Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯರ ಹೃದಯದಲ್ಲಿ ಶಿವಾಜಿ ಮಹಾರಾಜ್...

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಇತಿಹಾಸದಲ್ಲಿ  ಸ್ವರಾಜ್ಯ ಸ್ಥಾಪನೆ ಮಾಡಿ ತಮ್ಮ ಶ್ರೇಷ್ಠ ವ್ಯಕ್ತಿತ್ವ
,ಸಾಹಸ, ಧೈರ್ಯ, ವೀರತ್ವ ,ಶಕ್ತಿತ್ವ ಹಾಗೂ ಆಡಳಿತ, ರಕ್ಷಣೆ, ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿ ಭಾರತೀಯರ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಶಿವಾಜಿ ಮಹಾರಾಜ್ ಇರುವುದನ್ನು ಇಂದಿಗೂ ಕಾಣಬಹುದು.

 ಶಿವಾಜಿ ಮಹಾರಾಜರ ಹೆಸರು ಕೇಳಿದ ತಕ್ಷಣ ದೇಹದಲ್ಲಿ ರೋಮಾಂಚನ, ಧೈರ್ಯ, ಆತ್ಮಾಭಿಮಾನ ,ವಿಶ್ವಾಸ, ಶಿಸ್ತು, ಸಂಯಮ ,ಸಾಹಸ, ಕರುಣೆ, ಪ್ರೀತಿ, ಆಧ್ಯಾತ್ಮ  ಭಕ್ತಿ , ಸ್ವರಾಜ್ಯ ಕಲ್ಪನೆ ಮೂಡುವುದು ಸಹಜ ಧರ್ಮವಾಗಿದೆ.

ದೇಶಿಯ  ಆಡಳಿತಗಾರರಿಗೆ ಶಿವಾಜಿ ಮಹಾರಾಜರು ಒಂದು ಮಾದರಿ. ದೇಶವನ್ನು ಹೇಗೆ ಸಂರಕ್ಷಣೆ ಮಾಡಬೇಕು, ಸೈನ್ಯ ವ್ಯವಸ್ಥೆಯನ್ನು ಹೇಗೆ ರೂಡಿಸಬೇಕು ಎಂಬ ಪರಿಕಲ್ಪನೆಯನ್ನು ಆಧುನಿಕ ಭಾರತಕ್ಕೂ ಶಿವಾಜಿ ತಮ್ಮ ಆಡಳಿತದ ಮೂಲಕ ನೀಡಿರುವುದು ಗಮನಾರ್ಹವಾದುದು.

 ಭಾರತ ಇಂದು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿರಲು ಶಿವಾಜಿ ಮಹಾರಾಜರ ಪ್ರೇರಣೆಯ ಆಡಳಿತ ಕಾರಣವಾಗಿದೆ. ಶಿವಾಜಿ ಮಹಾರಾಜರು 1627 ಫೆಬ್ರವರಿ 19 ರಂದು ಶಿವನೇರಿ ಎಂಬಲ್ಲಿ ಜನಿಸಿದರು. ತಂದೆ   ಶಹಜಿ,.ತಾಯಿ ಜೀಜಾಬಾಯಿ. ತಂದೆ ಶಹಜೀ ಸೇನಾ ಸರದಾರರಾಗಿ ಅಹಮದ್ ನಗರದ ಸುಲ್ತಾನರಲ್ಲಿ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಶಿವಾಜಿಯ ಜನನವೇ ಭಾರತದ ಅಮೃತಗಳಿಗೆ. ಶಿವಾಜಿ ಬಾಲ್ಯದಿಂದಲೂ ತಾಯಿಯ ರಾಷ್ಟ್ರೀಯ ಭಕ್ತಿ, ಭಾರತೀಯ ಸಾಹಿತ್ಯ ಮೌಲ್ಯಗಳಾದ ರಾಮಾಯಣ ಮಹಾಭಾರತ ಹಾಗೂ ಪುರಾಣದ ಪ್ರಸಿದ್ಧ ಶ್ರೇಷ್ಠ ವ್ಯಕ್ತಿತ್ವದ ಪರಂಪರೆಯ ಇತಿಹಾಸವನ್ನು ತಿಳಿದು, ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡ ಶಿವಾಜಿ ಮಹಾರಾಜರು ಸದೃಢವಾದ ಸ್ವರಾಜ್ಯವಾದ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ಹಿಂದೂ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿ ಇಂದಿಗೂ ಹೆಮ್ಮೆಯಿಂದ ಬದುಕುವ ಆಡಳಿತವನ್ನು ನೀಡಿದ ಶಿವಾಜಿಯನ್ನು ಸದಾ ಕಾಲ ನಾವು ಸ್ಪರಿಸಿಕೊಳ್ಳಲೇಬೇಕು.

ಗುರು ದಾದಾ ಜಿ ಕೊಂಡದೇವ ಸಂತರಾದ ರಾಮದಾಸ್ , ತುಕಾರಾಂ ರವರಿಂದ ಪ್ರಭಾವಿತರಾಗಿ ಬಾಲ್ಯದಲ್ಲಿಯೇ ಸ್ನೇಹಿತರು ಹಾಗೂ ಯುವ ಅನುಯಾಯಿಗಳನ್ನು ಒಳಗೊಂಡ ಪಡೆಯನ್ನು ನಿರ್ಮಿಸಿ ಸೈನಿಕ ಜೀವನವನ್ನು ಆರಂಭಿಸಿದರು. ಮಾವಳಿಯರ ಸಹಾಯದಿಂದ ಬಾಲ್ಯದಲ್ಲಿಯೇ ತೋರಣಕೋಟೆಯನ್ನು ವಶಪಡಿಸಿಕೊಂಡು ಭಗವದ್ವಜವನ್ನು ಹಾರಿಸಿದ ಮಹಾನ್ ವ್ಯಕ್ತಿ. ಸಿಂಹಗಡ, ಪುರಂದರಗಡ ಕೋಟೆ ಗೆದ್ದು ಪ್ರತಾಪಗಡ ಕೋಟೆಯನ್ನು ನಿರ್ಮಿಸಿದನು.

ಶಿವಾಜಿಯ ಹೋರಾಟ ಉತ್ತರದ ಪ್ರಬಲ ಮೊಘಲರನ್ನು ಎದುರಿಸಿದ್ದು ಹಾಗೂ ದಕ್ಷಿಣದಲ್ಲಿ ಬಿಜಾಪುರದ ಆದಿಲ್ ಶಾಹಿಗಳನ್ನು ಸೋಲಿಸುವ ಮೂಲಕ ತನ್ನ ಶಕ್ತಿಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ವಿರುದ್ಧ ಹೋರಾಟವನ್ನು ಮಾಡಿ ಅಫ್ಜಲ್ ಖಾನ್ ನನ್ನು ತನ್ನ  ವ್ಯಾಘ್ರ  ನಖ ಎಂಬ ವಿಶೇಷ ಆಯುಧದಿಂದ ಕೊಂದುಹಾಕಿ ವೀರ ಘರ್ಜನೆ ಮಾಡಿದವನು.

ಶಿವಾಜಿಯ ಪ್ರಭಾವ ದಕ್ಷಿಣ ಮತ್ತು ಉತ್ತರ ಭಾರತದ ಎಲ್ಲೆಡೆ ಪ್ರಸಾರವಾಗಿ ಉತ್ತರದ ಮೊಘಲರ ದೊರೆ ಔರಂಗಜೇಬ್ ಶಿವಾಜಿಯನ್ನು ಅಡಗಿಸಲು ಷಯಿಸ್ತಾ . ಖಾನ್ ನನ್ನು ನೇಮಿಸಿ ಕಳುಹಿಸಿದನು. ಶಿವಾಜಿಯನ್ನು ಸೋಲಿಸಿ, ಪೂನಾದಲ್ಲಿ ಇದ್ದಾಗ ಶಿವಾಜಿ ತನ್ನದೇ ಆದ ವಿಶೇಷ ಯುದ್ಧ ತಂತ್ರವಾದ ಮದುವೆ ದಿಬ್ಬಣದ ದೇಶದಾರಿಯಾಗಿ ಪೂನಾ ಪ್ರವೇಶಿಸಿದ. ತನ್ನ ಸ್ವಗೃಹದಲ್ಲಿ ಇದ್ದ ಮೇಲೆ ಶಯಿಸ್ತಾ ಖಾನ್ ಮೇಲೆ ದಿಡೀರ್ ದಾಳಿ ಮಾಡಿದ ಶಿವಾಜಿಯದಾಳಿಯಲ್ಲಿ ತನ್ನ ಕೈಬೆರಳುಗಳನ್ನು ಕಳೆದುಕೊಂಡು ತಪ್ಪಿಸಿಕೊಂಡು ಓಡಿ ಹೋಗಿ ಹೋದದ್ದು ಇತಿಹಾಸ.



ಶಿವಾಜಿ ಅಡಗಿಸಲು ಔರಂಗಜೇಬ್ ನಿರಂತರ ಪ್ರಯತ್ನ  ಮಾಡಿ ರಾಜ ಜಯ ಸಿಂಗ್ ನನ್ನು.ಕಳುಹಿಸಿದನು. ಶಿವಾಜಿಯನ್ನು ಸೋಲಿಸಿ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡನು. ಶಿವಾಜಿ ಹಾಗೂ ಅವನ ಮಗ ಸಾಂಭಾಜಿಯನ್ನು ಆಗ್ರಾದ ಮೊಘಲರ ಆಸ್ಥಾನಕ್ಕೆ ಭೇಟಿ ಆಗುವಂತೆ ಮಾಡಿ ಔರಂಗಜೇಬನು ಶಿವಾಜಿಯನ್ನು ಅವಮಾನಗೊಳಿಸಿ ಬಂಧನಕ್ಕೆ ಒಳಪಡಿಸಿದಾಗ  ಶಿವಾಜಿ ತನ್ನದೇ ಆದ ತಂತ್ರ ಹಾಗೂ ನಟನೆಯ ಮೂಲಕ ಹಣ್ಣಿನ ಬುಟ್ಟಿಯಲ್ಲಿ ತಪ್ಪಿಸಿಕೊಂಡು ಸನ್ಯಾಸಿಯ ವೇಷದಲ್ಲಿ ತನ್ನ ರಾಜ್ಯವನ್ನು ತಲುಪಿ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದನು.


 ಶಿವಾಜಿ ಹೋರಾಟ ಅವನ ಗೆರಿಲ್ಲ ತಂತ್ರಗಾರಿಕೆ ಇತಿಹಾಸದಲ್ಲಿ ವಿಶೇಷವಾದದ್ದು. ಶಿವಾಜಿ 1674 ಜೂನ್ 6 ರಂದು ಪಟ್ಟಾಭಿಷೇಕ ನೆರವೇರಿಸಿಕೊಂಡು ಛತ್ರಪತಿ ಎಂಬ ಬಿರುದನೊಂದಿಗೆ ಇಡೀ ಬ್ರಹ್ಮಾಂಡವೇ ಹೆಮ್ಮೆಪಡುವಂತಹ ಆಡಳಿತವನ್ನು ನಡೆಸಿದ ಮಹಾನ್ ವ್ಯಕ್ತಿ.

ಶಿವಾಜಿ ಆಡಳಿತ ಆತನ ಕೇಂದ್ರ ಮತ್ತು ಪ್ರಾಂತೀಯ ಆಡಳಿತಗಳು, ಕಂದಾಯ ಪದ್ಧತಿಗಳು, ಸೈನಿಕ ವ್ಯವಸ್ಥೆ ,ನ್ಯಾಯಾಂಗ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ.

ಭಾರತೀಯ ನೌಕಾಪಡೆಯ ಪಿತಾಮಹ ರಾಗಿ ನೌಕಾಪಡೆಯನ್ನು ಸಮೃದ್ಧ ಶ್ರೇಷ್ಠ ದೃಢಪಡೆಯನ್ನು ನಿರ್ಮಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ . ಧಾರ್ಮಿಕ ಸಹಿಷ್ಣತೆದಕ್ಷ ಮಿಲಿಟರಿ ತಂತ್ರ, ಮಹಿಳೆಯರ ರಕ್ಷಣೆ,. ಕೃಷಿಯ ಅಭಿವೃದ್ಧಿ, 300ಕ್ಕೂ ಹೆಚ್ಚು ಕೋಟೆಗಳ ಹೊಸ ಹಾಗೂ ನಿರ್ಮಾಣ ಮಾಡುವ ಮೂಲಕ ಶಿವಾಜಿಯ ಆಡಳಿತ ಸದಾಕಾಲ ಮಾದರಿಯಾದ ಮಾದರಿಯಾಗಿದೆ.

 ಈತನ ಬಹುಮುಖ್ಯವಾದ ಗುಣ ಮಾತೃಭಕ್ತಿ, ಗುರುಭಕ್ತಿ, ರಾಷ್ಟ್ರಭಕ್ತಿ. ಪ್ರತಿಯೊಬ್ಬ ವ್ಯಕ್ತಿಗೂ ಶಿವಾಜಿಯಲ್ಲಿದ್ದ ಮತ್ತು ಗುರುಭಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡಾಗ ಭಾರತ ಸಮೃದ್ಧ ರಾಷ್ಟ್ರವಾಗಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತದೆ. ಇಡೀ ಜಗತ್ತು ಹೆಮ್ಮೆ ಪಡಬಹುದಾದ ರೀತಿಯಲ್ಲಿ ಭಾರತವನ್ನು ನಿರ್ಮಿಸುವುದು ಯುವ ಸಮುದಾಯದ ಬಹುಮುಖ್ಯ ಕರ್ತವ್ಯವಾಗಿದೆ ಶಿವಾಜಿ ಮಹಾರಾಜರ ಇತಿಹಾಸ, ಧೈರ್ಯ, ಅಧ್ಯಯನ ಮಾಡುವ ಮೂಲಕ ಶ್ರೇಷ್ಠ ನಾಗರೀಕರಾಗಿ ಬದುಕುವ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಅರ್ಪಿಸಿಕೊಳ್ಳುವ ದೃಢವಾದ ಕಾರ್ಯವನ್ನು ಶಿವಾಜಿ ಜಯಂತಿಯ ದಿನ ಸಂಕಲ್ಪ . ಮಾಡೋಣ.
ಲೇಖನ: ಸುರೇಶ್ ಎನ್ ಋಗ್ವೇದಿ, ಉಪನ್ಯಾಸಕರು, ಅಧ್ಯಕ್ಷರು, ಜೈಹಿಂದ್ ಪ್ರತಿಷ್ಠಾನ ಚಾಮರಾಜನಗರ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ