Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಂಬಿ ಹರಿದ ಶಾಂತಿವನ ಮಿನಿಡ್ಯಾಂ  ಸಂತಸ ವ್ಯಕ್ತಪಡಿಸಿದ ತರಳಬಾಳು ಶ್ರೀಗಳು

Advertisement
 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರುನಾಡಿನ ಜಲಋಷಿ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕರೆದರೆ ತುಂಗಭದ್ರೆಯರೇ ಓಡೋಡಿ ಬರುವರೆಂಬ ಜನಜನಿತ ವಾದ ಮಾತಿಗೆ ಬಯಲು ಸೀಮೆಯ ಭರಮಸಾಗರ ವ್ಯಾಪ್ತಿಯ,

ಬರದನಾಡೆಂಬ ಅಪಖ್ಯಾತಿಯ ಜಗಳೂರು ತಾಲ್ಲೂಕಿನ 57 ಕೆರೆಗಳು ಭರಪೂರ ಮಳೆ ಮತ್ತು ಏತ ನೀರಾವರಿಯ ಯೋಜನೆಯಡಿ ತುಂಗ ಭದ್ರೆಯರು ಹರಿದ ಪರಿಣಾಮ ಮೈದುಂಬಿ ಹರಿಯುತ್ತಿವೆ.

 ಜಗಳೂರು ಮತ್ತು ಭರಮಸಾಗರ ಕೆರೆಗೆ  ಕಳೆದ ಭಾನುವಾರ ಶ್ರೀ ಜಗದ್ಗುರುಗಳವರು ಬಾಗೀನ ಸಮರ್ಪಿಸಿದ ಭಕ್ತಿ  ಸಂಭ್ರಮದ ಉನ್ಮಾದದಲ್ಲಿ ಇರುವಾಗಲೇ ಸಿರಿಗೆರೆ ಸಮೀಪದ ಶಾಂತಿವನ ಜಲಾಶಯವು ಕಳೆದೊಂದು ವಾರದಿಂದ ತುಂಬಿ ಹರಿಯುತ್ತಿದೆ.

  ವರ್ಷದಿಂದ  ತುಂಬಿ ಹರಿದ ಸಂತೋಷ ಎಲ್ಲರ ಮನಸ್ಸುಗಳಿಗೆ ತಂಪು ನೀಡುತ್ತಿರುವ ಜೊತೆಗೆ ನಿನ್ನೆಯ ಸುರಿದ ಭರಪೂರ ಮಳೆಗೆ ಶಾಂತಿವನದ ಕಿರುಜಲಾಶಯವು  ಮೈತುಂಬಿಕೊಂಡಿದೆ.

ಶ್ರೀ ಜಗದ್ಗುರುಗಳವರ ಕರಣಧಾರತ್ವದ ಹತ್ತಾರು ಏತನೀರಾವರಿ ಯೋಜನೆಯಡಿ 500 ಕ್ಕೂ ಅಧಿಕ ಕೆರೆಗಳ ಗಂಗಾವತರಣವಾಗಲು  ಮೂಲ ಪ್ರೇರಣೆಯಂತಿರುವ ಶಾಂತಿವನ ಜಲಾಶಯವು ತುಂಬಿ ಹೆಚ್ಚುವರಿ ನೀರು ಭರಮಸಾಗರ ಕೆರೆಯತ್ತ ಹರಿಯಲು ಪ್ರಾರಂಭಿಸಿದೆ. ಈಗಾಗಲೇ ಸಿರಿಗೆರೆಯ ಮೂರು ಕೆರೆಗಳಲ್ಲಿ ಜಲ ಸಮೃದ್ಧಿಯಾಗಿರುವುದು.

 ಈ ಭಾಗದ ರೈತರ ಮಖದಲ್ಲಿ ಮಂದಹಾಸ ಮೂಡಿದೆ. ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿ ಸಿರಿಗೆರೆ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡುವ ಮಹೋನ್ನತ ಉದ್ದೇಶದಿಂದ

ಶಾಂತಿವನದಲ್ಲಿ ನಿರ್ಮಾಣವಾಗಿರುವ ಶಾಂತಿವನ ಕಿರುಜಲಾಶಯವನ್ನು ಮಠದ ವೆಚ್ಚದಿಂದಲೇ  ನಿರ್ಮಿಸಲಾಗಿದೆ. 400 ಎಕರೆ ವಿಸ್ತೀರ್ಣದ  ಶಾಂತಿವನದ ಮಧ್ಯಭಾಗದಲ್ಲಿ ಅಂದಾಜು 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಲಾಶಯವು ಸುಮಾರು 2 ಕಿ.ಮೀ. ವಿಸ್ತೀರ್ಣದ ಉದ್ದ ಹೊಂದಿದ್ದು  40 ಅಡಿ ಆಳದಲ್ಲಿ ನೀರು ಸಂಗ್ರಹವಾಗಲಿದೆ.

ಸಿರಿಗೆರೆಯ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲದ ಮಟ್ಟವನ್ನು  ಉತ್ಕೃಷ್ಟಗೊಳಿಸಿ, ಸುತ್ತಮುತ್ತಲಿನ ಪ್ರದೇಶದ ನೀರಿನ ಬವಣೆಯನ್ನು ಪರಿಹರಿಸಬೇಕೆಂದು ಸಂಕಲ್ಪಿಸಿದ ನಿತ್ಯ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪದ 20 ಕ್ಕೂ ಹೆಚ್ಚು  ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ