Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ ಜಾಲತಾಣಗಳು ; ಅವಕಾಶಗಳ ನಡುವೆ ಹೆಚ್ಚುತ್ತಿರುವ ಅಪಾಯಗಳು

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಮಾನವನ ದಿನನಿತ್ಯದ ಬದುಕನ್ನು ಆಳವಾಗಿ ಪ್ರಭಾವಿಸುತ್ತವೆ.
Facebook, Instragram, whatsup ಮತ್ತು ಮುಂತಾದ ವೇದಿಕೆಗಳು ವಿಶ್ವವನ್ನು ಒಂದು ಸಣ್ಣ ಹಳ್ಳಿಯಂತೆ ರೂಪಾಂತರಗೊಳಿಸಿವೆ.
ದೂರುಗಳು ಕಡಿಮೆಯಾಗಿವೆ
, ಮಾಹಿತಿ ಕ್ಷಣಾರ್ಧದಲ್ಲಿ ಹರಡುತ್ತಿದೆ. ಹೊಸ ಅವಕಾಶಗಳು ಮೂಡುತ್ತಿವೆ ಆದರೆ ಈ ಡಿಜಿಟಲ್ ಕ್ರಾಂತಿಯ ಜೊತೆಗೆ ಸಮಾಜಕ್ಕೆ ಹೊಸ ರೀತಿಯ ಸವಾಲುಗಳು ಎದುರಾಗುತ್ತಿದೆ.

ಸಾಮಾಜಿಕ ಜಾಲತಾಣಗಳು ಒಂದು ಕಡೆ ಜ್ಞಾನ ಮತ್ತು ಸಂಪರ್ಕಗಳ ಸೇತುವೆಯಾದರೆ ಮತ್ತೊಂದು ಕಡೆ ಅವುಗಳು ಮಾನಸಿಕ, ಸಾಮಾಜಿಕ  ಮತ್ತು ಆರ್ಥಿಕ ಸಮಸ್ಯೆಗಳ ಮೂಲವಾಗುತ್ತಿವೆ.

ಇಂದಿನ ಯುವಜನರ ತಮ್ಮ ಸಮಯದ ದೊಡ್ಡ ಭಾಗವನ್ನು ಈ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ. ಇತರರ ಜೀವನದ ಆಕರ್ಷಕ ಚಿತ್ರಣಗಳನ್ನು ನೋಡಿ ತಮ್ಮ ಜೀವನವನ್ನು ಹೋಲಿಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಆತ್ಮವಿಶ್ವಾಸ ಕುಗ್ಗುವಿಕೆ, ಆತಂಕ, ಮನೋ ದೌರ್ಬಲ್ಯ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. Like ಮತ್ತು comment ಗಳ ಮೇಲೆ ಅವಲಂಬನೆ ಹೆಚ್ಚಾಗಿ ವ್ಯಕ್ತಿಯ ಸಂತೋಷವೇ ವರ್ಚುವಲ್ ಮಾನ್ಯತೆ ಮೇಲೆ ಅವಲಂಬಿತವಾಗುತ್ತಿರುವುದು ಕಳವಳಕಾರಿ ಸಂಗತಿ.

ಸಾಮಾಜಿಕ ಜಾಲತಾಣಗಳ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ವ್ಯಸನ , ನಿರಂತರವಾಗಿ ಮೊಬೈಲ್ ಫೋನ್ ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳ ಓದು ಹಿನ್ನಡೆಯಾಗುತ್ತಿದೆ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ.

ಕುಟುಂಬದ ಸದಸ್ಯರ ನಡುವೆ ನೈಜ ಸಂವಹನ ಕಡಿಮೆಯಾಗುತ್ತಿದ್ದು, ಸಂಬಂಧಗಳಲ್ಲಿ ದೂರ ಹೆಚ್ಚುತ್ತಿದೆ. ಈ ಡಿಜಿಟಲ್ ವ್ಯಸನವು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ, ನಿದ್ರಾಹೀನತೆ, ಕಣ್ಣುಗಳ ತೊಂದರೆ, ದೈಹಿಕ ಚಟುವಟಿಕೆಗಳ ಕೊರತೆ ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ.

ಇದಕ್ಕಿಂತ ಗಂಭೀರವಾಗಿ, ಸಾಮಾಜಿಕ ಜಾಲತಾಣಗಳು ಸೈಬರ್ ಅಪರಾಧಗಳ ಕೇಂದ್ರವಾಗುತ್ತಿವೆ. ಇಂದಿನ ದಿನಗಳಲ್ಲಿ ಸೈಬರ್ ಅಪರಾಧಗಳು , ಆನ್ಲೈನ್ ವಂಚನೆ , ಗುರುತಿನ ಕಳವು, ಖಾಸಗಿ ಮಾಹಿತಿಯ ದುರುಪಯೋಗ, ಹ್ಯಾಕಿಂಗ್ ಮುಂತಾದ ಅಪರಾಧಗಳು ಹೆಚ್ಚಾಗುತ್ತಿವೆ.

ನಕಲಿ ಖಾತೆಗಳನ್ನು ಸೃಷ್ಟಿಸಿ ಜನರನ್ನು ಮೋಸಗೊಳಿಸುವುದು ಸಾಮಾನ್ಯವಾಗಿದೆ. OTP ಕೇಳಿ ಹಣ ದೋಚುವುದು- ಇವು ಸಾಮಾನ್ಯ ಅಪರಾಧಗಳಾಗಿವೆ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇಂತಹ ಅಪರಾಧಗಳಿಗೆ ಹೆಚ್ಚು ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ತಪ್ಪು ಮಾಹಿತಿಯ ಹರಡುವಿಕೆಯೂ ಒಂದು ಗಂಭೀರ ಸಮಸ್ಯೆಯಾಗಿದೆ. ಯಾವುದೇ ಮಾಹಿತಿಯನ್ನು ಪರಿಶೀಲಿಸದೆ ಹಂಚಿಕೊಳ್ಳುವುದರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತದೆ. ಮತ್ತೊಮ್ಮೆ ಇದು ದ್ವೇಷ, ಅಶಾಂತಿ ಮತ್ತು ಹಿಂಸಾಚಾರಕ್ಕೂ ಕಾರಣವಾಗಬಹುದು. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆ ಅತ್ಯಗತ್ಯವಾಗಿದೆ.

ಸಮಾಜದ ಮೇಲೆ ಇದರ ಪರಿಣಾಮವೂ ಮಹತ್ವದ್ದಾಗಿದೆ, ಕುಟುಂಬ ದುರ್ಬಲವಾಗುತ್ತಿದೆ ವಾಸ್ತವಿಕ ಜೀವನಕ್ಕಿಂತ ವರ್ಚುವಲ್ ಜೀವನಕ್ಕೆ ಹೆಚ್ಚು ಮಹತ್ವ ನೀಡುವ ಪ್ರವೃತ್ತಿ ಬೆಳೆಯುತ್ತಿದೆ. ಇದು ಭವಿಷ್ಯದ ಸಮಾಜದ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಎಲ್ಲಾ ಸಮಸ್ಯೆಗಳನ್ನು ತಡೆಯಲು ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಸ್ಟ್ರಾಂಗ್ ಪಾಸ್ವರ್ಡ್  ಬಳಸುವುದು ಮತ್ತು ಎರಡು ಹಂತದ ಭದ್ರತೆ ಸಕ್ರಿಯಗೊಳಿಸಬೇಕು . ವೈಯಕ್ತಿಕ ಮಾಹಿತಿಗಳನ್ನು ಮಿತವಾಗಿ ಹಂಚಿಕೊಳ್ಳುವುದು , ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು, ಖಾತೆಗಳ ಗೌಪ್ಯತೆ ಸೆಟ್ಟಿಂಗಳನ್ನು ಸರಿಯಾಗಿ ನಿರ್ವಹಿಸಬೇಕು . ಪೋಷಕರು ಮಕ್ಕಳ ಮೇಲೆ ಗಮನಹರಿಸಬೇಕು, ಶಾಲಾ ಕಾಲೇಜುಗಳಲ್ಲಿ ಡಿಜಿಟಲ್ ಶಿಕ್ಷಣದ ಬಗ್ಗೆ ಮಾಹಿತಿ ನೀಡಬೇಕು.

ಸಾಮಾಜಿಕ ಜಾಲತಾಣಗಳು ಸಂಪೂರ್ಣವಾಗಿ ಕೆಟ್ಟದ್ದಲ್ಲ; ಅವುಗಳ ಸರಿಯಾದ ಬಳಕೆ a ಜೀವನವನ್ನು ಸುಧಾರಿಸಬಹುದು, ಆದರೆ ಅವುಗಳನ್ನು ಜವಾಬ್ದಾರಿಯುತವಾಗಿ ಬಳಸದೇ ಇದ್ದರೆ ಅಪಾಯಕಾರಿಯಾಗಬಹುದು. ಎಚ್ಚರಿಕೆ , ಜಾಗೃತಿ ಮತ್ತು ನಿಯಂತ್ರಿತ ಬಳಕೆಯ ಮೂಲಕವೇ ನಾವು ಸುರಕ್ಷಿತ ಮತ್ತು ಆರೋಗ್ಯಕರ ಡಿಜಿಟಲ್ ಸಮಾಜವನ್ನು ನಿರ್ಮಿಸಬಹುದು. ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಅಗತ್ಯವಾದರೂ , ಅದನ್ನು ಮಿತಿಯೊಳಗೆ ಮತ್ತು ಜವಾಬ್ದಾರಿಯಿಂದ ಬಳಸುವುದು ಇನ್ನಷ್ಟು ಅಗತ್ಯವಾಗಿದೆ.
ಲೇಖನ:ಶ್ರೀಮತಿ ಶೃತಿ ದೀಕ್ಷಿತ್, ಹವ್ಯಾಸಿ ಚಿತ್ರಗಾರ್ತಿ ಹಾಗೂ ಬರಹಗಾರ್ತಿ, ಚಿತ್ರದುರ್ಗ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ-- ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಟೈಲರಿಂಗ್ ತರಬೇತಿ ಹಾಗೂ ಯಂತ್ರೋಪಕರಣಗಳ ವಿತರಣೆಗೆ ಅರ್ಜಿ ಆಹ್ವಾನಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ: 321 ವಿದ್ಯಾರ್ಥಿಗಳು ಹಾಜರುನಿರುದ್ಯೋಗಿಗಳಿಗೆ ರುಡ್‍ಸೆಟ್  ಸಂಸ್ಥೆಯಿಂದ ಉದ್ಯೋಗ ತರಬೇತಿಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಅದ್ದೂರಿಯಾಗಿ ನಡೆದ ಉಜ್ಜನಿ ಬೀರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿ ಸ್ವಾಮಿ ರಂಗನಾಥಾನಂದಜೀಡಾ. ಅಂಬೇಡ್ಕರ್ ಅವರ ಜಯಂತಿ ಕೇವಲ ಒಂದು ಜಾತಿ ಧರ್ಮಕ್ಕೆ ಮೀಸಲಾಗಬಾರದುಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮೋತ್ಸವಕ್ಕೆ ಸಚಿವ ಎಂ.ಬಿ. ಪಾಟೀಲ್‌ಗೆ ಆಮಂತ್ರಣಜನರ ಅಹವಾಲು ಆಲಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್: ದಾವಣಗೆರೆಯಲ್ಲಿ ‘ಜನತಾದರ್ಶನ’