Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ಥಕ ಬದುಕಿಗೆ ಅಧ್ಯಾತ್ಮ ಅವಶ್ಯಕ-ಮಾತಾಜೀ ವಿವೇಕಮಯೀ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮಾನವ ಜನ್ಮದ ಸಾರ್ಥಕ ಬದುಕಿಗೆ ಅಧ್ಯಾತ್ಮ ಅತ್ಯಂತ ಅವಶ್ಯಕ ಎಂದು ಬೆಂಗಳೂರಿನ ಶ್ರೀಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜೀ ವಿವೇಕಮಯೀ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಸಾರ್ಥಕ ಬದುಕಿಗೆ ಅಧ್ಯಾತ್ಮ" ಎಂಬ ವಿಷಯವಾಗಿ ಆಶೀರ್ವಚನ ನೀಡಿದರು.          

                                  "ಜಪ ಸಾಧನೆಯ ಬಗ್ಗೆ ಶ್ರೀಮಾತೆಯವರ ಮಾರ್ಗದರ್ಶನ" ಎಂಬ ವಿಷಯವಾಗಿ ಪ್ರವಚನ ನೀಡಿದ ದಾವಣಗೆರೆಯ ಸಾಧನಾಶ್ರಮದ ಅಧ್ಯಕ್ಷೆ ಮಾತಾಜೀ ಯೋಗಾನಂದಮಯೀ ಅವರು  ಸಮರ್ಥ ಗುರು ಮುಖೇನ ಪಡೆದ ಬೀಜ ರೂಪದ ಮಂತ್ರದ ನಿರಂತರ ಜಪದಿಂದ ಭಗವಂತನ ಒಲುಮೆ,ಅವನ  ದರ್ಶನ ಸಾಧ್ಯವಾಗುತ್ತದೆ. ಜಪವನ್ನು ನಾವು ಮಾಡುವ ಕೆಲಸಗಳ ಮಧ್ಯೆಯೇ ಮಾಡಬಹುದು. ಸತತ ನಾಮಜಪದಿಂದ ಆನಂದ, ಮನಃಶಾಂತಿ ಲಭ್ಯವಾಗುತ್ತದೆ ಎಂದರು.


ಸತ್ಸಂಗದ ಆರಂಭದಲ್ಲಿ ಮೈಸೂರಿನ ಶ್ರೀಶಾರದಾ ವಿಶ್ವಭಾವೈಕ್ಯ ಆಶ್ರಮದ ಅಧ್ಯಕ್ಷೆ ಮಾತಾಜೀ ಅಮೋಘಮಯೀ ಅವರಿಂದ ವಿಶೇಷ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು.                    

                ವಿಶೇಷ ಸತ್ಸಂಗ ಸಭೆಯ ದಿವ್ಯಸಾನಿಧ್ಯವನ್ನು ಮಾತಾಜೀ ವಂದನಾಮಯೀ, ಚೆನ್ನಪಟ್ಟಣ-ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ಜ್ಯೋತ್ಸ್ನಾಮಯೀ, ಮನಗೂಳಿಯ ಮಾತಾಜೀ ಮೋಕ್ಷಪ್ರಾಣಾ,ಮಾತಾಜೀ ತ್ಯಾಗಮಯೀ, ಬ್ರಹ್ಮಚಾರಣಿ ಲಕ್ಷ್ಮೀ ವಹಿಸಿದ್ದರು.
ಸದ್ಭಕ್ತೆ ಡಿ.ಕಾವೇರಿ ಸುರೇಶ್ ಸ್ವಾಗತಿಸಿದರು.



ಸತ್ಸಂಗದಲ್ಲಿ ಎಚ್ ಲಕ್ಷ್ಮೀದೇವಮ್ಮ, ಕವಿತಾ ಗುರುಮೂರ್ತಿ, ಜಿ.ಯಶೋಧಾ ಪ್ರಕಾಶ್, ಪಿ.ಎಸ್. ಮಾಣಿಕ್ಯ ಸತ್ಯನಾರಾಯಣ, ಎಂ ಗೀತಾ ನಾಗರಾಜ್, ಹೂವಿನ ಲಕ್ಷ್ಮೀದೇವಿ, ಭಜಂತ್ರಿ, ಸುಮಂಗಳಮ್ಮ, ನಾಗಶಯನ ಗೌತಮ್, ಸುಮನಾ, ಶೋಭಾ ರಮೇಶ್, ಯತೀಶ್ ಎಂ ಸಿದ್ದಾಪುರ, ಸಂತೋಷ್, ಡಾ.ಭೂಮಿಕಾ, ಚೇತನ್, ಮಾನ್ಯ, ದೀಪಾ, ಸುದೀಪ್, ಚೆನ್ನಕೇಶವ, ಲೋಕಮಾನ್ಯ, ಆರ್.ಗೋವಿಂದಶೆಟ್ಟಿ, ಅಂಬುಜಾ, ಕವಿತಾ, ರಶ್ಮಿ, ಯಶಸ್ವಿ, ಸಂಗೀತ, ಸೌಮ್ಯ, ಸುಧಾಮಣಿ,ಲತಾ, ಕಲ್ಪನಾ,ಪಂಕಜಾ, ಪ್ರೇಮಲೀಲಾ, ಸಂಧ್ಯಾ,ಮಂಜುಳಾ, ಲಕ್ಷ್ಮೀ, ಪುಷ್ಪಲತಾ,ದ್ರಾಕ್ಷಾಯಣಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ