LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೊಸೈಟಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ನಿರ್ದೇಶಕರ ಚುನಾವಣೆಗೆ ಬಿಜೆಪಿ
ಜೆಡಿಎಸ್ (ಎನ್‌ಡಿಎ) ಮೈತ್ರಿ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಅಭ್ಯರ್ಥಿಗಳು ತೂಬಗೆರೆ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಬಳಿಕ ಮಿತ್ರಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಮೆರವಣಿಗೆಯೊಂದಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಹಕಾರ ಸಂಘವು ರೈತರ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿದ್ದು, ಪಾರದರ್ಶಕ ಆಡಳಿತ, ರೈತಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

'ಸಹಕಾರ ಸಂಘದ ಅಭಿವೃದ್ಧಿ, ರೈತರ ಹಿತಾಸಕ್ತಿ ಮತ್ತು ಉತ್ತಮ ಆಡಳಿತದ ಸಂಕಲ್ಪದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಮತದಾರರು ಬೆಂಬಲ ನೀಡುವ ವಿಶ್ವಾಸವಿದೆ' ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಎನ್‌ಡಿಎ ಅಭ್ಯರ್ಥಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರಿನ ನಿಸ್ವಾರ್ಥ ಸೇವಕ – ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಅವರ ದೂರದೃಷ್ಟಿಗೆ ಒಲಿದ ಜಲಭಾಗ್ಯಹಿರಿಯೂರು ಬರದ ನಾಡಿಗೆ ಜಲಸಂಜೀವಿನಿ: ಸಿಎಂ ಡಿ.ಕೆ ಶಿವಕುಮಾರ್ ಅವರ ಭರವಸೆಗೆ ಒಲಿದ 244 ಕೋಟಿಯ ಬೃಹತ್ ಜಲ ಯೋಜನೆ!ಕೋಟಿ ಕೋಟಿ ಅನುದಾನದ ಶಂಕುಸ್ಥಾಪನೆಗೆ 'ರಾಜಕಾಲುವೆ' ಕಂಟಕ: ಶೀಲೆಯಾಗದ ಚಿತ್ರದುರ್ಗದ ಹೈಟೆಕ್ ಬಸ್ ನಿಲ್ದಾಣದ ಕನಸು!ವರುಣನ ಕೃಪೆಗಾಗಿ ಇಪ್ಪೆಕಣಿವೆ ಭೂತರಾಯ ಸ್ವಾಮಿಗೆ ಕಾತ್ರಿಕೇನಹಳ್ಳಿ ರೈತರಿಂದ ಪೂಜೆಜಿಲ್ಲಾವಾರು ಜಿಡಿಪಿ ಪ್ರಗತಿಗೆ ವೇಗ: ನೀತಿ ಆಯೋಗದ ಸದಸ್ಯರೊಂದಿಗೆ ಸಿಎಂ ಸುದೀರ್ಘ ಚರ್ಚೆ– ಸಚಿವ ಪ್ರಿಯಾಂಕ್ ಖರ್ಗೆರಾಜ್ಯದ ಜಿಲ್ಲಾ ಜಿಡಿಪಿ ವೃದ್ಧಿಗೆ 'ಲೀಪ್' ಯೋಜನೆ: ಸಿಎಂ ಡಿ ಕೆ ಶಿವಕುಮಾರ್ ಜತೆ ನೀತಿ ಆಯೋಗದ ಸದಸ್ಯ ಕೆ.ವಿ. ರಾಜು ಚರ್ಚೆಕಾಂಗ್ರೆಸ್‌ನದ್ದು ಕೇವಲ 'ಕ್ಯಾಮೆರಾ ರಾಜಕಾರಣ', ಪ್ರಚಾರಕ್ಕಾಗಿ ಪ್ರತಿಭಟನೆ: ವಿಜಯೇಂದ್ರ ವಾಗ್ದಾಳಿಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಡಿ.ಕೆ. ಶಿವಕುಮಾರ್ಬೆಂಗ‌ಳೂರು ಟೆಕ್ ಸಮ್ಮಿಟ್ 2026: 'ಎಐ & ಬಿಯಾಂಡ್' ಥೀಮ್ ಅನಾವರಣಗೊಳಿಸಿದ ಡಿ.ಕೆ. ಶಿವಕುಮಾರ್ಕರಾರುಗಳಿಂದ ಶೇ. 75ರಷ್ಟು ಹೂಡಿಕೆ ಸಾಕಾರಗೊಳಿಸುವುದು ನಮ್ಮ ಗುರಿ – ಸಚಿವ ಎಂ.ಬಿ. ಪಾಟೀಲ್