Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಭಗವತ್ ತತ್ವದ ಮಾತೃ ಸ್ವರೂಪವೇ ಆಗಿದ್ದ ಶಾರದಾದೇವಿ  

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿ ಅವರು ಭಗವತ್ ತತ್ವದ ಮಾತೃ ಸ್ವರೂಪವೇ ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯಿ ಅಭಿಪ್ರಾಯಪಟ್ಟರು.  

ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಶ್ರೀಮಾತೆ ಶಾರದಾದೇವಿ ಅವರ 172ನೇ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು "ಶ್ರೀಮಾತೆ ಶಾರದಾದೇವಿ ಅವರ ಜೀವನ ಮತ್ತು ಚಾರಿತ್ರ್ಯವು ಅನೇಕ ವಿಶೇಷ ಗುಣಗಳಿಂದ ಕೂಡಿದೆ.

ಅವರು ತಮ್ಮ ನಿರಹಂಕಾರ, ಸದಾ ಕರ್ಮಶೀಲತೆ, ಸರಳತೆ, ಸಹಿಷ್ಣುತೆ ಇತ್ಯಾದಿ ಸದ್ಗುಣಗಳಿಂದ ಸಮಸ್ತ ಸ್ತ್ರೀ-ಪುರುಷರು ಗೃಹಸ್ಥರು-ಸಂನ್ಯಾಸಿಗಳು ಸಾಧಕರು-ಸಂಸಾರಿಗಳು ಎಲ್ಲರಿಗೂ ಅನುಕರಣೇಯವಾದ ಸರ್ವೋನ್ನತ ಆದರ್ಶ ತೋರಿಸಿಕೊಟ್ಟಿದ್ದಾರೆ. ಆದರೆ ವಿಶ್ವದ ಎಲ್ಲ ಜೀವರಾಶಿಗಳ ಕುರಿತಾದ ಅವರ ಮಾತೃತ್ವವು ಎಲ್ಲಕಿಂತ ಅಧಿಕವಾಗಿ ಎಲ್ಲರನ್ನೂ ಆಕರ್ಷಿಸುವಂತಹ ಪ್ರಭಾವಿತಗೊಳಿಸುವಂತಹ ಅವರ ಒಂದು ವಿಶೇಷ ಗುಣ ಎಂದು ಹೇಳಬಹುದು ಎಂದು ತಿಳಿಸಿದರು.

ತಾವು ಎಲ್ಲರ ತಾಯಿ ಎಂದು ಅವರೇ ಹೇಳಿರುವರು. ಮನುಷ್ಯರಿಗಷ್ಟೇ ಅಲ್ಲ, ದೇವರ ಸೃಷ್ಟಿಯ ಸಕಲ ಜೀವರಾಶಿಗಳಿಗೂ ಅವರು ತಾಯಿಯಾಗಿದ್ದರು. ಅವರ ವಿಶ್ವವ್ಯಾಪಕ ಮಾತೃತ್ವವು ಶ್ರೀಮಾತೆಯವರ ನಡೆನುಡಿಯಲ್ಲೂ ಸ್ಪಷ್ಟವಾಗಿ ಗಮನಕ್ಕೆ ಬರುತ್ತಿತ್ತು. ಅವರು ಯುಗದ ಸಮಸ್ತ ನಾರಿ ವರ್ಗದ ಆದರ್ಶವಾಗಿದ್ದರು.

ಅವರು ಮಾನವ ದೇಹವನ್ನು ಧರಿಸಿ, ಸಾಮಾನ್ಯ ಗೃಹಿಣಿಯಂತೆ ಇರುತ್ತಿದ್ದರು. ಆದರೆ ಅವರು ಸಾಕ್ಷಾತ್ ಜಗಜ್ಜಗನಿಯಾಗಿದ್ದರು ಎಂದು ಶ್ರೀಮಾತೆ ಶಾರದಾದೇವಿ ಅವರ ಮಾತೃ ವಾತ್ಸಲ್ಯದ ವಿವಿಧ ಮುಖಗಳನ್ನು ಬಣ್ಣಿಸಿದರು.
ಪ್ರವಚನ
ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ "ಶಾರದಾದೇವಿ" ಅವರ ಕುರಿತ ಸಾಮೂಹಿಕ ಭಜನಾ ಕಾರ್ಯಕ್ರಮ,108 ಶ್ರೀರಾಮಕೃಷ್ಣ ನಾಮದ ಅರ್ಚನೆ ಮತ್ತು ಶ್ರೀಶಾರದಾಶ್ರಮದ ಯುವಕ ಯುವತಿಯರಿಂದ "ನಮ್ಮ ಪ್ರಶ್ನೆಗೆ ಶ್ರೀಮಾತೆಯವರ ಉತ್ತರ" ಎಂಬ ವಿಷಯದ ಕುರಿತು ವಿಶೇಷ ನಾಟಕ ಪ್ರದರ್ಶನ ಕಾರ್ಯಕ್ರಮವು ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ನೇತಾಜಿ ಪ್ರಸನ್ನ, ಸಂಧ್ಯಾ, ಯಶೋಧಾ ಪ್ರಕಾಶ್, ಪಿ.ಎಸ್ ಮಾಣಿಕ್ಯ, ವನಜಾಕ್ಷಿ ಮೋಹನ್, ಕವಿತಮ್ಮ, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಯತೀಶ್ ಎಂ ಸಿದ್ದಾಪುರ, ಪ್ರವೀಣ್, ಸುಮನ, ರಮೇಶ್, ರವಿಚಂದ್ರ, ಸಂತೋಷ್, ಚೇತನ್, ಡಾ.ಭೂಮಿಕ, ಸುಕೃತಿ, ಪುಷ್ಪ, ಕಾವ್ಯ, ಮಾನ್ಯ, ಮಂಜುಳ ಉಮೇಶ್, ಶ್ರೀಧರ್, ರಶ್ಮಿ ವಸಂತ, ಕೃಷ್ಣವೇಣಿ, ಶೈಲಜ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು