Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ: ಶೃಂಗೇರಿ ಸ್ವಾಮೀಜಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದ್ರಿಯಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳಲು ಸಾಧ್ಯವಾಗುವ ಜ್ಞಾನವೇ ನೈಜ ಜ್ಞಾನ. ಅಂತಹ ಜ್ಞಾನ ಪಡೆಯುವುದೇ ನಮ್ಮ ಜೀವನ ಮಾರ್ಗವಾಗಬೇಕು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ
, ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದ್ದಾರೆ.

ನಗರದ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ವೇದಾಂತ ಭಾರತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ವಿವೇಕ ದೀಪ್ತಿಬೃಹತ್ ಸಮಾವೇಶದಲ್ಲಿ  ಶ್ರೀ ಶಂಕರಭಗವತ್ಪಾದ ವಿರಚಿತ ದಕ್ಷಿಣಾ ಮೂರ್ತಿ ಅಷ್ಟಕದ ಮಹಾ ಸಮರ್ಪಣೆ ನಂತರ ಆಶೀರ್ವಚನ ನೀಡಿದ ಅವರು, ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಳ್ಳದಿದ್ದರೆ ಸಹಜವಾಗಿಯೇ ದುಖಃ ಅನುಭವಿಸಬೇಕಾಗುತ್ತದೆ. ಆಧುನಿಕ ವಿಜ್ಞಾನದ ಆವಿಷ್ಕಾರಗಳು, ಪ್ರಗತಿ ನಮ್ಮ ಜೀವನ ಸುಧಾರಣೆಗೆ ನೆರವಾಗಲಿವೆ.  ಆದರೆ ಶಂಕರರ ತತ್ವಗಳು ಜೀವನವನ್ನು ಸಾರ್ಥಕಮಾಡಿಕೊಳ್ಳಲು ಸಹಕಾರಿಯಾಗಲಿವೆ ಎಂದರು.

ಹಿಂದಿನ ಗುರು ಪರಂಪರೆ ಅತ್ಯಂತ ಶ್ರೀಮಂತವಾದದ್ದು. ಇದೇ ರಿವಾಜಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು  ನಮ್ಮ ವಿವೇಕವನ್ನು ಉದ್ದೀಪನಗೊಳಿಸಬೇಕು. ಉಪನಿಷತ್ತುಗಳಲ್ಲಿ ಪರಭ್ರಹ್ಮ ತತ್ವ ಅಡಗಿದೆ. ಲೌಕಿಕ ಪ್ರಪಂಚ ತಿಳಿದುಕೊಂಡಷ್ಟೂ ಅವೆಲ್ಲವೂ ಕೇವಲ ಜೀವನ ನಡೆಸಲು ಮಾತ್ರ ಸಾಧ್ಯ. ಶಂಕರರ ತತ್ವ, ಉಪದೇಶಗಳು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ಪ್ರತಿ ದಿನ ಇದನ್ನು ಮನನ ಮಾಡಿಕೊಳ್ಳಬೇಕು. ಶಂಕರರು ಅವತಾರ ಮಾಡಿದ್ದರಿಂದ ಹಿಂದೂ ಧರ್ಮ ಉಳಿದಿದೆ. ಧರ್ಮ ನಾಶ ಮಾಡಲು ನಿರಂತರ ಪ್ರಯತ್ನದ ನಡುವೆಯೂ ಧರ್ಮ ಸ್ಥಿರವಾಗಿಯೇ ಇದೆ. ಈ ತತ್ವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಂತಹ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದರು.

ಮಕ್ಕಳಿಗೆ ಇಂತಹ ಪರಂಪರೆ, ಚಿಂತನೆಗಳ ಬಗ್ಗೆ ತಿಳಿಸಬೇಕು. ಭಾರತ ನಿಜವಾಗಿಯೂ ವಿಶ್ವಗುರು ಆಗಲು ಶಂಕರರ ತತ್ವಗಳ ಮೂಲಕ ಸಾಗಬೇಕು. ಆಧುನಿಕ ವಿಜ್ಞಾನದ ಜೊತೆ ಬೇರ್ಪಡಿಸಲಾಗದ ಬಾಂಧವ್ಯ ಹೊಂದಿರುವುದು ಸತನಾತನ ಧರ್ಮವಾಗಿದೆ. ವೇದಾಂತ ಭಾರತಿ ಜೊತೆಗೂಡಿ ಶೃಂಗೇರಿ ಮಠ ರಚನಾತ್ಮಕ ಕಾರ್ಯಕ್ರಮ ನಡೆಸುತ್ತಿದೆ.  ಧಾರ್ಮಿಕ ಜಾಗೃತಿ ಬಿತ್ತುವ ಕೆಲಸ ಮುಂದುವರೆಯಬೇಕು ಎಂದರು.

ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ಪರಂ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ಪ್ರದರ್ಶನದ ಮಾದರಿ ಪ್ರತಿಯೊಬ್ಬ ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಲು ಪ್ರಯತ್ನಿಸಲಾಗುವುದು. ಯುವ ಸಮೂಹಕ್ಕೆ ದಕ್ಷಿಣಾಮೂರ್ತ್ಯಷ್ಟಕವನ್ನು ವಿಜ್ಞಾನದ ಸಾಧನಗಳ ಮೂಲಕ ತಲುಪಿಸಲು ವಿನೂತನ ಪ್ರಯತ್ನ ನಡೆಸಲಾಗಿದೆ ಎಂದರು.

ಜೀವನದಲ್ಲಿ ಒತ್ತಡ, ಸವಾಲು, ಬೇರೆ ಬೇರೆ ಸಮಸ್ಯೆಗಳಿರಬಹುದು. ಇದೆಲ್ಲವನ್ನೂ ಮೆಟ್ಟಿ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲು ಈ ಸ್ತ್ರೋತ್ರಗಳು ಅತಿ ಮುಖ್ಯ. ಬೆಂಗಳೂರು ನಗರದ 350ಕ್ಕೂ ಹೆಚ್ಚು ಕಾಲೇಜುಗಳು ಈ ಬಾರಿ ಸಮಾವೇಶದಲ್ಲಿ ಭಾಗಿಯಾಗಿವೆ. ಸಮಾಜದಲ್ಲಿ ರಚನಾತ್ಮಕ ಕೆಲಸವನ್ನು ನಿರಂತರವಾಗಿ ಮುಂದುವರೆಸುತ್ತೇವೆ ಎಂದರು.

ಯಡತೊರೆ ಮಠದ ಶ್ರೀ ಬ್ರಹ್ಞಾನಂದ ಭಾರತಿ ಸ್ವಾಮೀಜಿ, ವೇದಾಂತ ಭಾರತಿ ಟ್ರಸ್ಟಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು