Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶ್ರೀ ಕಾಶಿ ವಿಶ್ವನಾಥ ಸಮಿತಿ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಶ್ರೀ ಕಾಶಿ ವಿಶ್ವನಾಥ ಮತ್ತು ಬೆನಕನಾಳ ಅಭಿವೃದ್ಧಿ ಸಮಿತಿ ವತಿಯಿಂದ ಶ್ರಾವಣ ಮಾಸದ ಕೊನೆಯ ಶನಿವಾರದ ಪ್ರಯುಕ್ತ ಶ್ರೀ ಶನೇಶ್ಚರ ದೇವಾಲಯ ಹಾಗೂ ಬೆನಕನಾಳ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. 

 ಬೆಳಗ್ಯೆ ಗಣಪತಿ ಹೋಮ, ನವಗ್ರಹ ಹೋಮ, ವಿನಾಯಕನಿಗೆ ವಿಶೇಷ ಪೂಜೆ ಗಂಗಾ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಗ್ರಾಮಸ್ಥರು ನೆರವೇರಿಸಿದರು.

Advertisement

 ಈ ವೇಳೆ ಕಾರ್ಯಕ್ರಮದ  ಶ್ರೀ ಕಾಶಿ ವಿಶ್ವನಾಥ ಮತ್ತು ಬೆನಕನಾಳ ಅಭಿವೃದ್ಧಿ ಸಮಿತಿ  ಪ್ರಮುಖರಾದ ಮುನಿಕೃಷ್ಣಚಾರಿ ಮಾತನಾಡಿ  ರಾಜ್ಯದ್ಯಂತ ಬರಗಾಲವಿರುವ ಈ ಸಂದರ್ಭದಲ್ಲಿ ಉತ್ತಮ ಮಳೆ ಬೆಳೆ ನೀಡುವಂತೆ ಕೋರಿ ಶ್ರೀ ಶನೇಶ್ಚರ ಸ್ವಾಮಿಗೆ ವಿಶೇಷ ಪೂಜಾ ಹೋಮ-ಹವನಗಳನ್ನು ಏರ್ಪಡಿಸಲಾಗಿದೆ. ಅಲ್ಲದೆ ಲೋಕಕಲ್ಯಾಣಾರ್ಥವಾಗಿ ಶ್ರೀ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಜಿಲ್ಲೆ ಹಾಗೂ ರಾಜ್ಯಕ್ಕೆ ದೇವರ ಕೃಪೆ ಸಿಗಲಿ ಬರಗಾಲದ ಈ ಸಂದರ್ಭ ಆದಷ್ಟು ಬೇಗ ಕಳೆಯಲಿ ಎಂದು ಈ ಮೂಲಕ ಭಗವಂತನಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

 ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ಬೆನಕನ ಹಳ್ಳ ಎಂದೇ ಪ್ರಸಿದ್ಧಿ ಪಡೆದಿರುವ ವಿನಾಯಕ ದೇವಾಲಯವು  ಐತಿಹಾಸಿಕ ಹಿನ್ನೆಲೆ ಹೊಂದಿದೆ ಶ್ರಾವಣ ಮಾಸದ ವಿಶೇಷ ದಿನದಂದು ಇಲ್ಲಿನ ಶ್ರೀ ಶನೇಶ್ಚರ ದೇವಾಲಯ ಹಾಗೂ ವಿನಾಯಕ ದೇವಾಲಯಗಳಲ್ಲಿ ಸ್ಥಳೀಯ ಗ್ರಾಮಸ್ಥರು ವಿಶೇಷ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಪೂಜೆಯಲ್ಲಿ ನಾನು ಭಾಗವಹಿಸಿದ್ದೇನೆ ಈ ಸ್ಥಳವನ್ನು ಸರ್ಕಾರ ಗುರುತಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

 ತೂಬಗೆರೆ ವಿ ಎಸ್ ಎಸ್ ಎನ್ ಅಧ್ಯಕ್ಷ ವಾಸು ಮಾತನಾಡಿ ನಮ್ಮ ಚಿಕ್ಕಂದಿನಿಂದಲೂ ಈ ದೇವಾಲಯಕ್ಕೆ ಬರುತ್ತಿದ್ದೇವೆ, ದೇವಾಲಯಕ್ಕೆ ತನ್ನದೇ ಆದ ಶಕ್ತಿ ಇದೆ ಭಕ್ತರು ಬೇಡಿದ ವರಗಳನ್ನು ಕೊಡುವ ವಿನಾಯಕ ಜೊತೆಗೆ ಶ್ರೀ ಶನೇಶ್ಚರ ದೇವರು ಇಲ್ಲಿ ನೆಲೆಸಿದ್ದಾರೆ ಅಲ್ಲದೆ ಶ್ರೀ ಕಾಶಿ ವಿಶ್ವನಾಥ ಮತ್ತು ಬೆನಕನಾಳ ಅಭಿವೃದ್ಧಿ ಸಮಿತಿ ವತಿಯಿಂದ ಸರ್ವ ಜನರ ಒಳಿತಿಗಾಗಿ ಶ್ರೀ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ ಬರಗಾಲದಿಂದ ಕಂಗಾಲಾಗಿರುವ ರೈತರಿಗೆ ಒಳಿತು ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳೀಯ ಮುಖಂಡರಾದ ಕೃಷ್ಣಾಚಾರಿ ಯದ್ದಲಹಳ್ಳಿ , ತೂಬಗೆರೆ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಬಾಬು, ನಾಗೇಶ್ ಹಿರೇಮುದ್ದೇನಹಳ್ಳಿ, ಆರ್ ಜಿ ಪಿ ಏನ್ ಗಂಗಾಧರ್ ಟಿ.ಹೊಸಹಳ್ಳಿ, ಗುರುಪ್ರಸಾದ್ ನೆಲ್ಲುಗುದಿಗೆ, ರಮೇಶ್ ಮಾರಳ್ಳಿ, ಶಶಿಕುಮಾರ್ ಹಿರೇಮುದ್ದೇನಹಳ್ಳಿ, ಲಕ್ಷ್ಮೀಪತಿ (ಮಾರ್ಕೆಟ್), ನರಸಿಂಹ ಸ್ವಾಮಿ ಹಿರೇಮುದ್ದೇನಹಳ್ಳಿ, ಗೋವಿಂದರಾಜು  ಮೆಳೇಕೋಟೆ ,ನರಸಿಂಹಸ್ವಾಮಿ ಹಿರೇಮುದ್ದೆನಹಳ್ಳಿ. ದೇವರಾಜ್ ನಾರಸಿಂಹನಹಳ್ಳಿ,ವಿನಯ್ ಆರಾಧ್ಯ ತುಮಕೂರು,ಉದಯ್ ಆರಾಧ್ಯ, ಚಿದಾನಂದ್ ತುಮಕೂರು, ಲಕ್ಷ್ಮೀ ಪತಿ ಹಿರೇಮುದ್ದೆನಹಳ್ಳಿ,ಪ್ರಶಾಂತ್ ಹಾಗೂ ಪ್ರಸಾದ್ ಹಿರೇಮುದ್ದೆನಹಳ್ಳಿ, ಶ್ರೀನಿವಾಸ್ ಮೆಳೇಕೋಟೆ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ