LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂಬ ನೆಪವೊಡ್ಡಿ, 9 ಮತ್ತು 10ನೇ ತರಗತಿಗಳಿಗೆ ಪದವಿ ಪೂರ್ವ (ಪಿಯು) ಉಪನ್ಯಾಸಕರನ್ನು ನಿಯೋಜಿಸಲು ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ಆದೇಶ ಸಂಪೂರ್ಣವಾಗಿ ಅಸಮರ್ಥನೀಯ ಮತ್ತು ಏಕಪಕ್ಷೀಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಅವರು ಬಲವಾಗಿ ವಿರೋಧಿಸಿದ್ದು, ಕೂಡಲೇ ಆದೇಶವನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

​ಸಮಾಲೋಚನೆ ಇಲ್ಲದ ಏಕಪಕ್ಷೀಯ ತೀರ್ಮಾನ:
​ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಹಸ್ರಾರು ಉಪನ್ಯಾಸಕರ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವ ಇಂತಹ ಮಹತ್ವದ ನಿರ್ಧಾರವನ್ನು ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ತಗೆದುಕೊಂಡಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

​"ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಚರ್ಚಿಸದೇ, ಶಿಕ್ಷಣ ತಜ್ಞರು ಮತ್ತು ಇತರ ಹಿತಾಸಕ್ತ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ, ಸೂಕ್ತ ಅಧ್ಯಯನವನ್ನೂ ಮಾಡದೇ ಏಕಪಕ್ಷೀಯವಾಗಿ ಈ ಆದೇಶ ಪ್ರಕಟಿಸಿರುವುದು ಅಸಹನೀಯ. ಇದು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವೇ ಅಲ್ಲ" ಎಂದು ಅವರು ಆಪಾದಿಸಿದ್ದಾರೆ.

​ಎರಡೂ ಕಡೆ ಅರೆಬರೆ ಶಿಕ್ಷಣದ ಆತಂಕ:
​ಸರ್ಕಾರದ ಈ ನಿಯೋಜನೆ ಆದೇಶದಿಂದಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, "ಉಪನ್ಯಾಸಕರ ಗಮನವನ್ನು ಪ್ರೌಢಶಾಲೆಗಳತ್ತ ಹರಿಸಿದರೆ, ಇತ್ತ ಪಿಯುಸಿ ವಿದ್ಯಾರ್ಥಿಗಳಿಗೂ ನ್ಯಾಯ ಸಿಗುವುದಿಲ್ಲ, ಅತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಸರಿಯಾದ ಶಿಕ್ಷಣ ಸಿಗುವುದಿಲ್ಲ. ಅಂತಿಮವಾಗಿ ಎಲ್ಲರಿಗೂ ಅರೆಬರೆ ಶಿಕ್ಷಣ ನೀಡಿದಂತಾಗುತ್ತದೆ. ಇಂತಹ ಮೂರ್ಖ ಆದೇಶ ವಿದ್ಯಾರ್ಥಿ ಹಾಗೂ ಉಪನ್ಯಾಸಕ ವಿರೋಧಿಯಾಗಿದೆ" ಎಂದು ಟೀಕಿಸಿದ್ದಾರೆ.

​"ಶಿಕ್ಷಣ ಸಚಿವರೇ ಇಲ್ಲದ ಸರ್ಕಾರ!":
​ಇದೇ ವೇಳೆ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಲೇವಡಿ ಮಾಡಿರುವ ಬಿ.ವೈ. ವಿಜಯೇಂದ್ರ, "ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲದ ಸರ್ಕಾರ ಅಧಿಕಾರದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಲಾಖೆ ಇನ್ನೂ ಹೇಗೆ ಇಂತಹ ಗಂಭೀರ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾವೇರಿ ಕಿಚ್ಚು: ಸುಪ್ರೀಂ ತೀರ್ಪು ನೋಡಿ ಮುಂದಿನ ನಿರ್ಧಾರ, ಹೆಚ್‌ಡಿಕೆಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು!ಉಗ್ರರೂಪ ತಾಳಿದ ಕಾವೇರಿ ಕಿಚ್ಚು: ಹೆದ್ದಾರಿ ತಡೆದು ರೈತರ ಬೃಹತ್ ಪ್ರತಿಭಟನೆ!ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಸಾರಿಗೆ, ಶಾಲಾ-ಕಾಲೇಜು ಕಾರ್ಯನಿರ್ವಹಣೆ?ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ: DIG ನೇತೃತ್ವದಲ್ಲಿ ಆಂತರಿಕ ತನಿಖೆ!ಐಎಎಸ್ ಅಧಿಕಾರಿಗಳ ವರ್ಗಾವಣೆ: ಕೆಪಿಎಸ್‌ಸಿ ಪರೀಕ್ಷಾ ಜವಾಬ್ದಾರಿ ಕೆಇಎ 'ಎಚ್. ಪ್ರಸನ್ನ' ಹೆಗಲಿಗೆ!ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಹಿರಿಯ ನಾಯಕರ ರಹಸ್ಯ ಸಭೆ: ಡಾ. ಯತೀಂದ್ರ ಸಮಾಧಾನದ ಯತ್ನ!ಜೈಲಿನ ಮೇಲೆ ಸಿಸಿಬಿ ದಾಳಿ ನನ್ನದೇ ಆದೇಶ: ಪ್ರಿಯಾಂಕ್ ಖರ್ಗೆ!ಜೈಲಿನ ಮೇಲೆ ಸಿಸಿಬಿ ಹಠಾತ್ ದಾಳಿ: ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್ ಡ್ರೈವ್ ಪತ್ತೆ- FIR ದಾಖಲು!ನೂತನ ಸಚಿವರಿಗೆ ಖಾತೆ ಹಂಚಿಕೆ: ರಾಮಲಿಂಗಾರೆಡ್ಡಿ, ಮುನಿಯಪ್ಪ ಖಾತೆ ಬದಲಾವಣೆ–ಯಾರಿಗೆ ಯಾವ ಇಲಾಖೆ?ಯುಎಪಿಎ ಪ್ರಕರಣಗಳ ಸುದೀರ್ಘ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ