Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಡಗರ ಸಂಭ್ರಮಗಳಿಂದ ನಡೆದ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಇತಿಹಾಸ ಪ್ರಸಿದ್ಧ
, ದೊಡ್ಡಬಳ್ಳಾಪುರ ನಗರದೇವತೆಯದ ಶ್ರೀ ಮುತ್ಯಾಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಮತ್ತು ಆರತಿಗಳ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ದೇವಾಲಯವನ್ನು ವಿದ್ಯುತ್ ದೀಪಾಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಮುತ್ಯಾಲಮ್ಮ ದೇವಿ ಮೂಲ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಸಮೀಪವಿರುವ ನವಗ್ರಹ ದೇವಾಲಯ, ಕುಕ್ಕಲಮ್ಮ ಹಾಗೂ ದೊಡ್ಡಮ್ಮ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. 

ಬೆಳಗ್ಗೆ 10ಗಂಟೆಗೆ ದೇವಾಲಯದ ಬಳಿಯಿಂದ ಹೊರಟ ಮುತ್ಯಾಲಮ್ಮ ದೇವಿಯ ಹಾಗೂ ದೊಡ್ಡಮ್ಮದೇವಿಯ ರಥೋತ್ಸವಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿ ಉತ್ಸಾಹದಿಂದ ಭಾಗವಹಿಸಿದ್ದರು. ರಥೋತ್ಸವದಲ್ಲಿ ಮಂಗಳವಾದ್ಯಗಳೊಂದಿಗೆ ಚಂಡೆ, ವೀರಗಾಸೆ, ತಮಟೆ ವಾದ್ಯ, ಪಟ್ಟದ ಕುಣಿತ, ಡೊಳ್ಳುಕುಣಿತ, ಗಾರುಡಿಬೊಂಬೆ, ಮೊದಲಾದ ಜಾನಪದ ಕಲಾ ತಂಡಗಳು, ಉತ್ಸವಕ್ಕೆ ಮೆರುಗು ನೀಡಿದ್ದವು.

ಮುತ್ಯಾಲಮ್ಮ ಜಾತ್ರಾಮಹೋತ್ಸವಕ್ಕೆ  ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ಶಾಂತಿನಗರ, ನಾಗಸಂದ್ರ, ಕೊಡಿಗೇಹಳ್ಳಿ, ರೋಜಿಪುರ ಸೇರಿದಂತೆ ನಗರ ಹಾಗೂ ತಾಲೂಕಿನ ಮಹಿಳೆಯರು ಹೊಂಬಾಳೆಯಲ್ಲಿ ಸಿಂಗರಿಸಿಕೊಂಡು ಬಂದಿದ್ದ ವಿವಿಧ ಮಾದರಿಯ ಆರತಿಗಳನ್ನು ದೇವಿಗೆ ಬೆಳಗಿದರು. ಮಂಗಳವಾರ ಸಂಜೆ ಕುರ್ಜುಗಳಲ್ಲಿ ಆಯಾ ಗ್ರಾಮದ ದೇವರುಗಳನ್ನು ಪ್ರತಿಷ್ಠಾಪಿಸಿಕೊಂಡು ಹೂವಿನ ಅಲಂಕಾರದೊಂದಿಗೆ ಆಗಮಿಸಿದ್ದವು. ಕುರುಬರಹಳ್ಳಿ, ಕೊಡಿಗೇಹಳ್ಳಿ ರೋಜಿಪುರ ಸೇರಿದಂತೆ ನಗರ ಹಾಗೂ ತಾಲೂಕಿನ ಗ್ರಾಮಸ್ಥರಿಂದಲು ಹೂವಿನ ಆರತಿ ಉತ್ಸವ ನಡೆಯಿತು.

ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ:
ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ಪದಾಧಿಕಾರಿಗಳು ಹಾಗೂ ಏಳೂರು ಮುಖಂಡರು ಜಾತ್ರಾ ಉತ್ಸವದ ಉಸ್ತುವಾರಿ ವಹಿಸಿ
, ಸಂಭ್ರಮದ ಜಾತ್ರೆಗೆ ಕಾರಣರಾದರು.ಭಾಗವಹಿಸಿದ್ದರು. ಜಾತ್ರೆಯ ಅಂಗವಾಗಿ ನೂರಾರು ಅಂಗಡಿ ಮುಗ್ಗಟ್ಟುಗಳು ಸಾಲುಗಟ್ಟಿದ್ದವು. ಮಧ್ಯಾಹ್ನದ ನಂತರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಗರದ ರೋಜಿಪುರಕ್ಕೆ ತೆರಳಿತು. ಒಕ್ಕಲು ಕುಲದ ಗೌಡನೊಬ್ಬ ಮುತ್ಯಾಲಮ್ಮ ದೇವಿಯನ್ನು ಪ್ರಥಮ ಬಾರಿಗೆ ತನ್ನ ಮನೆಗೆ ಆಹ್ವಾನಿಸಿ ಪೂಜೆ, ಹರಕೆಗಳನ್ನು ಸಮರ್ಪಿಸಿ ಕಳುಹಿಸಿಕೊಟ್ಟ ಐತಿಹ್ಯವಿದೆ ಹಾಗಾಗಿ ಅಂದಿನಿಂದಲೂ ರೋಜಿಪುರ ಮುತ್ಯಾಲಮ್ಮದೇವಿಯ ತವರು ಮನೆಯೆಂದು ಬಿಂಬಿತವಾಗಿದ್ದು, ಇಂದಿಗೂ ಸಹ ಜಾತ್ರೆಯ ದಿನದಂದು ಹೆಣ್ಣು ಮಗಳು ತವರಿಗೆ ಹೋಗಿ ಬಂದಂತೆ ಸಂಭ್ರಮಿಸುವ ಆಚರಣೆ ನಡೆಯುತ್ತಿದೆ.

ರೋಜಿಪುರದಲ್ಲಿ ಮುತ್ಯಾಲಮ್ಮ-
ದೇವಿಯ ಜಾತ್ರೆ ಸಂಭ್ರಮ ಮನೆ ಮಾಡಿತ್ತು. ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಮುತ್ಯಾಲಮ್ಮ ಜಾತ್ರೆ ಅಂಗವಾಗಿ ಅಂಜನೇಯಸ್ವಾಮಿ ಕುರ್ಜಿನ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಹಿಳೆಯರು ಹೂವಿನ ಆರತಿಗಳನ್ನು ಹೊತ್ತು ಸಾಗಿದರು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಜನ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು.

ಒಟ್ಟಾರೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರದಲ್ಲಿ ಮುತ್ಯಾಲಮ್ಮ ದೇವಿ ಜಾತ್ರೆ ವರ್ಷದಿಂದ ವರ್ಷಕ್ಕೆ ಹೊಸ ಮೆರಗನ್ನು ನೀಡುತ್ತಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಂದ್ರಮ್ಮನ ಆಚರಣೆ ಅಥವಾ ಬೆಳ್ದಿಂಗ್ಳಪ್ಪನ ಪೂಜೆಗೆ ಬನ್ನಿ...ಅಡ್ಡಿ ಆತಂಕಗಳಿಗೆ ಸರ್ಕಾರ ಸೊಪ್ಪು ಹಾಕದೆ ಒಳ ಮೀಸಲಾತಿ ಜಾರಿ ಮಾಡಿರುವುದು ಸ್ವಾಗತಾರ್ಹ-ಮಾದಾರಶ್ರೀಲಿಂಗರಾಜು ಎಸ್.ಎಂ. ರವರಿಗೆ ಪಿಎಚ್.ಡಿ. ಪದವಿ ಪ್ರದಾನಗ್ರಾಮೀಣ ಪ್ರತಿಭೆ ನಮಿತಾ, ವೇದಾ ಸೇರಿದಂತೆ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಗಣ್ಯರುಕೆಎಸ್&ಡಿಎಲ್ ಚಾರಿತ್ರಿಕ ಮೈಲಿಗಲ್ಲು: 2,016 ಕೋಟಿ ವಹಿವಾಟು, 507 ಕೋಟಿ ಲಾಭಕೆಎಸ್&ಡಿಎಲ್ ಚಾರಿತ್ರಿಕ ಮೈಲಿಗಲ್ಲು: 2,016 ಕೋಟಿ ವಹಿವಾಟು, 507 ಕೋಟಿ ಲಾಭದೀನದಲಿತರ ಮತ್ತು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿದ್ದರಾಮಯ್ಯಎಸ್‌ಸಿ/ಎಸ್‌ಟಿ ಉಪಯೋಜನೆಗೆ 44,632 ಕೋಟಿ ಭಾರಿ ಅನುದಾನಜಲಜೀವನ್ ಮಿಷನ್ 2.0: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ; ಬಾಕಿ ಹಣ ಬಿಡುಗಡೆಗೆ ಆಗ್ರಹಬೆಂಗಳೂರು 'ಅರ್ಬನ್ ನಕ್ಸಲರ' ತಾಣವಾಗುತ್ತಿದೆ: ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ