ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮ ದೇವಸ್ಥಾನದಲ್ಲಿ 'ಶ್ರೀಕೃಷ್ಣ ಜನ್ಮಾಷ್ಟಮಿ' ಪ್ರಯುಕ್ತ ಸೆಪ್ಟೆಂಬರ್ 3 ಮತ್ತು 4 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ: ಸೆಪ್ಟೆಂಬರ್ 3 (ಗುರುವಾರ - ಸಂಜೆ 5.00 ಗಂಟೆಗೆ):
ಬೆಂಗಳೂರಿನ ಪ್ರಸಿದ್ಧ ಗಾಯಕರಾದ ವಿದ್ವಾನ್ ಕೆ. ಗುರುರಾಜ್ ಅವರಿಂದ "ಶ್ರೀಕೃಷ್ಣ ಸಂಕೀರ್ತನೆ" ಸಂಗೀತ ಕಾರ್ಯಕ್ರಮ.
ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರಿಂದ ವಿಶೇಷ ಪ್ರವಚನ.
ಸೆಪ್ಟೆಂಬರ್ 4 (ಶುಕ್ರವಾರ - ಸಂಜೆ 5.30 ರಿಂದ):
ಶ್ರೀಮತಿ ವನಜಾಕ್ಷಿ ಮೋಹನ್ ಅವರಿಂದ "ಶ್ರೀಕೃಷ್ಣನ ಭಜನೆಗಳು".
ಮಾತಾಜೀ ತ್ಯಾಗಮಯೀ ಅವರಿಂದ "ಶ್ರೀಕೃಷ್ಣ ಲೀಲಾಮೃತ" ವಿಷಯ ಕುರಿತು ವಿಶೇಷ ಪ್ರವಚನ.
ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾಗಬೇಕಾಗಿ ಶ್ರೀಶಾರದಾಶ್ರಮದ ಪ್ರಕಟಣೆಯಲ್ಲಿ ಕೋರಲಾಗಿದೆ.




