ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕ್ರಿಕೆಟರ್ ವಿನಯ್ ಎಸ್ ಬಾದಾಮಿ (56)ಅವರು ಹೃದಯಾಘಾತದಿಂದ ನಗರದಅಪಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಸತ್ಯಜಿತ್‌ರಾವ್ ಮತ್ತು ಆಕಾಶವಾಣಿಯ ನಾಗಮಣಿ ಎಸ್ ರಾವ್ ಅವರ ಸುಪುತ್ರ.
ಅಂಡರ್ 21 ವಯಸ್ಸಿನ ರಾಜ್ಯ ಮಟ್ಟದ ಕ್ರಿಕೆಟ್ ತಂಡದ ನಾಯಕ ಮತ್ತು ವಿಶ್ವವಿದ್ಯಾನಿಲಯ ತಂಡದ ನಾಯಕನಾಗಿದ್ದ ವಿನಯ್ ಅವರು, ಅನಿಲ್ ಕುಂಬ್ಲೆ ಮತ್ತು ವೆಂಕಟೇಶ್ ಪ್ರಸಾದ್ ಅವರ ಜೊತೆಯಲ್ಲಿಯೂ ಕ್ರಿಕೆಟ್ ಆಡಿದವರು.
ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಅವರು 90 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಜನ್ಮ ದಿನವೇ ಅವರ ಏಕೈಕ ಸುಪುತ್ರ ವಿನಯ್ ಸಾವಾಗಿರುವುದು ಕಾಕತಾಳೀಯ.
ಮೃತರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಮಂಗಳವಾರ ಮದ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಸಂಬಂದಿಕರು ತಿಳಿಸಿದ್ದಾರೆ.


