಗೆ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ, ಶಾಲು, ಫಲತಾಂಬೂಲವನ್ನು ನೀಡಲಾಗುತ್ತದೆ.

ಕನಕದಾಸರ ಬಗ್ಗೆ ಅಧ್ಯಯನ ಪೂರ್ಣ ಅಭ್ಯಾಸ ಮಾಡುತ್ತಿರುವ ಪ್ರಕಟಣೆಗಳನ್ನು ಹೊರತರುತ್ತಿರುವ, ಕನಕದಾಸರ ಸಾಹಿತ್ಯ - ಸಂದೇಶಗಳನ್ನು ಪ್ರಚಾರ ಮಾಡುತ್ತಿರುವ ಯುವ ವಿದ್ವಾಂಸರನ್ನು ಕನಕ ಯುವ ಪುರಸ್ಕಾರ'ಕ್ಕೆ ಪರಿಗಣಿಸಲಾಗುತ್ತದೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ