ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಹೊರವಲಯದ ನರಹರಿ ನಗರದಲ್ಲಿರುವ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ವಾಲ್ಮೀಕಿನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ಭಜನಾ ಮಂಡಳಿಯ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮವು ಭಕ್ತಿಭಾವದಿಂದ ಜರುಗಿತು.
ಮಂಡಳಿಯ ಪ್ರಮುಖರಾದ ವನಜಾಕ್ಷಿ ಪಂಚಾಕ್ಷರಿ, ಮಂಜುಳಾ ಬಸವರಾಜ್, ಗೀತಾ ಪ್ರಕಾಶ್, ಯಶೋಧಾ ದೇವರಾಜ್, ಭಜಂತ್ರಿ, ಸುಜಾತಾ ಮನೋಹರ್ ಹಾಗೂ ಮೃದಂಗ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ. ವೈ. ರಾಜಾರಾಮ್ ಗುರುಗಳು ಭಜನೆಗಳನ್ನು ಹೇಳಿಕೊಡುವುದರ ಜೊತೆಗೆ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀನರಹರೇಶ್ವರ ದೇವರಿಗೆ ಮಹಾಮಂಗಳಾರತಿ ಜರುಗಿತು. ನಂತರ ಆಗಮಿಸಿದ್ದ ಭಕ್ತ ಸಮೂಹಕ್ಕೆ ಅನ್ನಪ್ರಸಾದ ವಿನಿಯೋಗ ಮಾಡಲಾಯಿತು.
ಈ ಭಜನಾ ಕಾರ್ಯಕ್ರಮದಲ್ಲಿ ಮಂಗಳಾ, ಪುಷ್ಪಲತಾ, ಲಾವಣ್ಯ, ಸವಿತಾ ತಿಪ್ಪೇರುದ್ರಪ್ಪ, ದಾಕ್ಷಾಯಣಿ, ಜಾನಕಿ, ಸುನೀತಾ, ಲತಾ, ಶಕುಂತಲಾ, ಜಯಮ್ಮ, ಶ್ರೀದೇವಿ, ಹಿತಾ ಪಟೇಲ್, ಸುಭದ್ರ, ಅನಿತಾ, ವಾಣಿ, ಕಾವ್ಯ, ವಿಜಯಲಕ್ಷ್ಮೀ, ಸುಜಾತಾ ಸೇರಿದಂತೆ ಸಮಾಜ ಸೇವಕ ಯತೀಶ್ ಎಂ. ಸಿದ್ದಾಪುರ, ಚಂದ್ರಕಲಾ, ರಾಮಚಂದ್ರಪ್ಪ, ಧನಂಜಯ, ರೇವಣಸಿದ್ದಯ್ಯ ಹಾಗೂ ಅಶ್ವಿನಿ ಉಪಸ್ಥಿತರಿದ್ದು ಭಜನೆಯಲ್ಲಿ ಪಾಲ್ಗೊಂಡಿದ್ದರು.




